ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾರ್ಜ್ ರೆಡ್ಡಿ: ಸವಾಲಿನ ಪಾತ್ರಕ್ಕೆ ಜೀವ ತುಂಬಿದ ಸಂದೀಪ್ ಮಾಧವ್

Last Updated 2 ಫೆಬ್ರುವರಿ 2020, 8:24 IST
ಅಕ್ಷರ ಗಾತ್ರ
ADVERTISEMENT
""

‘ಜೀನಾ ಹೈ ತೋ ಮರ್ನಾ ಸೀಕೋ, ಕದಂ ಕದಂ ಪರ್ ಲಡ್ನಾ ಸೀಕೋ, ರೈಸ್ ಯುವರ್ ವಾಯ್ಸ್’ (ಬದುಕಬೇಕು ಅಂದ್ರೆ ಸಾಯೋದು ಕಲಿ, ಹೆಜ್ಜೆಹೆಜ್ಜೆಗೂ ಹೋರಾಡೋದು ಕಲಿ, ದನಿಯೆತ್ತು).

– ವಿಭಿನ್ನ ಚಿಂತನೆಗಳ ಮೂಲಕ ಆಂಧ್ರ ಪ್ರದೇಶದಲ್ಲಿ ವಿದ್ಯಾರ್ಥಿ ಚಳವಳಿಗೆ ಹೊಸ ದಿಕ್ಕು ಕೊಟ್ಟ ಹೋರಾಟಗಾರ ಜಾರ್ಜ್ ರೆಡ್ಡಿ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿಹೇಳಿದ್ದ ಮಾತುಗಳಿವು.

ಈ ಚಿತ್ರದಚಿತ್ರಕಥೆ ಮತ್ತು ನಿರ್ದೇಶನದ ಹೊಣೆ ಹೊತ್ತವರು ಬಿ.ಜೀವನ್ ರೆಡ್ಡಿ.ಪಾತ್ರಕ್ಕೆ ಜೀವ ತುಂಬಿ, ಪ್ರೇಕ್ಷಕರ ನವಿರೇಳುವಂತೆ ಅಭಿನಯಿಸಿದವರು ಸಂದೀಪ್ ಮಾಧವ್. ದ್ವಿಪಾತ್ರದಲ್ಲಿ ಕಾಣಿಸಿಕೊಂಡಿರುವಮುಸ್ಕಾನ್‌ ಅಭಿನಯವೂ ಬಹುಕಾಲ ಮನಸ್ಸಿನಲ್ಲಿ ಉಳಿಯುವಂಥದ್ದು. ಆಕೆಸಿನಿಮಾ ಮುನ್ನಡೆಸುವ ನಿರೂಪಕಿಯೂ ಹೌದು.

‘ಜಾರ್ಜ್ ರೆಡ್ಡಿ’ ಚಿತ್ರದಲ್ಲಿ ನಟಿ ಮುಸ್ಕಾನ್ ಖೂಬ್ ಚಾಂದಿನಿ

ತನ್ನ 25ನೇ ವಯಸ್ಸಿನಲ್ಲೇ ಕೊಲೆಯಾದ ಈ ಪ್ರಖರ ಚಿಂತಕನ ಬದುಕನ್ನು ತೆರೆಗೆ ತರುವ ಸಾಹಸ ಸಾಮಾನ್ಯವಲ್ಲ. ಜಾರ್ಜ್‌ ರೆಡ್ಡಿ ಬದುಕಿನಲ್ಲಿ ಹಿಂಸೆ–ಅಹಿಂಸೆಯ ನಡುವಣ ಗೆರೆಯೇ ಬಲುಸೂಕ್ಷ್ಮ. ಚಿತ್ರಕತೆಯಲ್ಲಿ ತುಸು ಎಡವಟ್ಟಾದರೂ ರೆಡ್ಡಿ ಹಿಂಸೆಯನ್ನು ಪ್ರತಿಪಾದಿಸುತ್ತಿದ್ದರು ಎನ್ನುವ ನಿಲುವಿಗೆ ಪ್ರೇಕ್ಷಕರು ಮುಟ್ಟುವ ಅಪಾಯ.

ಜಾರ್ಜ್ ರೆಡ್ಡಿ ಎಂದೂ ಬಳಸದ ರಿವಲ್ವಾರ್‌ ಅನ್ನು ಸಮುದ್ರಕ್ಕೆ ಮುಸ್ಕಾನ್ಎಸೆಯುವ ದೃಶ್ಯದೊಂದಿಗೆ ಸಿನಿಮಾ ಮುಗಿಯುತ್ತದೆ. ಜಾರ್ಜ್‌ ರೆಡ್ಡಿ ತನ್ನ ಮನೆಯಲ್ಲಿ ಇರಿಸಿಕೊಂಡಿದ್ದ ರಿವಲ್ವಾರ್‌ ಸಹ ಚಿತ್ರದ ಒಂದು ಪಾತ್ರವಾಗಿ, ಹಿಂಸೆಯ ಔಚಿತ್ಯವನ್ನುಪ್ರಶ್ನಿಸುವ ಪ್ರತೀಕವೇ ಆಗಿಬಿಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT