ಗುರುವಾರ , ಅಕ್ಟೋಬರ್ 22, 2020
22 °C

ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ಗೆ ಹುಟ್ಟುಹಬ್ಬ: ಶುಭಾಶಯದ ಸುರಿಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ಯಾಂಡಲ್‌ವುಡ್‌ನ ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ಗೆ ಜನ್ಮದಿನದ ಸಂಭ್ರಮ. ಚಿತ್ರರಂಗದ ತಾರೆಯರು, ನಿರ್ದೇಶಕರು, ನಿರ್ಮಾಪಕರು ಹಾಗೂ ಅಭಿಮಾನಿಗಳಿಂದ ರಚಿತಾಗೆ ಶುಭಾಶಯಗಳ ಸುರಿಮಳೆಯೇ ಆಗುತ್ತಿದೆ. ಟ್ವಿಟರ್‌, ಇನ್‌ಸ್ಟಾಗ್ರಾಮ್‌, ಫೇಸ್‌ಬುಕ್‌ನಲ್ಲಿ ರಚಿತಾ ಖಾತೆಗಳಲ್ಲಿ ಶುಭಕೋರಿದ ಸಂದೇಶಗಳು ತುಂಬಿ ಹೋಗಿವೆ.

ರಚಿತಾ ನಟಿಸುತ್ತಿರುವ ಚಿತ್ರಗಳ ವಿಶೇಷ ಪೋಸ್ಟರ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಚಿತ್ರತಂಡಗಳು, ರಚಿತಾಗೆ ಹುಟ್ಟುಹಬ್ಬದ ಕೊಡುಗೆ ನೀಡಿ ಸ್ಮರಣೀಯಗೊಳಿಸಿವೆ. ಅಭಿಮಾನಿಗಳು ಮತ್ತು ಹಿತೈಷಿಗಳು ಕಳುಹಿಸಿರುವ ಕೇಕ್‌ಗಳನ್ನು ಟೇಬಲ್‌ ಮೇಲೆ ಜೋಡಿಸಿಕೊಂಡು ದೀಪ ಹಚ್ಚುತ್ತಿರುವ ಫೋಟೊವನ್ನು ರಚಿತಾ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಗುಳಿಕೆನ್ನೆಯ ಈ ಚೆಲುವೆ ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ರಚಿತಾ ರಾಮ್‌ ಇತ್ತೀಚೆಗಷ್ಟೇ ಒಪ್ಪಿಕೊಂಡಿದ್ದ ‘ಕಸ್ತೂರಿ ಮಹಲ್‌’ ಸಿನಿಮಾದಿಂದ ಹೊರಬಂದ ಮೇಲೆ, ನೀನಾಸಂ ಸತೀಶ್‌ ನಾಯಕನಾಗಿರುವ ‘ಮ್ಯಾಟ್ನಿ’ ಸಿನಿಮಾ ಅವರು ಒಪ್ಪಿಕೊಂಡಿದ್ದಾರೆ. ಈ ಇಬ್ಬರು ಮೊದಲ ಬಾರಿಗೆ ಜೋಡಿಯಾಗಿ ನಟಿಸಿದ್ದ ‘ಅಯೋಗ್ಯ’ ಚಿತ್ರ ಹಿಟ್‌ ಆಗಿತ್ತು. ಈಗ ಅದೇ ಮೋಡಿಯನ್ನು ‘ಮ್ಯಾಟ್ನಿ’ಯಲ್ಲಿ ಮುಂದುವರಿಸುವ ನಿರೀಕ್ಷೆಯನ್ನು ಈ ಜೋಡಿ ಹುಟ್ಟುಹಾಕಿದೆ.

ರಚಿತಾ ನಟಿಸುತ್ತಿರುವ ಮತ್ತೊಂದು ಪ್ರಮುಖ ಚಿತ್ರ ‘ಲಿಲ್ಲಿ’ಯ ವಿಶೇಷ ಪೋಸ್ಟರ್‌ವೊಂದನ್ನು ಚಿತ್ರತಂಡ ಬಿಡುಗಡೆ ಮಾಡಿ, ರಚಿತಾಗೆ ಶುಭಾಶಯ ಹೇಳಿದೆ. ಹಾಗೆಯೇ ಡಾಲಿ ಧನಂಜಯ ಜತೆಗೆ ತೆರೆ ಹಂಚಿಕೊಂಡಿರುವ ಮತ್ತೊಂದು ಹೆಸರಿಡದ ಚಿತ್ರ (ಪ್ರೊಡಕ್ಷನ್‌ 4), ಪುಷ್ಪಕವಿಮಾನ ಚಿತ್ರತಂಡದ ಹೊಸ ಚಿತ್ರದ ಪೋಸ್ಟರ್‌ ಕೂಡ ಈ ದಿನವೇ ಬಿಡುಗಡೆಯಾಗಿದೆ. ತೆಲುಗಿನ ‘ಸೂಪರ್‌ ಮಚ್ಚಿ’ ಚಿತ್ರತಂಡವು ಪೋಸ್ಟರ್‌ ಬಿಡುಗಡೆ ಮಾಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು