ನಮ್ಮ ಚಿತ್ರ ಈ ಪ್ರಶಸ್ತಿಯೂ ಸೇರಿದಂತೆ ಒಟ್ಟು ಐದು ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಒಂದು ರೀತಿ ಫಸ್ಟ್ ರ್‍ಯಾಂಕ್ ವಿದ್ಯಾರ್ಥಿಯಂತೆ. ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ, ಅರ್ಜುನ್ ಜನ್ಯ ಸಂಗೀತ ಎಲ್ಲವೂ ಯಶಸ್ಸಿಗೆ ಕಾರಣ. ಇದರಲ್ಲಿ ನನ್ನ ಕೆಲಸ ಬಹಳ ಕಡಿಮೆ. ಚಿತ್ರಕ್ಕಾಗಿ ಕೆಲಸ ಮಾಡಿದ ಎಲ್ಲ ತಂತ್ರಜ್ಞರಿಗೆ ಧನ್ಯವಾದಗಳು. ಈ ಚಿತ್ರ ಪ್ರಾರಂಭಿಸುವಾಗಲೇ ಕುಟುಂಬದವರೆಲ್ಲ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಬೇಕೆಂಬ ಪರಿಕಲ್ಪನೆಯೊಂದಿಗೆ ಪ್ರಾರಂಭಿಸಿದ್ದು. ಕಥೆ, ಸಂಗೀತ, ಛಾಯಾಚಿತ್ರಗ್ರಹಣ ಎಲ್ಲವೂ ಅದೇ ರೀತಿ. ಜನ ಬಂದು ಚಿತ್ರ ನೋಡಿ ಹರಸಿದ್ದಾರೆ. ಪ್ರಶಸ್ತಿಗಾಗಿ ಪ್ರಜಾವಾಣಿ ಬಳಗಕ್ಕೆ ಧನ್ಯವಾದಗಳು