ಗುರುವಾರ , ಆಗಸ್ಟ್ 18, 2022
25 °C

ವಿಕ್ಕಿ ಕೌಶಲ್ ಕುಟುಂಬದೊಂದಿಗೆ ಕತ್ರಿನಾ ಹೋಳಿ ಸಂಭ್ರಮ: ಫೋಟೊ ವೈರಲ್

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಮುಂಬೈ: ಬಾಲಿವುಡ್‌ನ ಕತ್ರಿನಾ ಕೈಫ್‌ -ವಿಕ್ಕಿ ಕೌಶಲ್ ದಂಪತಿ ಮದುವೆ ಬಳಿಕ ಮೊದಲ ಹೋಳಿ ಹಬ್ಬವನ್ನು ಕುಟುಂಬಸ್ಥರೊಂದಿಗೆ ಸಂಭ್ರಮದಿಂದ ಆಚರಿಸಿದ್ದಾರೆ. 

ಸಂಭ್ರಮದ ಫೋಟೊವನ್ನು ಕತ್ರಿನಾ, ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಚಿತ್ರದಲ್ಲಿ ವಿಕ್ಕಿಯ ತಾಯಿ ವೀಣಾ, ತಂದೆ ಶ್ಯಾಮ್ ಮತ್ತು ಸಹೋದರ ಸನ್ನಿ ಇದ್ದಾರೆ. ಎಲ್ಲರೂ ಬಣ್ಣ ಬಳಿದುಕೊಂಡು ಸಡಗರದಿಂದ ಹಬ್ಬವನ್ನು ಆಚರಿಸಿರುವುದನ್ನು ಕಾಣಬಹುದಾಗಿದೆ. 
 
‘ಹ್ಯಾಪಿ ಹೋಳಿ’ ಎಂದು ಕತ್ರಿನಾ ಬರೆದುಕೊಂಡಿದ್ದಾರೆ. ಈ ಪೋಸ್ಟ್‌ಗೆ ಶ್ವೇತಾ ಬಚ್ಚನ್ ಸೇರಿದಂತೆ ಅನೇಕರು ಶುಭಾಶಯ ತಿಳಿಸುವ ಮೂಲಕ ಪ್ರತಿಕ್ರಿಯಿಸಿದ್ದಾರೆ. 

ಫರ್ಹಾನ್ ಆ್ಯಕ್ಷನ್ ಕಟ್‌ ಹೇಳುತ್ತಿರುವ ‘ಜೀ ಲೆ ಜರಾ’ ಚಿತ್ರದಲ್ಲಿ ಕತ್ರಿನಾ ಕೈಫ್ ನಟಿಸುತ್ತಿದ್ದಾರೆ. 

ಲಕ್ಷ್ಮಣ್ ಉಟೇಕರ್ ನಿರ್ದೇಶನದ ಹೆಸರಿಡದ ಚಿತ್ರದಲ್ಲಿ ವಿಕ್ಕಿ ಕೌಶಲ್‌, ಸಾರಾ ಅಲಿ ಖಾನ್‌ ಅಭಿನಯಿಸುತ್ತಿದ್ದು, ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ.  

2021ರ ಡಿ. 9ರಂದು ರಾಜಸ್ಥಾನದ ಸವಾಯಿ ಮಾಧೋಪುರದಲ್ಲಿ ವಿಕ್ಕಿ ಕೌಶಲ್‌ ಮತ್ತು ಕತ್ರಿನಾ ಕೈಫ್ ಅದ್ಧೂರಿಯಾಗಿ ವಿವಾಹವಾಗಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು