ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಮತ್ತು ಐಶ್ವರ್ಯ ರಾಜೇಶ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ 'ಮಫ್ತಿ ಪೊಲೀಸ್' ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಝೀ ಮ್ಯೂಸಿಕ್ ಸೌತ್ ಎಂಬ ಯ್ಯೂಟೂಬ್ ಚಾನೆಲ್ನಲ್ಲಿ ಕನ್ನಡ, ತಮಿಳು, ಮಲಯಾಳಂ, ತೆಲುಗು ಭಾಷೆಗಳಲ್ಲಿ ಮಫ್ತಿ ಪೊಲೀಸ್ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ.
.Mufti Police: ‘ಮಫ್ತಿ ಪೊಲೀಸ್’ ಆದ ಅರ್ಜುನ್ ಸರ್ಜಾ.‘ಡೆವಿಲ್’ ಸಿನಿಮಾದಲ್ಲಿ ಹುಲಿ ಕಾರ್ತಿಕ್; ಪೋಸ್ಟರ್ ಬಿಡುಗಡೆ ಮಾಡಿದ ಚಿತ್ರತಂಡ.
ಅದರಲ್ಲಿ ನಟ ಅರ್ಜುನ್ ಸರ್ಜಾ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದಾರೆ. ಮಫ್ತಿ ಪೊಲೀಸ್ ಚಿತ್ರವು ಕ್ರೈಂ ಥ್ರಿಲ್ಲರ್ ಕಥಾಹಂದರ ಹೊಂದಿದೆ. ನ್ಯಾಯವನ್ನು ನೀತಿಯಿಂದ ಮೀರಿಸಬಹುದು. ಆದರೆ ಅಂತಿಮ ಲೆಕ್ಕಾಚಾರದಲ್ಲಿ ನೀತಿ ಮಾತ್ರ ಗೆಲ್ಲುತ್ತದೆ ಎಂಬ ಎಳೆಯನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಇನ್ನು, ಮಫ್ತಿ ಪೊಲೀಸ್ ಸಿನಿಮಾವು ನವೆಂಬರ್ 21ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ದಿನೇಶ್ ಲೆಟ್ಚುಮನನ್ ನಿರ್ದೇಶನದ ಚೊಚ್ಚಲ ಚಿತ್ರ ಇದಾಗಿದ್ದು, ಜಿ.ಎಸ್. ಆರ್ಟ್ಸ್ ನಿರ್ಮಿಸಿರುವ ಈ ಚಿತ್ರವನ್ನು ನಿರ್ಮಾಪಕ ಜಿ.ಅರುಲ್ ಕುಮಾರ್ ಪ್ರಸ್ತುತಪಡಿಸಿದ್ದಾರೆ. ಈ ಸಿನಿಮಾದಲ್ಲಿ ಅರ್ಜುನ್ ಸರ್ಜಾ, ಐಶ್ವರ್ಯ ರಾಜೇಶ್, ಅಭಿರಾಮಿ, ರಾಮ್ಕುಮಾರ್, ಜಿ.ಕೆ. ರೆಡ್ಡಿ, ಪಿ.ಎಲ್. ತೇನಪ್ಪನ್, ಲೋಗು, ಬರಹಗಾರ-ನಟ ವೇಲಾ ರಾಮಮೂರ್ತಿ, ತಂಗದುರೈ, ಪ್ರಾಂಕ್ಸ್ಟರ್ ರಾಹುಲ್, ಒ.ಎ.ಕೆ. ಸುಂದರ್ ಸೇರಿದಂತೆ ಹಲವರು ನಟಿಸಿದ್ದಾರೆ. ಸರವಣನ್ ಅಭಿಮನ್ಯು ಛಾಯಾಗ್ರಹಣ ನಿರ್ವಹಿಸುತ್ತಿದ್ದು, ಆಶಿವಗನ್ ಸಂಗೀತ ನೀಡಿದ್ದಾರೆ. ಲಾರೆನ್ಸ್ ಕಿಶೋರ್ ಸಂಕಲನ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.