2026ನೇ ಸಾಲಿನ ಆಸ್ಕರ್ ಪ್ರಶಸ್ತಿಯ ‘ಅತ್ಯುತ್ತಮ ಅಂತರರಾಷ್ಟ್ರೀಯ ಫೀಚರ್ ಸಿನಿಮಾ’ ವಿಭಾಗಕ್ಕೆ ಪ್ರವೇಶ ಪಡೆದಿರುವ ‘ಹೋಂಬೌಂಡ್’ ಸಿನಿಮಾ ಸೆ.26ರಂದು ತೆರೆಗೆ ಬರುತ್ತಿದೆ. ‘ಪುಷ್ಪ–2’, ‘ದಿ ಬೆಂಗಾಲ್ ಫೈಲ್ಸ್’ ಮುಂತಾದ ಸಿನಿಮಾಗಳನ್ನು ಹಿಂದಿಕ್ಕಿ ಆಸ್ಕರ್ ಸ್ಪರ್ಧೆಯಂಗಳಕ್ಕೆ ಹೊರಟಿರುವುದರಿಂದ ಸಿನಿಮಾ ಕುರಿತು ಕುತೂಹಲ ಹೆಚ್ಚಾಗಿದೆ.

ನೀರಜ್ ಘೆವಾನ್ ನಿರ್ದೇಶನದ ಚಿತ್ರವಿದು. ನೀರಜ್ ಈ ಹಿಂದೆ ‘ಮಸಾನ್’ ಎಂಬ ಚಿತ್ರವನ್ನು ನಿರ್ದೇಶಿಸಿದ್ದರು. ವಿಕ್ಕಿ ಕೌಶಲ್, ರಿಚಾ ಚಡ್ಡಾ ಅಭಿನಯದ ಚಿತ್ರ ಉತ್ತಮ ಪ್ರತಿಕ್ರಿಯೆ ಪಡೆದಿತ್ತು.

ಇಶಾನ್ ಖಟ್ಟರ್, ವಿಶಾಲ್ ಜೇತ್ವಾ ಮತ್ತು ಜಾನ್ವಿ ಕಪೂರ್ ಅವರು ‘ಹೋಂಬೌಂಡ್’ ಮುಖ್ಯ ಭೂಮಿಕೆಯಲ್ಲಿದ್ದಾರೆ. ಉತ್ತರ ಭಾರತದ ಸಣ್ಣ ಗ್ರಾಮದ ಇಬ್ಬರು ಬಾಲ್ಯ ಸ್ನೇಹಿತರು ಪೊಲೀಸ್ ಹುದ್ದೆಗೇರಲು ಶ್ರಮಿಸುವ ಕಥಾಹಂದರವನ್ನು ಹೊಂದಿದೆ. ತಮ್ಮ ಗುರಿ ಸಾಧನೆಯ ಹಾದಿಯಲ್ಲಿ ಇಬ್ಬರೂ ದೂರವಾಗುವ ಸಂದರ್ಭ ಬಂದಾಗಲೂ ಅವರ ಸ್ನೇಹ ಹೇಗೆ ಇಬ್ಬರನ್ನು ಒಂದುಮಾಡುತ್ತದೆ ಎಂಬುದೇ ಚಿತ್ರಕಥೆ.

ಈಗಾಗಲೇ ಒಂದಷ್ಟು ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿರುವ ಚಿತ್ರದ ಕುರಿತು ಧನಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸ್ನೇಹದ ಕುರಿತು ಒಂದು ಭಾವನಾತ್ಮಕ ಪಯಣವನ್ನು ಹೊಂದಿರುವ ಚಿತ್ರ ಎಂಬುದು ಟ್ರೇಲರ್ನಿಂದ ಮೇಲ್ನೋಟಕ್ಕೆ ಗೊತ್ತಾಗುತ್ತಿದೆ.

ಕರಣ್ ಜೋಹರ್ ಮತ್ತು ಅದಾರ್ ಪೂನಾವಾಲಾ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
.Academy Awards: ಆಸ್ಕರ್ ಸ್ಪರ್ಧೆಗೆ ಭಾರತದ ‘ಹೋಂಬೌಂಡ್’ ಪ್ರವೇಶ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.