ವರ್ಷದ ಅತ್ಯುತ್ತಮ ಸಾಧನೆ ಪ್ರಶಸ್ತಿಯನ್ನು ನಟ ಧ್ರುವ ಸರ್ಜಾ ಅವರಿಗೆ ಸಚಿವ ಶಿವರಾಜ್ ತಂಗಡಗಿ ನೀಡಿದರು. ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಇದ್ದಾರೆ
ಲ್ಲಾ ಕಾಲಘಟ್ಟದಲ್ಲೂ ಕಲಾಕಾರ ತಾವು ಬದುಕುತ್ತಿರುವ ಸಮಾಜಕ್ಕೆ ತಮ್ಮ ಮಾಧ್ಯಮದ ಮೂಲಕ ಏನನ್ನಾದರೂ ಹೇಳುತ್ತಿರುತ್ತಾರೆ. ಅದು ಅವರ ಜವಾಬ್ದಾರಿ. ಇತ್ತೀಚಿನ ದಿನಮಾನಗಳಲ್ಲಿ ತುಂಬಾ ಸೂಕ್ಷ್ಮವಾಗಿ ಕಥೆ ಹೇಳುವ ಪ್ರಯತ್ನವನ್ನು ಹೊಸಬರು ಮಾಡುತ್ತಿದ್ದಾರೆ. ಹೊಸ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಉದ್ಯಮ ಸಂಕಷ್ಟದಲ್ಲಿದ್ದರೂ ಕೂಡ ಹೊಸ ಪ್ರತಿಭೆಗಳ ಬಗ್ಗೆ ನನಗೆ ಭರವಸೆ ಇದೆ. ಪ್ರತಿಭೆಗಳಿಗೆ ಇಲ್ಲಿ ಬಡತನವಿಲ್ಲ. ಸಮಾಜ ಬದಲಾಗುತ್ತಿರುವ ವೇಗಕ್ಕೆ ತಕ್ಕ ಕಥೆ ಹೇಳುವಂಥ ಅನೇಕ ಹೊಸಬರು ಬರುತ್ತಿದ್ದಾರೆ. ಸೋಲುಗಳ ನಡುವೆ ಭರವಸೆಗಳು ಇವೆ. ಇಂತಹ ಭರವಸೆ ಮೂಡಿಸುವ ಪ್ರತಿಭೆಗಳನ್ನು ಗುರುತಿಸುವ ಉತ್ತೇಜಿಸುವ ಕೆಲಸವನ್ನು ಪ್ರಜಾವಾಣಿ ಮಾಡುತ್ತಿದೆ. ಪ್ರಶಸ್ತಿಗೆ ನಾಮನಿರ್ದೇಶನಗೊಂಡವರಿಗೆ ಪ್ರಶಸ್ತಿ ಪಡೆದವರಿಗೆ ಇದೊಂದು ಸಾರ್ಥಕವಾದ ಕ್ಷಣ.
- ‘ಹೊಸಬರ ಮೇಲೆ ಭರವಸೆ ಇದೆ’ ಎ –ನಾಗತಿಹಳ್ಳಿ ಚಂದ್ರಶೇಖರ ನಿರ್ದೇಶಕ.