ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀತಿಯ ಪಯಣ ಸದಾ ಸ್ಮರಿಸಿಕೊಳ್ಳುವಂತಹದ್ದು: ನಟಿ ಸಮಂತಾ

Last Updated 2 ಫೆಬ್ರುವರಿ 2023, 8:53 IST
ಅಕ್ಷರ ಗಾತ್ರ

ಹೈದರಾಬಾದ್: ಟಾಲಿವುಡ್‌ ಬ್ಯೂಟಿ ಸಮಂತಾ ರುತ್ ಪ್ರಭು ತಮ್ಮ ಮುಂದಿನ ಚಿತ್ರ ’ಶಾಕುಂತಲಂ’ನ ಮತ್ತೊಂದು ಹಾಡು ಬಿಡುಗಡೆಗೊಂಡಿದೆ ಎಂದು ಇನ್‌ಸ್ಟಾಗ್ರಾಮ್‌ ಮೂಲಕ ಮಾಹಿತಿ ನೀಡಿದ್ದಾರೆ.

ಶಾಕುಂತಲಂ ಸಿನಿಮಾದ ಚಿತ್ರಗಳನ್ನು ಆಗಾಗ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುವ ಮೂಲಕ ಸಿನಿಮಾ ಕುರಿತ ಅಪ್‌ಡೇಟ್‌ಗಳನ್ನು ತಮ್ಮ ಅಭಿಮಾನಿಗಳಿಗೆ ಸಮಂತಾ ನೀಡುತ್ತಿರುತ್ತಾರೆ.

ಶ್ರೇತ ವರ್ಣದ ಉಡುಗೆಯಲ್ಲಿರುವ ಚಿತ್ರವನ್ನು ಇದೀಗ ಹಂಚಿಕೊಂಡಿದ್ದಾರೆ. ಗರ್ಭಿಣಿಯ ಪಾತ್ರದಲ್ಲಿ ಮುದ್ದಾಗಿ ಕಾಣಿಸಿಕೊಂಡಿರುವ ಈ ಚಿತ್ರಕ್ಕೆ 'ಪ್ರೀತಿಯ ಪಯಣ ಸದಾ ಸ್ಮರಿಸಿಕೊಳ್ಳುವಂತಹದ್ದು' ಎಂದು ಬರೆದುಕೊಂಡಿದ್ದಾರೆ.

ಇದಕ್ಕೆ ಸಮಂತಾ ಅಭಿಮಾನಿಗಳು ಸದಾ ನಾವು ನಿಮ್ಮ ಜೊತೆಯಲ್ಲಿದ್ದೇವೆ. ನೀವು ನಿಜವಾದ ಹೋರಾಟಗಾರ್ತಿ, ನಿಮ್ಮನ್ನು ಸದಾ ಪ್ರೀತಿಸುತ್ತೇವೆ ಎಂದು ಹೃದಯದ ಎಮೋಜಿಗಳನ್ನು ನೀಡಿ ಪ್ರತಿಕ್ರಿಯಿಸಿದ್ದಾರೆ.

ಪೌರಾಣಿಕ ಹಿನ್ನಲೆ ಹೊಂದಿರುವ ಶಾಕುಂತಲಂ ಚಿತ್ರದಲ್ಲಿ ನಟಿಸಿರುವ ಸಮಂತಾ, ಶ್ವೇತವರ್ಣದ ಉಡುಗೆಯಲ್ಲಿ ಮಿಂಚುತ್ತಿದ್ದಾರೆ. ಈ ಹಿಂದಿನ ಪೋಟೋಗಳಲ್ಲಿ ನಟಿ ಹೂವಿನ ಆಭರಣಗಳನ್ನು ಧರಿಸಿ ಕಾಣಿಸಿಕೊಂಡಿದ್ದಾರೆ. ಈ ದೃಶ್ಯಗಳು ಮನಮೋಹಕವಾಗಿ ಮೂಡಿಬಂದಿದೆ.

ಈ ಹಿಂದೆ ನಟಿ ಸಮಂತಾ ಮಯೋಸೈಟಿಸ್ ಕಾಯಿಲೆಗೆ ತುತ್ತಾಗಿದ್ದರು. ಈ ವಿಚಾರವಾಗಿ ಬಹಳ ನೊಂದಿದ್ದ ನಟಿ, ಕೆಲವರ ಕಮೆಂಟ್‌ಗಳಿಗೆ ಖಾರವಾಗಿಯೇ ಪ್ರತಿಕ್ರಿಯಿಸಿದ್ದರು. ತೆಲುಗು ನಟ ನಾಗ ಚೈತನ್ಯರವರಿಂದ ವಿಚ್ಛೇದನ ಪಡೆದ ಬಳಿಕ ಮಾನಸಿಕವಾಗಿ ಕುಗ್ಗಿದ್ದರು.

ಇದರ ನಡುವೆ ಸಾಲು ಸಾಲು ಚಿತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಯವ ಮೂಲಕ ಮತ್ತೆ ವೃತ್ತಿ ಜೀವನದಲ್ಲಿ ಕಾಮ್‌ ಬ್ಯಾಕ್ ಮಾಡಿದ್ದಾರೆ. ಶಾಕುಂತಲಂ ಚಿತ್ರ ಇದೇ ಫೆಬ್ರುವೆರಿ 17ಕ್ಕೆ ತೆರೆ ಕಾಣಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT