ಟಾಲಿವುಡ್ ಮಾಸ್ ಹೀರೊ ನಂದಮೂರಿ ಬಾಲಕೃಷ್ಣ ಅವರ ಪಕ್ಕದಲ್ಲಿ ನಿಂತುಕೊಂಡಿದ್ದ ಈ ಬಾಲಕ ಇಂದು ಚಂದನವನದಲ್ಲಿ ಜನಪ್ರಿಯ ನಿರೂಪಕರಾಗಿ ಮಿಂಚುತ್ತಿದ್ದಾರೆ. ಇವರು ಕನ್ನಡ ಕಿರುತೆಯಲ್ಲಿ ತಮ್ಮ ಅದ್ಭುತ ಮಾತುಗಾರಿಕೆಯ ಮೂಲಕ ಎಲ್ಲರ ಗಮನವನ್ನು ಸೆಳೆದಿರುವ ನಿರೂಪಕ. ಇವರು ಬೇರೆ ಯಾರು ಅಲ್ಲ, ನಿರೂಪಕ ಅಕುಲ್ ಬಾಲಾಜಿ.
.ತಪ್ಪುಗಳಾದಾಗ ಕ್ಷಮಿಸಿದ್ದೀರಿ: ಬಿಗ್ಬಾಸ್ ಮನೆಯಿಂದ ಹೊರಬಂದ ರಿಷಾ ಹೇಳಿದ್ದೇನು? .DKD: ಅಪ್ಪು ಹಾಡಿಗೆ ಗೃಹಿಣಿ ಬಿಂದಾಸ್ ಡ್ಯಾನ್ಸ್; ದಂಗಾದ ಶಿವಣ್ಣ.
ಕನ್ನಡ ಕಿರುತೆರೆಯಲ್ಲಿ ನಿರೂಪಕರಾಗಿರುವ ಅಕುಲ್ ಬಾಲಾಜಿ ಪರ ರಾಜ್ಯದವರಾದರೂ ಇಲ್ಲಿ ಬಂದು ಕನ್ನಡ ಕಲಿತು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಕನ್ನಡ, ತೆಲುಗು ಭಾಷೆಗಳಲ್ಲಿ ನಿರೂಪಕರಾಗಿ ಗುರುತಿಸಿಕೊಂಡಿರುವ ಅಕುಲ್ ಬಾಲಾಜಿ ಈಗ ನಂದಮೂರಿ ಬಾಲಕೃಷ್ಣ ಅವರ ಜೊತೆಗೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಹುಡುಗನಾಗಿದ್ದಾಗ ಅಕುಲ್ ಬಾಲಾಜಿ ಅವರು ನಟ ನಂದಮೂರಿ ಬಾಲಕೃಷ್ಣ ಜೊತೆಗೆ ಕ್ಲಿಕ್ಕಿಸಿಕೊಂಡ ಒಂದು ಸುಂದರವಾದ ನೆನಪನ್ನು ಮೆಲುಕು ಹಾಕಿದ್ದಾರೆ. ನಟ ಅಕುಲ್ ಬಾಲಾಜಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

ಅದರಲ್ಲಿ ‘ಬಾಲ್ಯದಿಂದಲೂ ನಾನು ಮೆಚ್ಚುತ್ತಿದ್ದ ಬಾಲಕೃಷ್ಣ ಅವರ ಸಮ್ಮುಖದಲ್ಲಿ ಇರುವುದು ಅದ್ಭುತ ಅನುಭವ. ಅಖಂಡ 2 ಟ್ರೇಲರ್ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಿದ್ದಾಗ, ನಾನು ಅದೇ ಬಾಲ್ಯದ ಉತ್ಸಾಹವನ್ನು ಮತ್ತೆ ಅನುಭವಿಸಿದೆ. ಕಾಲ ಬದಲಾಗುತ್ತದೆ. ನಾವು ಬೆಳೆಯುತ್ತೇವೆ. ಆದರೆ ಕೆಲವು ಕನಸುಗಳು ಶಾಶ್ವತವಾಗಿ ಪೂರ್ಣಗೊಳ್ಳುತ್ತವೆ. ಪುಟ್ಟ ಅಕುಲ್ ಆಗಿದ್ದಾಗ ಒಮ್ಮೆ ಅವರ ಪಕ್ಕದಲ್ಲಿ ನಿಂತಿದ್ದೆ. ಆದರೆ ಒಂದು ದಿನ ವೇದಿಕೆಯನ್ನು ಹಂಚಿಕೊಳ್ಳುತ್ತೇನೆ ಎಂದು ಎಂದಿಗೂ ಊಹಿಸಿರಲಿಲ್ಲ’ ಎಂದು ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.