‘ಧೀರ ಭಗತ್ ರಾಯ್’ ಚಿತ್ರೀಕರಣ ಪೂರ್ಣ: ಫ್ರೆಬ್ರುವರಿಯಲ್ಲಿ ಟ್ರೇಲರ್ ರಿಲೀಸ್

ರಾಜಕೀಯ ಅಧಿಕಾರಕ್ಕಾಗಿ ನಡೆಯುವ ಹೋರಾಟ ಕಥೆ ‘ಧೀರ ಭಗತ್ ರಾಯ್’. ಕರ್ಣನ್ ಎಸ್. ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ರಾಜಕೀಯ ಕಥಾವಸ್ತು ಹೊಂದಿರುವ ಚಿತ್ರವಿದು.
‘ನಮ್ಮ ನೆಲಮೂಲದ ಕಥೆ ಇದು. ಇದರಲ್ಲಿ ಭೂ ಸುಧಾರಣೆ ಕಾಯ್ದೆ ಜೊತೆಗೆ ಪ್ರಿವೆನ್‌ಶನ್ ಆಫ್ ಎಸ್ಸಿಎಸ್‌ಟಿ ಅಟ್ರಾಸಿಟಿ ಆ್ಯಕ್ಟ್ 1989 ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದೇನೆ. ಇದು ಸಾಕಷ್ಟು ಪರಿಣಾಮ ಬೀರಲಿದೆ. ಸದ್ಯ ನ್ಯಾಯಾಲಯದ ದೃಶ್ಯ ಚಿತ್ರೀಕರಣ ನಡೆದಿದೆ’ ಎಂದರು ನಿರ್ದೇಶಕ ಕರ್ಣನ್ ಎಸ್.
ರಂಗಭೂಮಿ ಪ್ರತಿಭೆ ರಾಕೇಶ್ ದಳವಾಯಿ ಮತ್ತು ನಾಯಕಿಯಾಗಿ ಸುಚರಿತಾ ಸಹಾಯರಾಜ್ ನಟಿಸುತ್ತಿದ್ದಾರೆ. ರಾಕೇಶ್ ಅವರದ್ದು ವಕೀಲರ ಪಾತ್ರ. ಫೆಬ್ರುವರಿಯಲ್ಲಿ ಆಡಿಯೋ ಹಾಗೂ ಟ್ರೇಲರ್ ಬಿಡುಗಡೆ ನಡೆಯಲಿದೆ. ಮಾರ್ಚ್‌ನಲ್ಲಿ ಚಿತ್ರ ತೆರೆಗೆ ಬರಲಿದೆ ಎಂದರು ಅವರು.
ಶರತ್ ಲೋಹಿತಾಶ್ವ ಖಳನಟನ ಪಾತ್ರಕ್ಕೆ ಬಣ್ಣಹಚ್ಚಿದ್ದಾರೆ. ಪ್ರವೀಣ್ ಹಗಡೂರು, ಮಠ ಕೊಪ್ಪಳ, ಸುಧೀರ್ ಕುಮಾರ್ ಮುರೊಳ್ಳಿ, ಶಶಿಕುಮಾರ್, ಫಾರೂಕ್ ಅಹ್ಮದ್, ಚಂದ್ರಿಕಾ ಗೌಡ, ನಯನ, ಸಿದ್ದಾರ್ಥ್ ಗೋವಿಂದ್, ಅನಿಲ್ ಹೊಸಕೊಪ್ಪ, ಪ್ರೊಫೇಸರ್ ಹರಿರಾಮ್, ಪಿ.ಮೂರ್ತಿ, ಹೆಮಾನುಷ್ ಗೌಡ, ರಮೇಶ್ ಕುಮಾರ್, ಸಂದೇಶ್ ಚಿತ್ರದ ತಾರಾಬಳಗದಲ್ಲಿದ್ದಾರೆ. ಶ್ರೀ ಓಂ ಸಿನಿ ಎಂಟಟೈನರ್ಸ್ ಹಾಗೂ ವೈಟ್ ಲೋಟಸ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ನಿರ್ಮಾಣದಲ್ಲಿ ಸಿನಿಮಾ ಮೂಡಿ ಬರುತ್ತಿದೆ. ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ, ಎಂ.ಸೆಲ್ವಂ ಜಾನ್ ಛಾಯಾಗ್ರಹಣ, ವಿಶ್ವ ಎನ್.ಎಂ ಸಂಕಲನ ಚಿತ್ರಕ್ಕಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.