1935ರ ಡಿ.9ರಂದು ಪಂಜಾಬ್‌ನ ನಸರಾಲಿ ಜಿಲ್ಲೆಯಲ್ಲಿ ಧರ್ಮೇಂಧ್ರ ಅವರು ಜನಿಸಿದ್ದರು.
ADVERTISEMENT
1960ರಲ್ಲಿ ದಿಲ್ ಭೀ ತೇರಾ ಹಮ್ ಭೀ ತೇರಾ ಚಿತ್ರದ ಮೂಲಕ ಸಿನಿ ಪಯಣ ಆರಂಭಿಸಿದ್ದರು.
1966ರಲ್ಲಿ ತೆರೆಕಂಡ ‘ಫೂಲ್ ಔರ್ ಪತ್ತರ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೊಸ ಅಲೆ ಸೃಷ್ಟಿಸಿತ್ತು.
1954ರಲ್ಲಿ 19 ವರ್ಷದವರಾಗಿದ್ದಾಗ ಪ್ರಕಾಶ್ ಕೌರ್ ಅವರನ್ನು ಧರ್ಮೇಂದ್ರ ಮದುವೆಯಾಗಿದ್ದರು. ಪ್ರಕಾಶ್ ಮತ್ತು ಧರ್ಮೇಂದ್ರ ಅವರಿಗೆ ನಾಲ್ವರು ಮಕ್ಕಳು.
1964ರಲ್ಲಿ ‘ಆಯೇ ಮಿಲಾನ್ ಕಿ ಬೆಲಾ’ ಚಿತ್ರದಲ್ಲಿ ರಾಜೇಂದ್ರ ಕುಮಾರ್ ಮತ್ತು ಸೈರಾ ಬಾನು ಜತೆ ತೆರೆ ಹಂಚಿಕೊಂಡಿದ್ದರು.
ತಮ್ಮದೇ ಆದ ನಿರ್ಮಾಣ ಸಂಸ್ಥೆಯನ್ನೂ ಸ್ಥಾಪಿಸಿದ್ದ ಧರ್ಮೇಂದ್ರ ತಮ್ಮ ಪುತ್ರರಾದ ಸನ್ನಿ ದೇವಲ್ ಮತ್ತು ಬಾಬಿ ದೇವಲ್ ಅವರನ್ನು ಸಿನಿರಂಗಕ್ಕೆ ಪರಿಚಯಿಸಿದರು.
ಅಮಿತಾಭ್ ಬಚ್ಚನ್ ಜತೆ ‘ಚುಪ್ಕೆ ಚುಪ್ಕೆ‘, ‘ಶೋಲೆ’ಯಲ್ಲಿ ತೆರೆ ಹಂಚಿಕೊಂಡಿದ್ದರು.
1970ರಲ್ಲಿ ಹೇಮಾ ಮಾಲಿನ ಜತೆ ಕಾಣಿಸಿಕೊಂಡ ‘ತುಮ್ ಹಸೀನಾ ಮೇ ಜವಾನ್’ ಚಿತ್ರ ಹಾಗೂ ಕ್ರೈಮ್ ಡ್ರಾಮಾ ‘ಜೀವನ್ ಮೃತ್ಯು’ ಭರ್ಜರಿ ಯಶಸ್ಸು ಕಂಡಿತ್ತು.
1980ರಲ್ಲಿ ಹೇಮಾ ಮಾಲಿನಿಯವರನ್ನು ಧರ್ಮೇಂದ್ರ ವರಿಸಿದ್ದರು. ವರದಿಗಳ ಪ್ರಕಾರ, ಧರ್ಮೇಂದ್ರ ಮೊದಲ ಪತ್ನಿಗೆ ವಿಚ್ಛೇದನ ನೀಡದೆ ಹೇಮಾ ಮಾಲಿನಿಯವರನ್ನು ಮದುವೆಯಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದರು.
ಸಿನಿಮಾ ಕ್ಷೇತ್ರಕ್ಕೆ ಧರ್ಮೇಂದ್ರ ಅವರ ಕೊಡುಗೆಯನ್ನು ಪರಿಗಣಿಸಿ ಭಾರತ ಸರ್ಕಾರ 2012ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು.