ಭಾನುವಾರ, ಜನವರಿ 17, 2021
26 °C

ಕೋಲ್ಕತ್ತ: ಚಿತ್ರೀಕರಣಕ್ಕೆ ಇಂಗ್ಲೆಂಡ್‌ನಿಂದ ಆಗಮಿಸಿದ್ದ ನಟಿಗೆ ಕೋವಿಡ್-19 ದೃಢ

ಪಿಟಿಐ Updated:

ಅಕ್ಷರ ಗಾತ್ರ : | |

 Banita Sandhu

ಕೋಲ್ಕತ್ತ: ಚಲನಚಿತ್ರವೊಂದರ ಚಿತ್ರೀಕರಣಕ್ಕಾಗಿ ನಗರದಲ್ಲಿದ್ದ ಬ್ರಿಟಿಷ್ ನಟಿ ಬನಿತಾ ಸಂಧು ಅವರಿಗೆ ಸೋಮವಾರ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ನಿರಾಕರಿಸಿದ ಕಾರಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

'ಕವಿತಾ & ತೆರೇಸಾ' ಚಿತ್ರದ ಚಿತ್ರೀಕರಣಕ್ಕಾಗಿ ಸಂಧು ಅವರು ಡಿಸೆಂಬರ್ 20ರಂದು ನಗರಕ್ಕೆ ಆಗಮಿಸಿದ್ದರು ಮತ್ತು ಇಂಗ್ಲೆಂಡ್‌ನಿಂದ ಬರುವಾಗ ರೂಪಾಂತರ ಕೊರೊನಾ ವೈರಸ್ ತಗುಲಿರುವುದು ದೃಢಪಟ್ಟಿದ್ದ ಯುವಕರೊಂದಿಗೇ ಅದೇ ವಿಮಾನದಲ್ಲಿ ಪ್ರಯಾಣಿಸಿದ್ದರು.

ಸೋಮವಾರ ಮಧ್ಯಾಹ್ನ ಆಕೆಗೆ ಕೋವಿಡ್-19 ತಗುಲಿರುವುದು ಪತ್ತೆಯಾಗಿದ್ದು, ರೂಪಾಂತರ ಕೊರೊನಾ ವೈರಸ್‌ ಸೋಂಕಿಗೆ ಒಳಗಾಗಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇಂಗ್ಲೆಂಡ್‌ನಿಂದ ಹಿಂದಿರುಗಿದವರನ್ನು ಇರಿಸಿಕೊಳ್ಳಲು ಸ್ಥಾಪಿಸಿರುವ ಬೆಲಿಯಾಘಾಟಾ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಗೆ 23 ವರ್ಷದ ಸಂಧು ಅವರನ್ನು ಕರೆದೊಯ್ಯಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಸರಿಯಾದ ಮೂಲಸೌಕರ್ಯಗಳಿಲ್ಲ ಎಂದು ಆರೋಪಿಸಿದ ಅವರು ಆಂಬುಲೆನ್ಸ್‌ನಿಂದ ಇಳಿಯಲು ನಿರಾಕರಿಸಿದರು.

ಹಿಂದಿ ಸಿನಿಮಾ 'ಅಕ್ಟೋಬರ್' ನಲ್ಲಿ ವರುಣ್ ಧವನ್ ಜೊತೆ ನಟಿಸಿದ್ದ ಸಂಧು ಅವರಿಗೆ ಆಸ್ಪತ್ರೆಯ ಹಿರಿಯ ವೈದ್ಯರು ಹಲವಾರು ಬಾರಿ ಸಲಹೆ ನೀಡಿದರೂ ಕೂಡ ಅವರ ಪ್ರಯತ್ನ ವ್ಯರ್ಥವಾಯಿತು.

'ಅಂತಿಮವಾಗಿ, ಆರೋಗ್ಯ ಇಲಾಖೆಯ ಅನುಮತಿಯೊಂದಿಗೆ ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು'. ಸಂಧು ಅವರನ್ನು ಅಲ್ಲಿ ಪ್ರತ್ಯೇಕ ಕ್ಯಾಬಿನ್‌ನಲ್ಲಿ ಇರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

'ನಟಿಗೆ ರೂಪಾಂತರ ಕೊರೊನಾ ವೈರಸ್ ಸೋಂಕು ತಗುಲಿದೆಯೇ ಇಲ್ಲವೇ ಎನ್ನುವುದನ್ನು ಪರೀಕ್ಷಿಸಲು ಆಕೆಯ ಮಾದರಿಗಳನ್ನು ಕಲ್ಯಾಣಿಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಬಯೋಮೆಡಿಕಲ್ ಜೀನೋಮಿಕ್ಸ್‌ಗೆ ಕಳುಹಿಸಲಿದ್ದೇವೆ. ಫಲಿತಾಂಶ ಲಭ್ಯವಾದ ಬಳಿಕ ಅಗತ್ಯವಾದ ನಿಯಮವನ್ನು ಅನುಸರಿಸುತ್ತೇವೆ' ಎಂದು ಅಧಿಕಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು