ಭಾನುವಾರ, ಮೇ 22, 2022
24 °C

ರಣಬೀರ್‌–ಆಲಿಯಾ ಈಗ ದಂಪತಿ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ರಣಬೀರ್‌ ಕಪೂರ್‌ ಮತ್ತು ಆಲಿಯಾ ಭಟ್‌ ಮುಖವಾಡ ಹಾಕಿರುವ ಗೊಂಬೆಗಳಿಗೆ ಕೋಲ್ಕತ್ತದಲ್ಲಿ ಮದುವೆ ನೆರವೇರಿಸಿದ ಅಭಿಮಾನಿಗಳು

ಮುಂಬೈ: ಬಾಲಿವುಡ್‌ನ ತಾರಾ ಜೋಡಿ ರಣಬೀರ್ ಕಪೂರ್‌ ಮತ್ತು ಆಲಿಯಾ ಭಟ್‌ ಮದುವೆ ಇಂದು ನೆರವೇರಿದೆ. ಬಾಂದ್ರಾದಲ್ಲಿರುವ ರಣಬೀರ್‌ ಅವರ 'ವಾಸ್ತು' ನಿವಾಸದಲ್ಲಿ ಕುಟುಂಬದ ಸದಸ್ಯರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದಾರೆ.

ರಣಬೀರ್‌–ಆಲಿಯಾ ಜೊತೆಯಾಗಿ ಓಡಾಟ ನಡೆಸಿದ್ದರ ಕುರಿತು ಹರಿದಾಡುತ್ತಿದ್ದ ಗುಸುಗುಸು ಮಾತುಗಳಿಗೆ ಈಗ ತೆರೆ ಬಿದ್ದಿದೆ. ಇಬ್ಬರೂ ಸ್ಟಾರ್‌ಗಳ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳ ಮೂಲಕ ಶುಭಕೋರುತ್ತಿದ್ದಾರೆ. ಸ್ಟಾರ್‌ ದಂಪತಿ ಇಂದು ರಾತ್ರಿ ಮಾಧ್ಯಮಗಳ ಮುಂದೆ ಕಾಣಿಸಿಕೊಳ್ಳುವ ಸಾಧ್ಯತೆ ಇರುವುದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.

ನೀತು ಕಪೂರ್, ರಿಧಿಮಾ ಕಪೂರ್‌ ಸಾಹನಿ, ಕರೀನಾ ಕಪೂರ್‌ ಖಾನ್‌, ಕರಿಷ್ಮಾ ಕಪೂರ್‌, ಮಹೇಶ್‌ ಭಟ್‌, ಸೋನಿ ರಾಜದಾನ್‌, ಶಹೀನ್‌ ಭಟ್‌ ಸೇರಿದಂತೆ ಕುಟುಂಬದ ಸದಸ್ಯರು ಮತ್ತು ಅತ್ಯಾಪ್ತರು ಮಾತ್ರ ಮದುವೆ ಸಮಾರಂಭದಲ್ಲಿ ಭಾಗಿಯಾದರು. ಮದುವೆ ಕಾರ್ಯಕ್ರಮ ಸಂಜೆ 5:15ಕ್ಕೆ ಪೂರ್ಣಗೊಂಡಿರುವುದಾಗಿ ತಿಳಿದು ಬಂದಿದೆ.

ಇದನ್ನೂ ಓದಿ–

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು