ಹೈದರಾಬಾದ್: ಕನ್ನಡತಿ ರಶ್ಮಿಕಾ ಮಂದಣ್ಣ ಮತ್ತು ನಿತಿನ್ ನಟನೆಯ ತೆಲುಗಿನ 'ಭೀಷ್ಮ' ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಹೊಸ ಟ್ರೆಂಡ್ ಸೃಷ್ಟಿಸಿದೆ.

ಯುಟ್ಯೂಬ್ನಲ್ಲಿ ಬಿಡುಗಡೆಯಾದ ‘ಭೀಷ್ಮ’ ಟ್ರೇಲರ್ ಅನ್ನು 16 ಗಂಟೆಗಳಲ್ಲಿ ಸುಮಾರು 27ಲಕ್ಷಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. ಟ್ರೇಲರ್ನಲ್ಲಿ ನಿತಿನ್, ರಶ್ಮಿಕಾ ನಡುವಿನ ರೊಮ್ಯಾನ್ಸ್, ಕಾಮಿಡಿ ಕಚಗುಳಿ ಸೇರಿದಂತೆ ನಿತಿನ್ ಆ್ಯಕ್ಷನ್ ದೃಶ್ಯಗಳನ್ನು ನೋಡಬಹುದು. ಟ್ರೇಲರ್ ನೋಡಿದರೆ ಪಕ್ಕ ಫ್ಯಾಮಿಲಿ ಸಿನಿಮಾ ಎಂಬುದರಲ್ಲಿ ಎರಡು ಮಾತಿಲ್ಲ.

ಬಿಷ್ಮದ ಮತ್ತೊಂದು ವಿಶೇಷವೆಂದರೆ ನಟ ಅನಂತನಾಗ್ ನಟಿಸಿದ್ದಾರೆ. ಕೌಟುಂಬಿಕ ಹಾಗೂ ಕೃಷಿಯಕಥಾಹಂದರ ಇರುವ ಸಿನಿಮಾ ಕ್ಲಾಸ್ ಮತ್ತು ಮಾಸ್ ಪ್ರೇಕ್ಷಕರನ್ನು ರಂಜಿಸಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಈ ಚಿತ್ರದಲ್ಲಿ ನಿತಿನ್ ಸ್ವಲ್ಪ ಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಸ್ಯಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಎಂದು ನಿರ್ದೇಶಕ ವೆಂಕಿ ಕುಡುಮುಲ ಹೇಳಿದ್ದಾರೆ.

ಪಿಡಿವಿ ಪ್ರಸಾದ್ ಭೀಷ್ಮ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಮಹತಿ ಸ್ವರಾ ಸಾಗರ್ ಸಂಗೀತ ನೀಡಿದ್ದಾರೆ. ‘ಭೀಷ್ಮ‘ ಚಿತ್ರ ಫೆ.21 ರಂದು ಬಿಡುಗಡೆಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.