ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಕ್ರಮ್-ಶ್ರೀನಿಧಿ ನಟನೆಯ ಕೋಬ್ರಾ ಚಿತ್ರದಲ್ಲಿ ಇರ್ಫಾನ್ ಪಠಾಣ್; ಫ್ಯಾನ್ಸ್ ಖುಷ್

Last Updated 27 ಆಗಸ್ಟ್ 2022, 9:22 IST
ಅಕ್ಷರ ಗಾತ್ರ

ಬೆಂಗಳೂರು: ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್, ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಇರ್ಫಾಣ್ ಪಠಾಣ್ ಅಭಿನಯದ ತಮಿಳು ಚಿತ್ರ 'ಕೋಬ್ರಾ' ಸದ್ಯದಲ್ಲೇ ತೆರೆ ಕಾಣಲಿದೆ.

ಈ ಚಿತ್ರದಲ್ಲಿ ತಮಿಳು ಚಿತ್ರರಂಗದ ಜನಪ್ರಿಯ ನಟ ವಿಕ್ರಮ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೆಜಿಎಫ್ ಖ್ಯಾತಿಯ ಕನ್ನಡದ ಶ್ರೀನಿಧಿ ಶೆಟ್ಟಿ ಚಿತ್ರಕ್ಕೆ ನಾಯಕಿಯಾಗಿದ್ದಾರೆ.

ಅಭಿಮಾನಿಗಳು ಕೋಬ್ರಾ ಚಿತ್ರದ ಟ್ರೇಲರ್ ಅನ್ನು ಸಂತೋಷದಿಂದ ಬರಮಾಡಿಕೊಂಡಿದ್ದು, ಯೂಟ್ಯೂಬ್‌ನಲ್ಲಿ 85 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಗಳಿಸಿದೆ.

ತಮಿಳಿನ ಆಕ್ಷನ್-ಥ್ರಿಲ್ಲರ್ ಕೋಬ್ರಾ ಚಿತ್ರದ ಟ್ರೇಲರ್ ಈಗಾಗಲೇ ಬಿಡುಗಡೆಯಾಗಿದ್ದು, ವಿಕ್ರಂ ಜೊತೆಗೆ ಪಠಾಣ್ ನಟನೆಯ ಬಗ್ಗೆಯೂ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಕ್ರಿಕೆಟಿಗರಾದ ಸುರೇಶ್ ರೈನಾ, ರಾಬಿನ್ ಉತ್ತಪ್ಪ, ದೀಪಕ್ ಹೂಡಾ ಸೇರಿದಂತೆ ಹಲವರು ಶುಭ ಹಾರೈಸಿದ್ದಾರೆ.

ಇದನ್ನೂ ಓದಿ:

ಮಾಜಿ ಕ್ರಿಕೆಟಿಗ ಎಸ್. ಶ್ರೀಶಾಂತ್, ಸ್ಪಿನ್ನರ್ ಹರಭಜನ್ ಸಿಂಗ್ ಈಗಾಗಲೇ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಈಗ ಪಠಾಣ್ ಕೂಡ ಬಣ್ಣ ಹಚ್ಚಿದ್ದಾರೆ. ಚಿತ್ರ ಆಗಸ್ಟ್ 31ರಂದು ತೆರೆ ಕಾಣಲಿದೆ.

ಕೋಬ್ರಾ ಚಿತ್ರದ ಟ್ರೇಲರ್ ಇಲ್ಲಿ ನೋಡಿ:

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT