ಶನಿವಾರ, ಮಾರ್ಚ್ 25, 2023
26 °C

ಬೆಲ್‌ಬಾಟಂ ಚಿತ್ರ ಬಿಡುಗಡೆ ದಿನಾಂಕ ಘೋಷಿಸಿದ ಅಕ್ಷಯ್ ಕುಮಾರ್

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Akshay Kumar Twitter Post Screengrab

ಬೆಂಗಳೂರು: ನಟ ಅಕ್ಷಯ್ ಕುಮಾರ್ ಅವರ ಬಹುನಿರೀಕ್ಷಿತ ಚಿತ್ರ ಬೆಲ್‌ಬಾಟಂ ಬಿಡುಗಡೆಗೆ ಕೊನೆಗೂ ಮುಹೂರ್ತ ಕೂಡಿಬಂದಿದೆ.

ಪತ್ತೇದಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಟ ಅಕ್ಷಯ್ ಕುಮಾರ್, ಆಗಸ್ಟ್ 19ರಂದು ಬೆಲ್‌ಬಾಟಂ ಚಿತ್ರ ಬಿಡುಗಡೆಯಾಗುತ್ತಿದೆ ಎಂದಿದ್ದಾರೆ.

ಜತೆಗೆ ಬೆಲ್‌ಬಾಟಂ ಚಿತ್ರ 3Dಯಲ್ಲಿ ಮೂಡಿಬರಲಿದೆ. ಅಕ್ಷಯ್ ಜತೆಗೆ, ಲಾರಾ ದತ್ತಾ, ವಾಣಿ ಕಪೂರ್ ಮತ್ತು ಹುಮಾ ಖುರೇಷಿ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ರಂಜಿತ್ ಎಂ. ತಿವಾರಿ ನಿರ್ದೇಶನದ ಬೆಲ್‌ಬಾಟಂ ಚಿತ್ರ ಮೊದಲು ಮೇ ತಿಂಗಳಿನಲ್ಲಿ ಬಿಡುಗಡೆ ಮಾಡಲಾಗುವುದು ಎನ್ನಲಾಗಿತ್ತಾದರೂ, ಮತ್ತೆ ಜುಲೈ 27ರಂದು ಬಿಡುಗಡೆಗೆ ನಿಗದಿಯಾಗಿತ್ತು. ಈಗ ಪರಿಷ್ಕೃತ ಬಿಡುಗಡೆ ದಿನಾಂಕ ಪ್ರಕಟಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು