ನಟ ನಂದಮೂರಿ ಬಾಲಕೃಷ್ಣ ಅಭಿನಯದ ‘ಅಖಂಡ 2’ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಿಕೆ ಮಾಡಲಾಗಿದೆ. ಅಂದುಕೊಂಡಂತೆ ಇಂದು (ಡಿಸೆಂಬರ್ 5) ಅಖಂಡ 2 ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಬೇಕಿತ್ತು. ಇನ್ನೇನು ಸಿನಿಮಾವನ್ನು ಕಣ್ತುಂಬಿಕೊಳ್ಳಬೇಕು ಎಂದು ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ.

‘ಅಖಂಡ 2’ ಸಿನಿಮಾ ಬಿಡುಗಡೆ ದಿನಾಂಕ ಮುಂದೂಡಿಕೆ ಮಾಡಿರುವ ಬಗ್ಗೆ ನಿರ್ಮಾಣ ಸಂಸ್ಥೆ 14 ರೀಲ್ಸ್ ಪ್ಲಸ್ ಮಾಹಿತಿ ನೀಡಿದೆ. ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಈ ಕುರಿತು ಹೀಗೆ ಬರೆದುಕೊಂಡಿದೆ. ‘ಅನಿವಾರ್ಯ ಕಾರಣಗಳಿಂದ ಅಖಂಡ 2 ಸಿನಿಮಾ ನಿಗದಿಯಂತೆ ಬಿಡುಗಡೆಯಾಗುವುದಿಲ್ಲ ಎಂದು ತಿಳಿಸಲು ನಾವು ತುಂಬಾ ವಿಷಾದಿಸುತ್ತೇವೆ. ಇದು ನಮಗೆ ನೋವಿನ ಕ್ಷಣವಾಗಿದೆ. ಮತ್ತು ಚಿತ್ರಕ್ಕಾಗಿ ಕಾಯುತ್ತಿರುವ ಪ್ರತಿಯೊಬ್ಬ ಅಭಿಮಾನಿ ಮತ್ತು ಸಿನಿ ಪ್ರೇಮಿಗೆ ಇದು ತರುವ ನಿರಾಶೆಯನ್ನು ನಾವು ನಿಜವಾಗಿಯೂ ಅರ್ಥಮಾಡಿಕೊಂಡಿದ್ದೇವೆ. ಈ ವಿಷಯವನ್ನು ಆದಷ್ಟು ಬೇಗ ಪರಿಹರಿಸಲು ಪ್ರಯತ್ನಿಸುತ್ತೇವೆ. ಈ ಬಗ್ಗೆ ನಾವು ಎಲ್ಲರಿಗೂ ಕ್ಷಮೆಯಾಚಿಸುತ್ತೇವೆ. ಶೀಘ್ರದಲ್ಲೇ ಸಿನಿಮಾ ಬಿಡುಗಡೆ ಬಗ್ಗೆ ನಾವು ಅಪ್ಡೇಟ್ ನೀಡುತ್ತೇವೆ’ ಎಂದು ಬರೆದುಕೊಂಡಿದ್ದಾರೆ.
.ಚಿಂತಾಮಣಿ | ‘ಅಖಂಡ–2’ ಟ್ರೇಲರ್ ಬಿಡುಗಡೆ: ನಟ ಬಾಲಕೃಷ್ಣ, ಶಿವರಾಜ್ ಕುಮಾರ್ ಭಾಗಿ.ಬಾಲಯ್ಯ ಪಕ್ಕದಲ್ಲಿ ನಿಂತುಕೊಂಡಿದ್ದ ಈ ಬಾಲಕ ಇಂದು ಕನ್ನಡದ ಜನಪ್ರಿಯ ನಿರೂಪಕ.
ತಮಿಳುನಾಡಿನಲ್ಲಿ ಕೇಸ್ ದಾಖಲು

'ಅಖಂಡ 2' ಬಿಡುಗಡೆಗೆ ಇನ್ನೇನು ಕೆಲವೇ ಗಂಟೆಗಳು ಇವೆ ಅನ್ನುವಾಗಲೇ ಬಾಲಕೃಷ್ಣ ಸಿನಿಮಾ ಬಿಡುಗಡೆಯನ್ನು ತಡೆಯುವಂತೆ ಮದ್ರಾಸ್ ಹೈಕೋರ್ಟ್ ಮೊರೆ ಹೋಗಿತ್ತು. ಇರೋಸ್ ಇಂಟರ್ನ್ಯಾಷನಲ್ ಮೀಡಿಯಾ ಲಿಮಿಟೆಡ್ ಮನವಿಯನ್ನು ಪರಿಗಣಿಸಿದ ಮದ್ರಾಸ್ ಹೈಕೋರ್ಟ್ನ ನ್ಯಾಯಾಧೀಶರಾದ ಎಸ್ಎಂ ಸುಬ್ರಮಣಿಯಂ ಹಾಗೂ ಸಿ ಕುಮಾರಪ್ಪನ್ ಸಿನಿಮಾ ಬಿಡುಗಡೆಗೆ ತಡೆಯಾಜ್ಞೆ ನೀಡಿದ್ದರು. ಹೀಗಾಗಿ ‘ಅಖಂಡ 2’ ಸಿನಿಮಾಗೆ ಸಂಕಷ್ಟ ಎದುರಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.