ಗುರುವಾರ , ಫೆಬ್ರವರಿ 27, 2020
19 °C

ಜೂಲನ್‌ ಗೋಸ್ವಾಮಿ ಬಯೋಪಿಕ್‌ನಲ್ಲಿ ಅನೂಷ್ಕಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರ ಮನ ಗೆದ್ದಿರುವ ನಟಿ ಅನೂಷ್ಕಾ ಶರ್ಮಾ ತಮ್ಮ ಮುಂದಿನ ಚಿತ್ರದಲ್ಲಿ ಕ್ರಿಕೆಟ್‌ ಆಟಗಾರ್ತಿಯಾಗಿ ಮಿಂಚಲಿದ್ದಾರೆ.

ಭಾರತೀಯ ಮಹಿಳಾ ಕ್ರಿಕೆಟ್‌ ತಂಡದ ನಾಯಕಿಯಾಗಿದ್ದ ಜೂಲನ್‌ ಗೋಸ್ವಾಮಿ ಅವರ ಬಯೋಪಿಕ್‌ ಅನ್ನು ತೆರೆ ಮೇಲೆ ತರಲು ಸಿದ್ಧತೆ ನಡೆಸಿದ್ದು, ಇದರಲ್ಲಿ ಜೂಲನ್‌ ಪಾತ್ರವನ್ನು ಅನೂಷ್ಕಾ ನಿರ್ವಹಿಸಲಿದ್ದಾರೆ.

ಈಗಾಗಲೇ ಚಿತ್ರದ ಚಿತ್ರೀಕರಣ ಕೂಡ ಆರಂಭವಾಗಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಅನೂಷ್ಕಾ ಹಾಗೂ ಜೂಲನ್‌ ಕ್ರಿಕೆಟ್‌ ಮೈದಾನದಲ್ಲಿ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.

‘ಜೀರೊ’ ಚಿತ್ರದ ಬಳಿಕ ಅನೂಷ್ಕಾ ಶರ್ಮಾ ನಟನೆಯಿಂದ ವಿರಾಮ ಪಡೆದುಕೊಂಡಿದ್ದರು. ಸಿನಿಮಾಗಳಲ್ಲಿ ತೊಡಗಿಸಿಕೊಂಡಿರದಿದ್ದರೂ ಪತಿ ವಿರಾಟ್‌ ಕೊಹ್ಲಿ ಜೊತೆಗಿನ ಸುತ್ತಾಟ, ಇನ್ನಿತರ ಕಾರಣಗಳಿಂದ ಸದಾ ಸುದ್ದಿಯಲ್ಲಿರುತ್ತಿದ್ದರು. ಈಗ ಬಯೋಪಿಕ್‌ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಸಹಿಯನ್ನೂ ಮಾಡಿದ್ದಾರೆ ಎಂಬ ಸುದ್ದಿಗಳು ವೈರಲ್‌ ಆಗಿವೆ.

ಅನೂಷ್ಕಾ ಚಿತ್ರೀಕರಣದಲ್ಲಿ ಭಾಗಿಯಾಗಿರುವ ಕೆಲ ಫೋಟೊಗಳನ್ನು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದರಲ್ಲಿ ಅನೂಷ್ಕಾ ಹಾಗೂ ಜೂಲನ್‌ ಇಬ್ಬರೂ ಕೋಲ್ಕತ್ತದ ಈಡನ್‌ ಗಾರ್ಡನ್ಸ್‌ನಲ್ಲಿ ಪರಸ್ಪರ ಮಾತುಕತೆ ನಡೆಸುತ್ತಿದ್ದಾರೆ. ಅನೂಷ್ಕಾ ಟೀಮ್‌ ಇಂಡಿಯಾದ ಹಳೆ ಜೆರ್ಸಿ ತೊಟ್ಟಿರುವುದು ಈ ಸುದ್ದಿಗಳನ್ನು ಖಚಿತಪಡಿಸುವಂತಿದೆ.

ಚಿತ್ರದ ಟೀಸರ್‌ ಶೂಟಿಂಗ್‌ ಸಂದರ್ಭದಲ್ಲಿ ಈ ಫೋಟೊಗಳನ್ನು ಕ್ಲಿಕ್ಕಿಸಲಾಗಿದೆ ಎನ್ನಲಾಗಿದೆ. ಈ ಬಯೋಪಿಕ್‌ ಸಿನಿಮಾವನ್ನು ‘ಪರಿ’ ಚಿತ್ರ ನಿರ್ದೇಶನ ಮಾಡಿದ ಪ್ರೊಸಿಟ್‌ ಜಾಯ್‌ ಅವರೇ ನಿರ್ದೇಶನ ಮಾಡುತ್ತಿದ್ದಾರೆ.   ಆದರೆ ಈ ಚಿತ್ರದ ಬಗ್ಗೆ ಅಧಿಕೃತ ಘೋಷಣೆಯನ್ನು ಯಾರೂ ಮಾಡಿಲ್ಲ.

 2020ರಲ್ಲಿ ಅನೇಕ ಬಯೋಪಿಕ್‌ ಸಿನಿಮಾಗಳು ತೆರೆಗೆ ಬರಲು ಸಿದ್ಧವಾಗಿವೆ. ಕಪಿಲ್‌ ದೇವ್‌ ಅವರ ಜೀವನಕತೆಯಾಧಾರಿತ 83, ಸೈನಾ ನೆಹ್ವಾಲ್‌, ಮಿಥಾಲಿ ರಾಜ್‌ ಅವರ ಬಯೋಪಿಕ್‌ ಸಿನಿಮಾಗಳ ಚಿತ್ರೀಕರಣ ನಡೆಯುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು