ಮಂಗಳವಾರ, ಮೇ 17, 2022
26 °C

ಮತ್ತೆ ವೈದ್ಯನಾಗಿ ತೆರೆ ಮೇಲೆ ಬರಲಿದ್ದಾರೆ ಗೋಲ್ಡನ್ ಸ್ಟಾರ್ ಗಣೇಶ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವೃತ್ತಿಯಲ್ಲಿ ವೈದ್ಯರಾಗಿರುವ ಡಾ. ಶಶಿಕಲಾ ಪುಟ್ಟಸ್ವಾಮಿ ಚಿತ್ರಕಥೆ ಬರೆದು ನಿರ್ದೇಶನ ಮಾಡಲಿರುವ ಸಿನಿಮಾದಲ್ಲಿ ವೈದ್ಯನ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ನಟ ಗೋಲ್ಡನ್ ಸ್ಟಾರ್ ಗಣೇಶ್‌. ಈ ಹಿಂದೆ ಚಮಕ್ ಸಿನಿಮಾದಲ್ಲಿ ಗಣೇಶ್ ಸ್ತ್ರೀರೋಗ ತಜ್ಞನ ಪಾತ್ರಕ್ಕೆ ಬಣ್ಣ ಹಚ್ಚಿದ್ದರು.

ಇನ್ನೂ ಹೆಸರಿಡದ ಈ ಚಿತ್ರಕ್ಕೆ ನ್ಯೂರೊಸರ್ಜನ್‌ ಡಾ. ಶೈಲೇಶ್ ಕುಮಾರ್ ಬಿ.ಎಸ್‌. ಬಂಡವಾಳ ಹೂಡಿಕೆ ಮಾಡಿದ್ದಾರೆ. ಇವರು ಈ ಹಿಂದೆ 6ನೇ ಮೈಲಿ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಈ ಚಿತ್ರವು ನವೆಂಬರ್‌ನಲ್ಲಿ ಸೆಟ್ಟೇರುವ ಸಾಧ್ಯತೆ ಇದೆ.

ಈ ಚಿತ್ರವು ವೈದ್ಯನಾದವನು ಪ್ರತಿದಿನ ತನ್ನ ವೃತ್ತಿಯಲ್ಲಿ ಹಲವು ಸವಾಲುಗಳನ್ನು ಎದುರಿಸುತ್ತಿರುತ್ತಾನೆ. ಅದರೊಂದಿಗೆ ತನ್ನ ವೈಯಕ್ತಿಕ ಜೀವವವನ್ನು ಸಮತೋಲನಗೊಳಿಸಲು ಪ್ರಯತ್ನಿಸುತ್ತಾನೆ. ಅನೇಕ ಸಂದರ್ಭಗಳಲ್ಲಿ ವೃತ್ತಿಯಲ್ಲೇ ಹೆಚ್ಚಿನ ಸಮಯ ಕಳೆಯುವುದರಿಂದ ವೈಯಕ್ತಿಕ ಜೀವನಕ್ಕೂ ತೊಂದರೆಯಾಗುತ್ತದೆ.

ಡಾ. ಶೈಲೇಶ್ ಹಾಗೂ ಡಾ. ಶಶಿಕಲಾ ಇಬ್ಬರೂ ಸಹಪಾಠಿಗಳು. ಈ ಇಬ್ಬರೂ ಚರ್ಚೆ ಮಾಡಿ ಗಣೇಶ್ ಅವರೇ ಈ ಚಿತ್ರದ ನಾಯಕನಾಗಲು ಬೆಸ್ಟ್ ಎಂದು ಆಯ್ಕೆ ಮಾಡಿದ್ದಾರೆ. ಇಬ್ಬರೂ ವೈದ್ಯರು ತಮ್ಮ ವೈಯಕ್ತಿಕ ಅನುಭವಗಳ ಕಾಲ್ಪನಿಕ ಖಾತೆಗಳನ್ನು ಚಿತ್ರಕಥೆಯಲ್ಲಿ ಸೇರಿಸಿದ್ದಾರೆ. ಇದರಲ್ಲಿ ವಾಸ್ತವಾಂಶಗಳು ಸೇರಿವೆ ಎಂದು ಚಿತ್ರತಂಡದ ಮೂಲಗಳು ಆಂಗ್ಲ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು