‘ಜಂಟಲ್ಮ್ಯಾನ್’, ‘ಗುರುಶಿಷ್ಯರು’ ಚಿತ್ರಗಳ ನಿರ್ದೇಶಕ ಹಾಗೂ ‘ಕಾಟೇರ’ ಸಿನಿಮಾದ ಕಥೆಗಾರ ಜಡೇಶ ಕೆ. ಹಂಪಿ ತಮ್ಮ ನಿರ್ದೇಶನದ ಮೂರನೇ ಸಿನಿಮಾವನ್ನು ತೆರೆಗೆ ತರುವ ತಯಾರಿಯಲ್ಲಿದ್ದಾರೆ. ‘ದುನಿಯಾ’ ವಿಜಯ್ ನಟನೆಯ 29ನೇ ಸಿನಿಮಾ ‘ಲ್ಯಾಂಡ್ಲಾರ್ಡ್’ನ ಮಾತಿನ ಭಾಗದ ಚಿತ್ರೀಕರಣ ಪೂರ್ಣಗೊಂಡಿದ್ದು, ಮೂರು ಹಾಡುಗಳ ಶೂಟಿಂಗ್ ಉಳಿದಿದೆ. ಇವೆಲ್ಲವನ್ನೂ ಶೀಘ್ರದಲ್ಲೇ ಪೂರ್ಣಗೊಳಿಸಿ ಸೆಪ್ಟೆಂಬರ್ ಮಾಸಾಂತ್ಯದಲ್ಲಿ ಸಿನಿಮಾವನ್ನು ತೆರೆಗೆ ತರಲು ಜಡೇಶ್ ನಿರ್ಧರಿಸಿದ್ದಾರೆ. ಇದೇ ಅವಧಿಯನ್ನು ಆಯ್ಕೆ ಮಾಡಿಕೊಳ್ಳಲೂ ಒಂದು ವಿಚಿತ್ರ ಕಾರಣವನ್ನೂ ನೀಡಿದ್ದಾರೆ. ಅದೇನದು ಎಂಬುವುದನ್ನು ಜಡೇಶ್ ಅವರ ಮಾತಿನಲ್ಲೇ ತಿಳಿಯಿರಿ...

‘ಲ್ಯಾಂಡ್ಲಾರ್ಡ್ ಸಿನಿಮಾದ ಚಿತ್ರೀಕರಣ ಅಂತಿಮ ಹಂತದಲ್ಲಿದೆ. ನಾಲ್ಕೈದು ದಿನಗಳ ಪ್ಯಾಚ್ವರ್ಕ್, ಮೂರು ಹಾಡುಗಳು ಚಿತ್ರೀಕರಣಗೊಳ್ಳಬೇಕಿದೆ. ದಸರಾದೊಳಗೆ ಇವೆಲ್ಲವನ್ನೂ ಮುಗಿಸಿಕೊಂಡು ಸೆ.26ಕ್ಕೆ ಸಿನಿಮಾ ಬಿಡುಗಡೆ ಮಾಡುವ ಗುರಿ ನನ್ನದು. ಸಾಧ್ಯವಾಗದೇ ಇದ್ದಲ್ಲಿ ಒಂದು ತಿಂಗಳು ಮುಂದಕ್ಕೆ ಹೋಗಲಿದೆ. 2025 ವರ್ಷಾಂತ್ಯದೊಳಗೇ ಸಿನಿಮಾ ರಿಲೀಸ್ ಆಗಲಿದೆ’ ಎನ್ನುತ್ತಾರೆ ಜಡೇಶ್.

ಜಡೇಶ್ಗೆ ಹೊಂಬಾಳೆ ಲಕ್!

‘ದೊಡ್ಡ ಸಿನಿಮಾಗಳ ಜೊತೆ ಜೊತೆಗೆ ತಮ್ಮ ಸಿನಿಮಾಗಳನ್ನು ಬಿಡುಗಡೆ ಮಾಡಲು ನಿರ್ದೇಶಕರು, ನಿರ್ಮಾಪಕರು ಹಿಂದೇಟು ಹಾಕುತ್ತಾರೆ. ಆದರೆ ಜಡೇಶ್ ಇದಕ್ಕೆ ತದ್ವಿರುದ್ಧವಾಗಿದ್ದಾರೆ. ‘ಕಾಂತಾರ ಚಾಪ್ಟರ್ 1’ ಅ.2ಕ್ಕೆ ಬಿಡುಗಡೆಯಾಗಲಿದೆ. ತಮ್ಮ ಸಿನಿಮಾವನ್ನು ‘ಕಾಂತಾರ’ ಪ್ರೀಕ್ವೆಲ್ಗಿಂತ ಕೇವಲ ಒಂದು ವಾರ ಮೊದಲು ಬಿಡುಗಡೆ ಮಾಡಲು ಜಡೇಶ್ ಯೋಚಿಸುತ್ತಿದ್ದಾರೆ. ಇದಕ್ಕೆ ಅವರ ಬಳಿ ಕಾರಣವೂ ಇದೆ. ‘ನನ್ನ ‘ಗುರುಶಿಷ್ಯರು’ ಸಿನಿಮಾ ‘ಕಾಂತಾರ’ ಬಿಡುಗಡೆಯ ಒಂದು ವಾರ ಹಿಂದೆ ರಿಲೀಸ್ ಆಗಿತ್ತು. ಅದು ನನಗೆ ಯಶಸ್ಸು ತಂದಿತು. ಅದೇ ರೀತಿ ‘ಕಾಟೇರ’ ಸಿನಿಮಾ ‘ಸಲಾರ್’ಗಿಂತ ಒಂದು ವಾರ ಬಳಿಕ ಬಂತು. ಇದೂ ಯಶಸ್ವಿಯಾಯಿತು. ಈಗಲೂ ಇದೇ ರೀತಿ ಒಂದು ವಾರದ ಅಂತರದಲ್ಲಿ ಬರುವ ಯೋಜನೆ ಹಾಕಿಕೊಂಡಿದ್ದೇನೆ. ಇದು ಅಂತಿಮವೆಂದೇನಲ್ಲ’ ಎಂದರು.

ಇದು ಒಬ್ಬ ಬಡವನ ಮನೆ ಕಥೆ. ಈ ಸಿನಿಮಾದಲ್ಲಿ ವಿಷಯದ ಜೊತೆಗೆ ಆ್ಯಕ್ಷನ್ ಇದೆ. ವಿನಃ ಸಾಹಸವೇ ಎಲ್ಲ ಅಲ್ಲ.
– ‘ದುನಿಯಾ’ ವಿಜಯ್

ಈ ಯೋಚನೆ ಅಪಾಯವಲ್ಲವೇ ಎಂದು ಪ್ರಶ್ನಿಸಿದರೆ, ‘ಅದು ಹಬ್ಬದ ವಾತಾವರಣ. ಚಿತ್ರಮಂದಿರಗಳು ಸಿಕ್ಕೇ ಸಿಗುತ್ತವೆ. ಮಲ್ಟಿಪ್ಲೆಕ್ಸ್ಗಳಲ್ಲಿ ಯಾವುದೇ ಸಮಸ್ಯೆಯಾಗುವುದಿಲ್ಲ. ತುಮಕೂರು, ಮೈಸೂರು ಸೇರಿದಂತೆ ಜಿಲ್ಲಾ ಕೇಂದ್ರಗಳಲ್ಲಿ ಎರಡು ಚಿತ್ರಮಂದಿರಗಳು ಇದ್ದೇ ಇವೆ. ನಾವು ಇವುಗಳನ್ನು ಹಂಚಿಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ. ನಾವು ಅ.2ಕ್ಕೆ ಬರುವ ಯೋಚನೆಯಲ್ಲಿ ಇಲ್ಲ’ ಎಂದರು ಜಡೇಶ್.

ವಿಜಯ್ಗೊಂದು ಭಿನ್ನ ಪಾತ್ರ

‘ಶರಣ್ ಅವರಿಗೆ ‘ಗುರುಶಿಷ್ಯರು’ ಸಿನಿಮಾದಲ್ಲೊಂದು ಭಿನ್ನವಾದ ಪಾತ್ರ ಕಟ್ಟಿದ್ದೆ. ಅವರು ಹಿಂದೆಂದೂ ಅಂತಹ ಪಾತ್ರ ಮಾಡಿರಲಿಲ್ಲ. ‘ಕಾಟೇರ’ದಲ್ಲಿ ದರ್ಶನ್ ಅವರಿಗೊಂದು ಭಿನ್ನವಾದ ಪಾತ್ರ. ಬೇರೆ ಸಿನಿಮಾಗಳಲ್ಲಿ ಇವರಿಗೆ ಇಂತಹ ಪಾತ್ರದ ಅಲ್ಪಸ್ವಲ್ಪ ಗುಣಲಕ್ಷಣಗಳಿದ್ದರೂ, ಪರಿಪೂರ್ಣವಾದ ಪಾತ್ರ ‘ಕಾಟೇರ’ದಲ್ಲಿತ್ತು. ‘ಲ್ಯಾಂಡ್ಲಾರ್ಡ್’ನಲ್ಲಿ ವಿಜಯ್ ಅವರ ಪಾತ್ರವೂ ಶಕ್ತಿಯುತವಾಗಿದೆ. ಇವರ ಮೇಲೆ ಇಂತಹ ಪಾತ್ರದ ಪ್ರಯತ್ನ ಇಲ್ಲಿಯವರೆಗೂ ಯಾರೂ ಮಾಡಿಲ್ಲ. ಮಾಸ್ ಜೊತೆಗೆ ಕಥೆಗೆ ಹೆಚ್ಚಿನ ಒತ್ತು ಇಲ್ಲಿ ನೀಡಿದ್ದೇನೆ. ‘ಲ್ಯಾಂಡ್ಲಾರ್ಡ್’ ನಾನು ಕಂಡ ಜಗತ್ತು. ನಾನು ನೋಡಿದ, ಓದಿದ, ಕೇಳಿದ ಕಥೆಗಳನ್ನಷ್ಟೇ ಶಕ್ತಿಯುತವಾಗಿ ಬರೆಯಲು ಸಾಧ್ಯ. ಅದರ ಆಳ, ನೋವು ನನಗೆ ಗೊತ್ತಿರುತ್ತದೆ. ಇವೆಲ್ಲವನ್ನೂ ಒಂದೇ ಕಾಲಘಟ್ಟಕ್ಕೆ ತಂದು ನಾಯಕನ ಜೀವನದೊಳಗೆ ಅಳವಡಿಸಿ ಹೇಳುವ ಪ್ರಯತ್ನವನ್ನು ಈ ಸಿನಿಮಾ ಮೂಲಕ ಮಾಡಿದ್ದೇನೆ’ ಎನ್ನುತ್ತಾರೆ ಜಡೇಶ್.

ರೈತರು, ಅವರ ಸಮಸ್ಯೆ, ವ್ಯವಸ್ಥೆ ಜೊತೆಗಿನ ಸಂಘರ್ಷದ ಕಥೆ ಹೊತ್ತ ಈ ಸಿನಿಮಾವನ್ನು ಕೆ.ವಿ.ಸತ್ಯಪ್ರಕಾಶ್ ‘ಸಾರಥಿ ಫಿಲಂಸ್’ ಮೂಲಕ ನಿರ್ಮಾಣ ಮಾಡುತ್ತಿದ್ದಾರೆ.

ಕ್ರಾಂತಿ ತಂದ ಸ್ವತಂತ್ರ ಭೂಮಿಯ ಕಲ್ಪನೆ

‘ಈ ಸಿನಿಮಾದಲ್ಲಿ ಮೂರು ಅಂಶಗಳಿಗೆ ಹೆಚ್ಚಿನ ಪ್ರಾಶಸ್ತ್ಯವಿದೆ. ನಾಯಕನಿಗೆ ಸ್ವತಂತ್ರ ಭೂಮಿಯ ಕಲ್ಪನೆ, ಶಿಕ್ಷಣ, ಕೂಲಿಗೆ ತಕ್ಕ ಕಾಸು ಎಂಬ ವಿಷಯಗಳ ಸುತ್ತ ಕಥಾಹಂದರವಿದೆ’ ಎಂದು ಸಿನಿಮಾದ ಜಾನರ್ ಬಗ್ಗೆ ವಿವರಿಸಿದ ಜಡೇಶ್, ‘ಇದೊಂದು ಹಳ್ಳಿ ಹಿನ್ನೆಲೆಯ 80–90ರ ದಶಕದ ಕಥೆ. ಇಲ್ಲಿ ಅಸ್ತಿತ್ವದ ಹೋರಾಟ ಇರುತ್ತದೆ. ಕೋಲಾರ ಸುತ್ತಮುತ್ತ ನಡೆದ ಈಗಲೂ ನಡೆಯುತ್ತಿರುವ ಘಟನೆಯನ್ನು ಚಿತ್ರವು ಹೊಂದಿದೆ. ಸ್ವಾವಲಂಬಿಯಾಗಬೇಕು ಎನ್ನುವ ನಾಯಕನ ಯೋಚನೆ ಹೇಗೆ ಕ್ರಾಂತಿಯಾಗುತ್ತದೆ ಎನ್ನುವ ಕಥೆ ಇದಾಗಿದೆ. ನಾಯಕನ ಬಾಲ್ಯದಿಂದ ಹಿಡಿದು ಆತನಿಗೆ ಐವತ್ತು ವರ್ಷದವರೆಗಿನ ಕಥೆಯನ್ನು ಹೇಳಿದ್ದೇನೆ. ‘ಚೋಮನ ದುಡಿ’ಯಲ್ಲಿನ ‘ಚೋಮ’ನ ಅಂಶಗಳನ್ನು ಸಣ್ಣಮಟ್ಟಿನಲ್ಲಿ ಈ ಸಿನಿಮಾದ ನಾಯಕನಲ್ಲಿ ಕಾಣಬಹುದು’ ಎಂದರು.

ಕ್ರಾಂತಿ ತಂದ ಸ್ವತಂತ್ರ ಭೂಮಿಯ ಕಲ್ಪನೆ

‘ಈ ಸಿನಿಮಾದಲ್ಲಿ ಮೂರು ಅಂಶಗಳಿಗೆ ಹೆಚ್ಚಿನ ಪ್ರಾಶಸ್ತ್ಯವಿದೆ. ನಾಯಕನಿಗೆ ಸ್ವತಂತ್ರ ಭೂಮಿಯ ಕಲ್ಪನೆ ಶಿಕ್ಷಣ ಕೂಲಿಗೆ ತಕ್ಕ ಕಾಸು ಎಂಬ ವಿಷಯಗಳ ಸುತ್ತ ಕಥಾಹಂದರವಿದೆ’ ಎಂದು ಸಿನಿಮಾದ ಜಾನರ್ ಬಗ್ಗೆ ವಿವರಿಸಿದ ಜಡೇಶ್ ‘ಇದೊಂದು ಹಳ್ಳಿ ಹಿನ್ನೆಲೆಯ 80–90ರ ದಶಕದ ಕಥೆ. ಇಲ್ಲಿ ಅಸ್ತಿತ್ವದ ಹೋರಾಟ ಇರುತ್ತದೆ. ಕೋಲಾರ ಸುತ್ತಮುತ್ತ ನಡೆದ ಈಗಲೂ ನಡೆಯುತ್ತಿರುವ ಘಟನೆಯನ್ನು ಚಿತ್ರವು ಹೊಂದಿದೆ. ಸ್ವಾವಲಂಬಿಯಾಗಬೇಕು ಎನ್ನುವ ನಾಯಕನ ಯೋಚನೆ ಹೇಗೆ ಕ್ರಾಂತಿಯಾಗುತ್ತದೆ ಎನ್ನುವ ಕಥೆ ಇದಾಗಿದೆ. ನಾಯಕನ ಬಾಲ್ಯದಿಂದ ಹಿಡಿದು ಆತನಿಗೆ ಐವತ್ತು ವರ್ಷದವರೆಗಿನ ಕಥೆಯನ್ನು ಹೇಳಿದ್ದೇನೆ. ‘ಚೋಮನ ದುಡಿ’ಯಲ್ಲಿನ ‘ಚೋಮ’ನ ಅಂಶಗಳನ್ನು ಸಣ್ಣಮಟ್ಟಿನಲ್ಲಿ ಈ ಸಿನಿಮಾದ ನಾಯಕನಲ್ಲಿ ಕಾಣಬಹುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.