ಶನಿವಾರ, ಜುಲೈ 24, 2021
22 °C

ಯಶ್‌– ದಂಪತಿಯ ಕೊರೊನಾ ಜಾಗೃತಿ ಫೋಟೊ ವೈರಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

'ನಮ್ಮ ಹೋರಾಟ ಇನ್ನೂ ಮುಗಿದಿಲ್ಲ. ಇದು ಕಷ್ಟದ ಸಮಯ, ಬೇಗ ಕಳೆದು ಹೋಗುತ್ತದೆ. ಅಲ್ಲಿಯವರೆಗೆ ಸುರಕ್ಷತೆಗಾಗಿ ಹೊರಗಡೆ ಹೋದಾಗಲೆಲ್ಲ ಮಾಸ್ಕ್ ಹಾಕ್ಕೊಳ್ಳಿ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಿ..‘

ಇದು ರಾಕಿಂಗ್‌ಸ್ಟಾರ್ ಯಶ್‌ – ರಾಧಿಕಾ ಪಂಡಿತ್‌ ದಂಪತಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಕೊರೊನಾ ವಿರುದ್ಧ ಜಾಗೃತಿ ಮೂಡಿಸುವ ಪೋಸ್ಟ್‌. ಈ ಪೋಸ್ಟ್‌ ಜತೆಗೆ, ನಟ ಯಶ್, ಪತ್ನಿ ರಾಧಿಕಾ ಪಂಡಿತ್ ಮತ್ತು ಪುತ್ರಿ ಐರಾ ಮಾಸ್ಕ್ ಹಾಕಿಕೊಂಡಿರುವ ಫೋಟೊವೂ ಇದೆ. 

ಕೊರೊನಾ ಲಾಕ್‌ಡೌನ್‌ನಿಂದಾಗಿ ಮನೆಯಲ್ಲೇ ಕಾಲಕಳೆಯುತ್ತಿರುವ ಯಶ್‌ – ರಾಧಿಕಾ ದಂಪತಿ, ಹಿಂದಿಗಿಂತ ಹೆಚ್ಚು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಈ ಮೊದಲು ಮಕ್ಕಳು, ಕುಟುಂಬದವರೊಟ್ಟಿರುವ ಫೋಟೊಗಳನ್ನಷ್ಟೇ ಹಾಕುತ್ತಿದ್ದ ಈ ದಂಪತಿ, ಈಗ ಸಾಮಾಜಿಕ ಕಳಕಳಿ ಮೂಡಿಸುವುದಕ್ಕೂ ಮುಂದಾಗಿದ್ದಾರೆ. ಈ ಫೋಟೊ ಈಗ ಜಾಲತಾಣಗಳಲ್ಲಿ ವೈರಲ್ ಆಗಿದೆ.

ರಾಧಿಕಾ ಪಂಡಿತ್‌ ಈ ಹಿಂದೆಯೂ ತಮ್ಮ ಕುಟುಂಬುದ ಚಟುವಟಿಕೆಗಳನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುತ್ತಿದ್ದರು. ಮಗನಿಗೆ ಆರು ತಿಂಗಳು ತುಂಬಿದಾಗ ಫೋಟೊಶೂಟ್‌ ಮಾಡಿಸಿದ್ದನ್ನೂ ಹಂಚಿಕೊಂಡಿದ್ದರು. ಮಗಳು ಐರಾಗೆ 18 ತಿಂಗಳು ತುಂಬಿದಾಗ ತಮ್ಮನೊಂದಿಗೆ ಆಡುವ ವಿಡಿಯೊವನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು. 

ಲಾಕ್‌ಡೌನ್ ಸಡಿಲಗೊಂಡ ನಂತರ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಈ ಕಾರಣದಿಂದಲೇ ಸರ್ಕಾರ ಜನರಿಗೆ ಮುನ್ನೆಚ್ಚರಿಕೆ ವಹಿಸುವಂತೆ ಮನವಿ ಮಾಡುತ್ತಿದೆ. ಈ ಕೆಲಸಕ್ಕೆ ರಾಕಿಂಗ್ ದಂಪತಿ ಸಹ ಕೈ ಜೋಡಿಸುವ ಜತೆಗೆ ತಮ್ಮ  ಮಾಸ್ಕ್‌ ತೊಟ್ಟು, ಸುರಕ್ಷತೆ ಇರವಂತೆ ತಮ್ಮ ಅಭಿಮಾನಿಗಳಿಗೂ ಮನವಿ ಮಾಡುತ್ತಿದ್ದಾರೆ.  

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು