ಗುರುವಾರ , ಮಾರ್ಚ್ 23, 2023
23 °C

ಕ್ರಿಕೆಟಿಗ ಕೆ.ಎಲ್. ರಾಹುಲ್‌, ಅಥಿಯಾ ಶೆಟ್ಟಿ ಇಂದು ದಾಂಪತ್ಯ ಜೀವನಕ್ಕೆ

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ಮುಂಬೈ: ಕ್ರಿಕೆಟಿಗ ಕೆ.ಎಲ್ ರಾಹುಲ್ ಅವರು ತಮ್ಮ ಗೆಳತಿ ಆಥಿಯಾ ಶೆಟ್ಟಿ ಅವರೊಂದಿಗೆ ಖಂಡಾಲಾದಲ್ಲಿ ಇಂದು (ಜನವರಿ 23) ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ

ಖಂಡಾಲಾದಲ್ಲಿರುವ ಬಾಲಿವುಡ್ ನಟ ಸುನಿಲ್ ಶೆಟ್ಟಿ ಅವರ ಜಹಾನ್ ಫಾರ್ಮ್‌ಹೌಸ್‌ನಲ್ಲಿ ರಾಹುಲ್, ಅಥಿಯಾ ಶೆಟ್ಟಿಯನ್ನು ವರಿಸಲಿದ್ದಾರೆ. ವಿವಾಹದ ತಯಾರಿ ಭರದಿಂದ ಸಾಗುತ್ತಿದೆ.

ಈ ಜೋಡಿ ನಾಲ್ಕು ವರ್ಷಗಳಿಂದ ಡೇಟಿಂಗ್‌ ನಡೆಸಿತ್ತು. ಅಥಿಯಾ ಶೆಟ್ಟಿ ಜೊತೆಗಿನ ಚಿತ್ರವೊಂದನ್ನು ಹೊಸ ವರ್ಷದ ಸಂದರ್ಭದಲ್ಲಿ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದ ರಾಹುಲ್‌, ತಮ್ಮ ಪ್ರೀತಿಯನ್ನು ಅಧಿಕೃತವಾಗಿ ಘೋಷಿಸಿದ್ದರು.
ಇವರಿಬ್ಬರ ವಿವಾಹಪೂರ್ವ ತಯಾರಿ ಜನವರಿ 21ರಿಂದಲೂ ನಡೆಯುತ್ತಿವೆ. 22ರಂದು ಮಹೆಂದಿ ಹಾಗೂ ಸಂಗೀತಾ ಕಾರ್ಯಕ್ರಮಗಳು ಜರುಗಿವೆ. ಆರಕ್ಷತೆಯ ಸಮಾರಂಭವನ್ನು 2023ರ ಐಪಿಎಲ್ ನಂತರ ದೊಡ್ದ ಮಟ್ಟದಲ್ಲಿ ನಡೆಸಲಾಗುವುದು ಎಂದು ಅಧಿಕೃತ ಮೂಲಗಳು ತಿಳಿಸಿವೆ.  

ಬಾಲಿವುಡ್ ಖ್ಯಾತ ನಟ ನಟಿಯರು ಸೇರಿದಂತೆ ಭಾರತೀಯ ಆಟಗಾರರಾದ ಎಂ.ಎಸ್ ಧೋನಿ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಕುಟುಂಬದೊಂದಿಗೆ ಪಾಲ್ಗೊಳ್ಳಲಿದ್ದಾರೆ.  ಬಾಲಿವುಡ್‌ನ ಪ್ರಮುಖ ಸೆಲೆಬ್ರಿಟಿ ಸ್ಟೈಲಿಸ್ಟ್ ಆ್ಯಮಿ ಪಟೇಲ್, ಅಥಿಯಾ ಶೆಟ್ಟಿ ಮತ್ತು ಕೆ.ಎಲ್ ರಾಹುಲ್‌ರವರನ್ನು ಸಜ್ಜುಗೊಳಿಸಲಿದ್ದಾರೆ.

ಈ ಹಿಂದೆ ಸಾಮಾಜಿಕ ಮಾಧ್ಯಮಗಳಲ್ಲಿ ಕೆ.ಎಲ್‌ ರಾಹುಲ್ ಹಾಗೂ ಅಥಿಯಾ ಶೆಟ್ಟಿ ಮದುವೆ ಕುರಿತು ಭಾರೀ ಚರ್ಚೆಗಳು ನಡೆದಿದ್ದವು, ಈಗ ಆದಕ್ಕೆಲ್ಲಾ ತೆರೆ ಬಿದ್ದಂತಾಗಿದೆ. 

ಅಥಿಯಾ ಶೆಟ್ಟಿ ಬಾಲಿವುಡ್ ಖ್ಯಾತ ನಟ ಸುನೀಲ್ ಶೆಟ್ಟಿ ಮಗಳು. ಅಥಿಯಾ ಮಾಡೆಲ್, ನಟಿ ಹಾಗೂ ಫ್ಯಾಷನ್ ಡಿಸೈನರ್‌ ಆಗಿದ್ದಾರೆ.

ಇದನ್ನು ಓದಿ: 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು