ಬುಧವಾರ, ಮೇ 18, 2022
24 °C

Twitter Review: ವಿಜಯ್ ನಟನೆಯ ಬೀಸ್ಟ್ ಸಿನಿಮಾ ನೋಡಿ ಡಿಸಾಸ್ಟರ್ ಎಂದ ಫ್ಯಾನ್ಸ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ತಮಿಳು ನಟ ದಳಪತಿ ವಿಜಯ್‌ -ಪೂಜಾ ಹೆಗ್ಡೆ ಅಭಿನಯದ ‘ಬೀಸ್ಟ್‌’ ಸಿನಿಮಾ ಇಂದು (ಬುಧವಾರ) ವಿಶ್ವದಾದ್ಯಂತ ತೆರೆಕಂಡಿದೆ. ಈಗಾಗಲೇ ಸಿನಿಮಾ ವೀಕ್ಷಿಸಿರುವ ಪ್ರೇಕ್ಷಕರು ಸಾಮಾಜಿಕ ಜಾಲತಾಣಗಳಲ್ಲಿ ಹಲವು ಬಗೆಯಲ್ಲಿ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. 

ಬೀಸ್ಟ್ ಟ್ವಿಟರ್ ವಿಮರ್ಶೆ ನೋಡಿದರೆ ಚಿತ್ರದ ಬಗೆಗಿನ ನಿರೀಕ್ಷೆ ಹುಸಿಯಾಗಿದೆ ಎಂದೇ ಹೇಳಲಾಗಿದೆ. ಕೆಲವರಿಗೆ ಸಿನಿಮಾ ಇಷ್ಟವಾಗಿಲ್ಲ ಎಂದಿದ್ದಾರೆ. ಹಾಗಾಗಿ #BeastDisaster ಎಂಬ ಹ್ಯಾಷ್‌ಟ್ಯಾಗ್ ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ. 

ಓದಿ...  ಕತ್ರಿನಾ ಗರ್ಭಿಣಿ ಎಂದ ಅಭಿಮಾನಿಗಳು: ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡ ಫೋಟೊ ವೈರಲ್

ವಿಜಯ್‌ ಅವರ ಅಪ್ಪಟ ಅಭಿಮಾನಿಗಳು ‘ಬೀಸ್ಟ್’ ಸಿನಿಮಾ ಅದ್ಭುತವಾಗಿದೆ ಎಂದು ಹೇಳಿಕೊಂಡಿದ್ದಾರೆ. 

ನಟ ಯಶ್‌ ಅಭಿನಯದ ‘ಕೆಜಿಎಫ್ ಚಾಪ್ಟರ್‌–2’ ಚಿತ್ರಕ್ಕೆ ಪೈಪೋಟಿ ನೀಡಬಹುದು ಎಂದುಕೊಂಡಿದ್ದ ‘ಬೀಸ್ಟ್‌’ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಣ ಗಳಿಕೆ ವಿಚಾರದಲ್ಲಿ ಈ ಚಿತ್ರ ಹಿನ್ನೆಡೆ ಅನುಭವಿಸಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 

ಓದಿ... ಅಮ್ಮನಾಗುವ ಖುಷಿಯಲ್ಲಿ ನಟಿ ಸೋನಮ್‌ ಕಪೂರ್‌: ಬೇಬಿ ಬಂಪ್ ಫೋಟೊ ವೈರಲ್ 

ಬೀಸ್ಟ್​ ಟ್ರೇಲರ್​ನಲ್ಲಿ ಚಿತ್ರಕಥೆ ಕುರಿತು ಮಾಹಿತಿ ಹಂಚಿಕೊಳ್ಳಲಾಗಿತ್ತು. ಭಯೋತ್ಪಾದಕರು ಮಾಲ್‌ವೊಂದನ್ನು ಹೈಜಾಕ್ ಮಾಡುವ ಮೂಲಕ ಅಲ್ಲಿನ ಜನರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿರುತ್ತಾರೆ. ಆಗ ನಾಯಕ (ವಿಜಯ್‌) ಮಾಲ್‌ನ ಒಳಗೇ ಇರುತ್ತಾರೆ. ಆತ ಎಲ್ಲರನ್ನೂ ಹೇಗೆ ಕಾಪಾಡುತ್ತಾನೆ ಎನ್ನುವುದು ಚಿತ್ರದ ಕಥಾಹಂದರವಾಗಿದೆ. 

 

‘ಬೀಸ್ಟ್’ ವಿಜಯ್ ಅವರ 65ನೇ ಚಿತ್ರವಾಗಿದೆ. 2021ರಲ್ಲಿ ಚಿತ್ರದ ಚಿತ್ರೀಕರಣ ಆರಂಭಿಸಲಾಗಿತ್ತು. ಆದರೆ, ಕೋವಿಡ್‌ ಕಾರಣದಿಂದಾಗಿ ಚಿತ್ರೀಕರಣವನ್ನು ನಿಲ್ಲಿಸಲಾಗಿತ್ತು. ಸನ್‌ ಪಿಕ್ಚರ್‌ ನಿರ್ಮಾಣದ ಈ ಚಿತ್ರಕ್ಕೆ ನೆಲ್ಸನ್‌ ದಿಲೀಪ್‌ಕುಮಾರ್ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.

ಅಭಿಮಾನಿಗಳು ‘ಬೀಸ್ಟ್’ ಮೊದಲಾರ್ಧಕ್ಕೆ ಮನಸೋತಿದ್ದಾರೆ. ಆದರೆ, ದ್ವಿತೀಯಾರ್ಧ ನೀರಸವಾಗಿದೆ ಎಂದು ಕೆಲವರು ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದಾರೆ. 

ಚಿತ್ರದಲ್ಲಿ ನಾಯಕಿ ಪೂಜಾ ಹೆಗ್ಡೆ ಅವರ ಪಾತ್ರಕ್ಕೆ ಪ್ರಾಮುಖ್ಯತೆ ನೀಡಿಲ್ಲ. ಖಡಕ್ ಆದ ಖಳನಾಯಕರಿಲ್ಲ. ಇದರಿಂದ ಚಿತ್ರಕ್ಕೆ ಹಿನ್ನಡೆಯಾಗಿದೆ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು