ಭಾನುವಾರ, ಜೂನ್ 26, 2022
28 °C

ತಾಯ್ತನವ ಸಂಭ್ರಮಿಸಿದ ಬಾಲಿವುಡ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಅಮ್ಮಂದಿರ ದಿನದಂದು (ಮೇ 10) ಬಾಲಿವುಡ್‌ ಮಂದಿ ಭಾವನಾತ್ಮಕ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಮ್ಮಂದಿರ ದಿನದ ಬಗ್ಗೆ ಅಕ್ಷರಗಳಲ್ಲಿ ಬರೆದು ಮುಗಿಸಲು ಸಾಧ್ಯವಿಲ್ಲ. ಈ ಮಿತಿಯಲ್ಲೇ ತಮ್ಮ ತಾಯಿ; ಮಕ್ಕಳೊಂದಿಗೆ ಕಳೆದ ಕ್ಷಣಗಳ ಫೋಟೊ, ವಿಡಿಯೊಗಳನ್ನು ಹಂಚಿಕೊಂಡು ತಾಯ್ತನಕ್ಕೆ ಸಲಾಂ ಎಂದಿದ್ದಾರೆ. 

‘ನನ್ನ ಹೃದಯದ ಎರಡು ಭಾಗಗಳು’ ಎಂದು ತಮ್ಮ ಮಕ್ಕಳ ಪುಟ್ಟ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಾಕಿಕೊಂಡಿದ್ದಾರೆ ನಟಿ ಶಿಲ್ಪಾ ಶೆಟ್ಟಿ. ಕುಂದ್ರಾ ಕುಟುಂಬಕ್ಕೆ ಈ ವರ್ಷ ಜತೆಯಾದ ಮಗಳು ಶಮಿಶಾ ಜೊತೆ ಇರುವ ಫೋಟೊ ಹಾಗೂ ಮಗ ವಿಹಾನ್‌ ತಮಗೆ ಬರೆದಿರುವ ಪತ್ರವನ್ನು ಹಂಚಿಕೊಂಡಿದ್ದಾರೆ. 

ಅಮ್ಮನ ಅನುಭೂತಿಯೇ ಹಾಗೆ, ಇದ್ದಾಗ ಅದರ ಮೌಲ್ಯ ನಮಗೆ ತಿಳಿಯುವುದಿಲ್ಲ. ತಿಳಿದರೂ ವ್ಯಕ್ತಪಡಿಸುವ ಪ್ರಮೇಯವೂ ಬರಲ್ಲ. ಆ ತಾಯಿಗೆ ನಮಿಸುವುದಷ್ಟೆ ನಮ್ಮ ಭಾಗ್ಯ. ನಟಿ ಸಾರಾ ಅಲಿ ಖಾನ್‌ ‘ನನ್ನ ಸೃಷ್ಟಿಗೆ ಕಾರಣರಾದ ನಿಮಗೆ ಶರಣು’ ಎಂದಿದ್ದಾರೆ . ಅಜ್ಜಿ, ಅಮ್ಮ ಜೊತೆ ಇರುವ ತಮ್ಮ ಫೋಟೊವನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 

ಕರೀಷ್ಮಾ ಕಪೂರ್‌ ಹ್ಯಾಪಿ ‘ಮೆಂಟಲ್‌ವುಡ್‌’ ಎಂದು ಬರೆದುಕೊಂಡಿದ್ದಾರೆ. ‘ನಿಮ್ಮ ತಾಯಿಯನ್ನು ಗೌರವಿಸಿ, ಅವರ ಹೊಣೆಗಾರಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿ. ಎಲ್ಲ ಮೆಂಟಲ್‌ ಅಮ್ಮಂದಿರಿಗೆ ಶುಭಾಶಯ’ ಎಂದು ಬರೆದುಕೊಂದಿದ್ದಾರೆ. ದಿಟ್ಟ ಅಮ್ಮಂದಿರಿಗೆ ಶುಭಾಶಯ ಕೋರಿರುವ ನಟಿ ಕಲ್ಕಿ, ‘ಎಲ್ಲಾ ದಿಟ್ಟ ಮಮ್ಮ ಬೇರ್‌’ಗಳಿಗೆ ಅಮ್ಮಂದಿರ ದಿನದ ಶುಭಾಶಯ ಎಂದು ಬರೆದಿದ್ದಾರೆ. ತಮ್ಮ ಮಗಳೊಂದಿಗೆ ಇರುವ ಫೋಟೊವನ್ನು ಹಂಚಿಕೊಂಡಿದ್ದಾರೆ. 


ಮಗಳು ಸಫೊ ಜತೆ ಕಲ್ಕಿ ಕೊಯ್ಲಿನ್

ನಟಿ ಕರೀನಾ ಕಪೂರ್‌ ಖಾನ್ ಹಾಗೂ ತೈಮೂರ್‌ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್‌ ಸೆಟ್ಟರ್‌ ಆಗಿರುವ ಅಮ್ಮ– ಮಗ ಜೋಡಿ. ತಮ್ಮ ತುಂಟ ಮಗನೊಂದಿಗೆ ಇರುವ ಫೋಟೊವನ್ನು ಹಂಚಿಕೊಂಡಿದ್ದಾರೆ ಕರೀನಾ. ‘ಹೆಚ್ಚೇನು ಹೇಳುವುದಿಲ್ಲ, ಈ ಫೋಟೊವೇ ಎಲ್ಲ ಹೇಳುತ್ತದೆ’ ಎಂದು ಬರೆದುಕೊಂಡಿದ್ದಾರೆ.


ತೈಮೂರ್‌ ಜತೆ ಕರೀನಾ

ಕೆಲವರು ತಮ್ಮ ಮಕ್ಕಳು ಹಾಗೂ ತಮ್ಮ ತಾಯ್ತನದ ಬಗ್ಗೆ ಗೇಲಿ ಮಾಡಿಕೊಂಡರೆ. ಇನ್ನು ಕೆಲವರು ಭಾವನಾತ್ಮಕವಾಗಿ ಅಮ್ಮಂದಿರ ದಿನ ಬಗ್ಗೆ ಬರೆದುಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು