ಸೋಮವಾರ, ಅಕ್ಟೋಬರ್ 3, 2022
24 °C
ಬಾಲಿವುಡ್ ನಟಿ ತಾಪ್ಸಿ ಪನ್ನು ಸಿನಿಮಾ ‘ದೊಬಾರ‘ಗೆ ಬಾಯ್ಕಾಟ್ ಬೆದರಿಕೆ

ಲಾಲ್ ಸಿಂಗ್ ಆಯ್ತು, ತಾಪ್ಸಿ ಪನ್ನು ಸಿನಿಮಾಗೆ ಬಹಿಷ್ಕಾರದ ಭೀತಿ!

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಾಲಿವುಡ್‌ನ ಸಿನಿಮಾಗಳಿಗೆ ಒಂದೆಡೆ ಗಳಿಕೆಯಿಲ್ಲದ ಚಿಂತೆಯಾದರೆ, ಮತ್ತೊಂದೆಡೆ ಬಹಿಷ್ಕಾರದ ಬೆದರಿಕೆಯ ಕುರಿತು ಚಿಂತಿಸುವಂತಾಗಿದೆ.

ಅಮೀರ್ ಖಾನ್ ಅಭಿನಯದ ‘ಲಾಲ್ ಸಿಂಗ್ ಚಡ್ಡಾ‘ ಸಿನಿಮಾಗೆ ಬಹಿಷ್ಕಾರದ ಬಿಸಿ ತಟ್ಟಿದೆ. ಚಿತ್ರ ಬಿಡುಗಡೆಯಾಗಿ ಒಂದು ವಾರದಲ್ಲಿ ₹50 ಕೋಟಿ ಅಷ್ಟೇ ಗಳಿಕೆ ಕಂಡಿದೆ.

ಅದರ ಬೆನ್ನಲ್ಲೇ, ತಾಪ್ಸಿ ಪನ್ನು ಸಿನಿಮಾ ‘ದೊಬಾರ‘ಗೆ ಬಹಿಷ್ಕಾರದ ಬೆದರಿಕೆ ಬಂದಿದೆ.

ನಟಿ ತಾಪ್ಸಿ ಪನ್ನು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಜನರು ತಮ್ಮ ಸಿನಿಮಾ ನೋಡದಿದ್ದರೂ ಪರವಾಗಿಲ್ಲ ಎಂದು ಹೇಳಿದ್ದರು.

ಅಲ್ಲದೆ, ದೊಬಾರ ಸಿನಿಮಾ, 2018ರಲ್ಲಿ ಬಿಡುಗಡೆಯಾಗಿದ್ದ ಸ್ಪಾನಿಶ್ ಚಿತ್ರ ‘ಮಿರಾಜ್‌‘ನ ರಿಮೇಕ್ ಎನ್ನಲಾಗಿದೆ.

ಜತೆಗೆ, ಚಿತ್ರದ ಪ್ರಚಾರ ಸಂದರ್ಭದಲ್ಲಿ ಅನುರಾಗ್ ಕಶ್ಯಪ್ ಮತ್ತು ತಾಪ್ಸಿ ಪನ್ನು ನೀಡಿರುವ ಕೆಲವೊಂದು ಹೇಳಿಕೆ ಕೂಡ ವಿವಾದ ಸೃಷ್ಟಿಸಿದ್ದು, ಚಿತ್ರಕ್ಕೆ ಬಹಿಷ್ಕಾರದ ಬಿಸಿ ತಟ್ಟುವ ಸಾಧ್ಯತೆಯಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು