ನವದೆಹಲಿ: ಬಿಜೆಪಿ ಸಂಸದೆ ಹಾಗೂ ಬಾಲಿವುಡ್ ನಟಿ ಕಂಗನಾ ರನೌಟ್ ಅವರು ತಮ್ಮ ಕೆಫೆ 'ದಿ ಮೌಂಟೇನ್ ಸ್ಟೋರಿ' ಮನಾಲಿಯಲ್ಲಿ ಪ್ರೇಮಿಗಳ ದಿನದಂದು ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.

ಇನ್ಸ್ಟಾಗ್ರಾಂನಲ್ಲಿ ವಿಡಿಯೊ ಹಂಚಿಕೊಂಡಿರುವ ಅವರು, ಹಿಮಾಲಯದಲ್ಲಿ ಕೆಫೆ ತೆರೆಯಬೇಕೆಂಬುದು ಬಾಲ್ಯದ ಕನಸಾಗಿತ್ತು. ಅದೀಗ ನನಸಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಹಿಮಾಲಯ ತಪ್ಪಲಿನ ರಮ್ಯ ಸೌಂದರ್ಯ, ಸ್ಥಳೀಯ ಜೀವನಶೈಲಿ, ಗುಡ್ಡಗಾಡಿನ ವಿಹಂಗಮ ನೋಟ, ಕಂಗನಾ ಹಂಚಿಕೊಂಡಿರುವ ವಿಡಿಯೊದಲ್ಲಿ ಸೆರೆಯಾಗಿದೆ.

ಈ ಸುದ್ದಿ ತಿಳಿದು, ಅವರ ಅಭಿಮಾನಿಗಳ ಪುಳಕಗೊಂಡಿದ್ದಾರೆ. ಈ ಹಿಂದೆ ಸಂದರ್ಶನವೊಂದರಲ್ಲಿ ಕಂಗನಾ ಅವರು ಕೆಫೆ ತೆರೆಯಬೇಕೆಂಬ ಬಯಕೆ ವ್ಯಕ್ತಪಡಿಸಿದ್ದನ್ನು ಮೆಲುಕು ಹಾಕಿ, ಶುಭ ಹಾರೈಸಿದ್ದಾರೆ.

ಕಂಗನಾ ಅವರು 2013ರಲ್ಲಿ ಪಾಲ್ಗೊಂಡಿದ್ದ ಸಂದರ್ಶನದಲ್ಲಿ, 'ನಾನು ಪ್ರಪಂಚದ ಎಲ್ಲ ಕಡೆ ಆಹಾರ ಸವಿದಿದ್ದೇನೆ. ಅತ್ಯುತ್ತಮ ರೆಸಿಪಿಗಳನ್ನು ಇಟ್ಟುಕೊಂಡಿದ್ದೇನೆ. ಎಲ್ಲಿಯಾದರೂ, ಅತ್ಯಂತ ಸುಂದರ ಹಾಗೂ ಸಣ್ಣದೊಂದು ಕೆಫೆ ತೆರೆಯುವ ಬಯಕೆ ಹೊಂದಿದ್ದೇನೆ. ಆಹಾರಕ್ಕೂ ನನಗೂ ಚೆನ್ನಾಗಿ ಆಗಿಬರುತ್ತದೆ' ಎಂದು ಹೇಳಿದ್ದರು.

ಸಂದರ್ಶನದಲ್ಲಿ ಭಾಗವಹಿಸಿದ್ದ ದೀಪಿಕಾ ಪಡುಕೋಣೆ, 'ನಾನೇ ಮೊದಲ ಗ್ರಾಹಕಿ' ಎಂದು ನಕ್ಕಿದ್ದರು.

ಇದೀ ಆ ವಿಡಿಯೊವನ್ನು ತಮ್ಮ ಸ್ಟೋರಿಯಲ್ಲಿ ಹಾಕಿಕೊಂಡಿರುವ ಕಂಗನಾ, ದೀಪಿಕಾ ಪಡುಕೋಣೆಯವರನ್ನು ಉಲ್ಲೇಖಿಸಿ 'ನೀವೇ ಮೊದಲ ಗ್ರಾಹಕಿಯಾಗಬೇಕು' ಎಂದು ಪ್ರೀತಿಯಿಂದ ಆಹ್ವಾನಿಸಿದ್ದಾರೆ.

ರನೌತ್ ನಟನೆಯ ಬಹುನಿರೀಕ್ಷಿತ 'ಎಮರ್ಜೆನ್ಸಿ' ಸಿನಿಮಾ ಜನವರಿ 17ರಂದು ತೆರೆ ಕಂಡಿತ್ತು. ಇದು ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಅವರ ಜೀವನಾಧಾರಿತ ಸಿನಿಮಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.