ಮಂಗಳವಾರ, ಆಗಸ್ಟ್ 4, 2020
22 °C

ಅನುಪಮ್‌ ಖೇರ್ ತಾಯಿ, ಕುಟುಂಬ ಸದಸ್ಯರಿಗೆ ಕೊರೊನಾ ಸೋಂಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈನ ಬಹುದೊಡ್ಡ ಕೊಳೆಗೇರಿಗಳಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ ಎಂಬ ಶುಭ ಸುದ್ದಿಯಾಗುತ್ತಿರುವ ಈ  ಹೊತ್ತಿನಲ್ಲೇ, ಬಾಲಿವುಡ್‌ನ ನಟ ನಟಿಯರಿಗೆ ಮತ್ತು ಅವರ ಕುಟುಂಬದ ಸದಸ್ಯರಿಗೆ ಸೋಂಕು ತಗುಲಿರುವ ಸುದ್ದಿಗಳು ಕೇಳಿಬರುತ್ತಿವೆ.

ಶನಿವಾರ ಬಾಲಿವುಡ್‌ನ ಬಿಗ್‌ ಬಿ ಅಮಿತಾಭ್‌ ಬಚ್ಚನ್‌ ಮತ್ತು ಅಭಿಷೇಕ್‌ ಬಚ್ಚನ್‌ಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ನಂತರ ಅವರ ಕುಟುಂಬದ ಸದಸ್ಯರನ್ನೆಲ್ಲ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈಗ ಬಂದಿರುವ ಸುದ್ದಿ ಪ್ರಕಾರ ಅಮಿತಾಭ್ ಪತ್ನಿ ಜಯಾಬಚ್ಚನ್ ಅವರಿ ನೆಗೆಟಿವ್‌ ಬಂದಿದ್ದು, ಸೊಸೆ ಐಶ್ವರ್ಯ ರೈ, ಮೊಮ್ಮಗಳು ಆರಾಧ್ಯಾಗೆ ಸೋಂಕು ದೃಢಪಟ್ಟಿದೆ.

ಈಗ ಮತ್ತೊಬ್ಬ ಬಾಲಿವುಡ್‌ ನಟ ಅನುಪಮ್‌ ಖೇರ್‌ ಅವರ ತಾಯಿ ದುಲ್ಹಾರಿ ಖೇರ್‌ ಮತ್ತು ಸಹೋದರ ರಾಜು ಖೇರ್ ಮತ್ತು ಅವರ ಕುಟುಂಬದ ಸದಸ್ಯರಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ಈ ವಿಷಯವನ್ನು ಸ್ವತಃ ಅನುಪಮ್ ಖೇರ್ ಅವರೇ ತಮ್ಮ ಟ್ವಿಟರ್ ಖಾತೆ ಮೂಲಕ ದೃಢಪಡಿಸಿದ್ದಾರೆ.

ಟ್ವಿಟರ್‌ನಲ್ಲಿ ಈ ಕುರಿತು ಮಾಹಿತಿ ನೀಡುವ ವಿಡಿಯೊವೊಂದನ್ನು ಅನುಪಮ್‌ ಖೇರ್ ಪೋಸ್ಟ್‌ ಮಾಡಿದ್ದಾರೆ. ಆ ವಿಡಿಯೊದಲ್ಲಿ ‘ನನ್ನ ತಾಯಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ಅವರನ್ನು ಮುಂಬೈನ್ ಕೊಕಿಲಾಬೆನ್ ಆಸ್ಪತ್ರೆಗೆ ದಾಖಲಿಸಿದ್ದೇವೆ. ನನ್ನ ಅಣ್ಣ ಮತ್ತು ಅತ್ತಿಗೆ ಮತ್ತು ಕುಟುಂಬದವರಿಗೂ ಸೋಂಕಿರುವುದಾಗಿ ತಿಳಿದುಬಂದಿದೆ. ನಾನು ಪರೀಕ್ಷೆಗೊಳಪಟ್ಟೆ. ನನ್ನ ವರದಿ ನೆಗೆಟಿವ್ ಎಂದು ಬಂದಿದೆ. ಬೃಹನ್ ಮುಂಬೈ ಕಾರ್ಪೊರೇಷನ್‌ಗೆ ಮಾಹಿತಿ ನೀಡಲಾಗಿದೆ‘ ಎಂದು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿರುವ ವಿಡಿಯೊದಲ್ಲಿ ಅನುಪಮ್‌‌ ವಿವರಿಸಿದ್ದಾರೆ.

ತಾಯಿಯನ್ನು ಆಸ್ಪತ್ರೆಗೆ ದಾಖಲಿಸಿದಾಗ, ಖೇರ್‌ ಅವರ ಸಹೋದರ ರಾಜು ಖೇರ್‌ ಕುಟುಂಬಕ್ಕೆ ಕೊರೊನಾದ ಸೌಮ್ಯ ರೂಪದ ಲಕ್ಷಣಗಳು ಕಾಣಿಸಿಕೊಂಡವು. ಹಾಗಾಗಿ ಸಹೋದರ ರಾಜು ಮತ್ತು ಇತರೆ ಸದಸ್ಯರು ಮನೆಯಲ್ಲೇ ಸ್ವಯಂ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು