ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಿವುಡ್‌ನಲ್ಲಿ ಸ್ವಜನಪಕ್ಷಪಾತವಿಲ್ಲ, ಅಲ್ಲಿರುವುದು ಬೇರೆ: ನಟ ನವಾಜುದ್ದೀನ್

Last Updated 12 ಅಕ್ಟೋಬರ್ 2021, 13:48 IST
ಅಕ್ಷರ ಗಾತ್ರ

ಬೆಂಗಳೂರು: ‘ಬಾಲಿವುಡ್‌ನಲ್ಲಿ ಸ್ವಜನಪಕ್ಷಪಾತವಿಲ್ಲ. ಬದಲಿಗೆ ಅಲ್ಲಿರುವುದು ಜನಾಂಗೀಯ ತಾರತಮ್ಯ‘ ಎಂದು ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿಹೇಳಿದ್ದಾರೆ.

ಸುದ್ದಿ ಪೋರ್ಟಲ್ ಒಂದರ ಜೊತೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ‘ಬಾಲಿವುಡ್ ಇಂದು ಸ್ವಜನಪಕ್ಷಪಾತಕ್ಕಿಂತಲೂ ಜನಾಂಗೀಯ ತಾರತಮ್ಯದಿಂದ ಹೆಚ್ಚು ನರಳುತ್ತಿದೆ‘ ಎಂದು ಆರೋಪಿಸಿದ್ದಾರೆ.

ಕಳೆದ ವರ್ಷ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿ ಯಶಸ್ವಿ ಕಂಡ ಸುಧೀರ್ ಮಿಶ್ರಾ ನಿರ್ದೇಶನದ ‘ಸೀರಿಯಸ್ ಮೆನ್'ಸಿನಿಮಾದ ಕುರಿತಾದ ಸಂದರ್ಶನದಲ್ಲಿ ಸಿದ್ದಿಕಿಈ ಅಭಿಪ್ರಾಯ ಹೊರಹಾಕಿದ್ದಾರೆ.

‘ಆರಂಭದಲ್ಲಿ ನಾನು ಕೂಡಚಿತ್ರರಂಗದಲ್ಲಿ ಅನೇಕ ವರ್ಷ ಈ ಜನಾಂಗೀಯ ತಾರತಮ್ಯವನ್ನು ಅನುಭವಿಸಿದೆ. ಅದರಲ್ಲೂ ನಟಿಯರು ಇದರಿಂದ ಹೆಚ್ಚು ತೊಂದರೆಗೆ ಒಳಗಾಗಿದ್ದಾರೆ'ಎಂದು ಹೇಳಿದ್ದಾರೆ. ‘ಬಾಲಿವುಡ್‌ಗೆ ಕೇವಲ ಉತ್ತಮ ಚಿತ್ರಗಳನ್ನು ನೀಡುವ ಗುರಿ ಇರಬೇಕೆ ಹೊರತು, ಕೀಳುಮಟ್ಟದ ಅಭಿರುಚಿ ಸಲ್ಲದು'ಎಂದಿದ್ದಾರೆ.

ಸೋನಿ ಫಿಕ್ಚರ್ಸ್ ಅಡಿ ನಿರ್ಮಾಣವಾಗುತ್ತಿರುವಸಿದ್ದಿಕಿಅವರ 'ಅದ್ಭೂತ್' ಎಂಬ ಸಿನಿಮಾಇತ್ತೀಚೆಗೆ ಸೆಟ್ಟೆರಿದೆ. ಅದಲ್ಲದೇ ಅವರ'ಹೀರೋಪಂತಿ 2', 'ಸಾರಾರಾ', 'ಬೋಲೆ ಚೂಡಿಯಾ' ಸಿನಿಮಾಗಳು ಬಿಡುಗಡೆಯಾಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT