ಗುರುವಾರ , ಜೂನ್ 30, 2022
23 °C

ಸೂರರೈ ಪೊಟ್ರು ರಿಮೇಕ್; ಅಭಿಮಾನಿಗಳೇ 'ಟೈಟಲ್ ಸಜೆಸ್ಟ್ ಮಾಡಿ' ಎಂದ ಅಕ್ಷಯ್ ಕುಮಾರ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ತಮಿಳಿನ ಸೂಪರ್‌ಹಿಟ್‌ ಸಿನಿಮಾ 'ಸೂರರೈ ಪೊಟ್ರು' ಹಿಂದಿಗೆ ರಿಮೇಕ್‌ ಆಗುತ್ತಿದೆ. ಮೂಲ ಚಿತ್ರದಲ್ಲಿ ಸೂರ್ಯ ನಿರ್ವಹಿಸಿರುವ ಪಾತ್ರವನ್ನು ಹಿಂದಿ ಅವತರಣಿಕೆಯಲ್ಲಿ ಖ್ಯಾತ ನಟ ಅಕ್ಷಯ್ ಕುಮಾರ್‌ ನಿಭಾಯಿಸಲಿದ್ದಾರೆ. ಅವರಿಗೆ ನಾಯಕಿಯಾಗಿ ರಾಧಿಕಾ ಮದನ್‌ ಬಣ್ಣ ಹಚ್ಚಲಿದ್ದಾರೆ.

ಸದ್ಯ ಚಿತ್ರೀಕರಣ ಆರಂಭವಾಗಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೊ ತುಣುಕೊಂದನ್ನು ಅಕ್ಷಯ್‌ ಹಂಚಿಕೊಂಡಿದ್ದಾರೆ. ಶೂಟಿಂಗ್‌ ಆರಂಭಕ್ಕೂ ಮುನ್ನ ರಾಧಿಕಾ ಮದನ್‌ ಅವರು ತೆಂಗಿನ ಕಾಯಿ ಒಡೆಯುತ್ತಿರುವುದನ್ನು ಅಕ್ಷಯ್‌ ಹಾಗೂ ನಿರ್ದೇಶಕಿ ಸುಧಾ ಕೊಂಗಾರ ನೋಡುತ್ತಿರುವುದು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೆಯಾಗಿರುವ ಈ ವಿಡಿಯೊದಲ್ಲಿದೆ.

'ಮಂಗಳಕರ ರೀತಿಯಲ್ಲಿ ತೆಂಗಿನಕಾಯಿ ಒಡೆದು, ಸಣ್ಣ ಪ್ರಾರ್ಥನೆಯೊಂದಿಗೆ ಇನ್ನೂ ಹೆಸರಿಡದ ನಮ್ಮ ಕನಸಿನ ಸಿನಿಮಾದ ಚಿತ್ರೀಕರಣ ಆರಂಭಿಸಿದ್ದೇವೆ. ನೀವು ಯಾವುದೇ ಶೀರ್ಷಿಕೆಯನ್ನು ಸಲಹೆ ನೀಡುವುದಿದ್ದರೆ ಹಂಚಿಕೊಳ್ಳಿ. ನಿಮ್ಮ ಶುಭಾಶಯಗಳನ್ನೂ ತಿಳಿಸಿ' ಎಂದು ವಿಡಿಯೊ ಜೊತೆಗೆ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ‘ಸೂರರೈ ಪೊಟ್ರು’ ಹಿಂದಿ ರಿಮೇಕ್‌ನ ಮುಖ್ಯ ಪಾತ್ರದಲ್ಲಿ ಅಕ್ಷಯ್ ಕುಮಾರ್ ನಟನೆ ​

ನಟಿ ರಾಧಿಕಾ ಮದನ್‌, ನಿರ್ದೇಶಕಿ ಸುಧಾ ಕೊಂಗಾರ, ನಟಿ ಜ್ಯೋತಿಕಾ, ನಟ ಸೂರ್ಯ ಅವರಷ್ಟೇ ಅಲ್ಲದೆ, ‘ಸೂರರೈ ಪೊಟ್ರು’ ಸಿನಿಮಾಗೆ ಸ್ಫೂರ್ತಿಯಾದ, 'ಏರ್‌ ಡೆಕ್ಕನ್‌' ಸಂಸ್ಥಾಪಕ ಕ್ಯಾಪ್ಟನ್‌ ಜಿ.ಆರ್‌.ಗೋಪಿನಾಥ್‌ ಅವರನ್ನೂ ಅಕ್ಷಯ್‌ ಟ್ಯಾಗ್‌ ಮಾಡಿದ್ದಾರೆ.

ಮೂಲ ಸಿನಿಮಾದಲ್ಲಿ ನಟ ಸೂರ್ಯ ಅಭಿನಯಕ್ಕೆ ಪ್ರೇಕ್ಷಕರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ‘ಸೂರರೈ ಪೊಟ್ರು’ ಸಿನಿಮಾ: ಬಿಡುಗಡೆಗೂ ಮೊದಲೇ ₹ 100 ಕೋಟಿ ಬ್ಯುಸಿನೆಸ್‌!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು