ಬೆಂಗಳೂರು:'ಯುವ ಸಾಮ್ರಾಟ್' ನಟ ಚಿರಂಜೀವಿ ಸರ್ಜಾ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನ ತ್ಯಾಗರಾಜನಗರದಲ್ಲಿ ಇರುವ ಅವರ ಮನೆಯ ಮುಂದೆ ಇಡಲಾಗಿದೆ.

ಚಿರು ಅವರ ಮೃತದೇಹವನ್ನು ಕೋವಿಡ್ 19 ಪರೀಕ್ಷೆಗೆ ಒಳಪಡಿಸಲಾಗಿತ್ತು. ಫಲಿತಾಂಶ ನೆಗೆಟಿವ್ ಬಂದಿದ್ದರಿಂದ ಅಂತಿಮ ದರ್ಶನಕ್ಕೆ ವೈದ್ಯರು ಅವಕಾಶ ಕಲ್ಪಿಸಿದ್ದರು.

ರಾತ್ರಿಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿ ತಮ್ಮ ನೆಚ್ಚಿನ ನಟನ ಅಂತಿಮ ದರ್ಶನ ಪಡೆದರು. ಸೋಮವಾರ ಬೆಳಿಗ್ಗೆ 6 ಗಂಟೆಯಿಂದಲೂ ಅಭಿಮಾನಿಗಳು ಅಂತಿಮ ದರ್ಶನ ಪಡೆಯಲು ಆಗಮಿಸಿದ್ದರು. ಅವರ ಸೋದರ ಮಾವ ಅರ್ಜುನ್ ಸರ್ಜಾ ಅವರು ಚಿರು ಅವರ ಪಾರ್ಥಿವ ಶರೀರದ ಮುಂದೆಯೇ ರಾತ್ರಿ ಇಡೀ ಕುಳಿತಿದ್ದರು.

ಮನೆಯ ಸುತ್ತಲೂ ದಕ್ಷಿಣ ವಿಭಾಗದ ಪೊಲೀಸರಿಂದ ಬಿಗಿಭದ್ರತೆ ಒದಗಿಸಲಾಗಿದೆ. 10 ಇನ್ ಸ್ಪೆಕ್ಟರ್ ಗಳು,15 ಸಬ್ ಇನ್ ಸ್ಪೆಕ್ಟರ್ ಗಳು ಮತ್ತು 150ಕ್ಕೂ ಹೆಚ್ಚು ಕಾನ್ ಸ್ಟೆಬಲ್ ಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಇದನ್ನೂ ಓದಿ:ಮಧ್ಯಾಹ್ನ 1 ಗಂಟೆವರೆಗೆ ಚಿರಂಜೀವಿ ಸರ್ಜಾ ಅಂತಿಮ ದರ್ಶನಕ್ಕೆ ಅವಕಾಶ

'ಚಿತ್ರರಂಗದ ಉದಯೋನ್ಮುಖನಟ ಚಿರಂಜೀವಿ ಸರ್ಜಾ ಅವರು ವಿಧಿವಶರಾದ ವಿಷಯ ಕೇಳಿ ತುಂಬ ನೋವಾಯಿತು. ಹಲವು ವರ್ಷಗಳು ಚಿತ್ರರಂಗದಲ್ಲಿ ನಾಯಕ ನಟರಾಗಿ ಕಲಾಸೇವೆ ಮಾಡಬೇಕಾಗಿದ್ದ ಯುವನಟನಿಗೆ ಆ ದೇವರು ಇಷ್ಟು ಬೇಗ ಸಾವು ಕೊಡಬಾರದಿತ್ತು. ಈ ಸಾವು ಅವರ ಕುಟುಂಬಕ್ಕೆ ಅಲ್ಲದೆ ಇಡೀ ಚಿತ್ರರಂಗಕ್ಕೆ ನೋವು ಕೊಟ್ಟಿದೆ. ಅವರ ಕುಟುಂಬಗಳಿಗೆ ಆ ದೇವರು ನೋವು ತಡೆದುಕೊಳ್ಳುವ ಶಕ್ತಿ ಕೊಡಲಿ. ಚಿರು ಆತ್ಮಕ್ಕೆ ಶಾಂತಿ ದೊರಕಲಿ’ ಎಂದುಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ರಾಮಕೃಷ್ಣ (ಪ್ರವೀಣ್) ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.