ಶನಿವಾರ, ಜನವರಿ 25, 2020
22 °C

ರಿಷಭ್ ಪಂತ್ ವೈಫಲ್ಯಕ್ಕೆ ನಟಿ ಊರ್ವಶಿ ಕಾರಣ!: ಟ್ರೋಲ್ ಆಯ್ತು ಕ್ರಿಕೆಟಿಗನ ಸೆಲ್ಫಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಉದಯೋನ್ಮುಖ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್‌ಮನ್ ರಿಷಬ್ ಪಂತ್ ಬ್ಯಾಟಿಂಗ್‌ ವೈಫಲ್ಯಕ್ಕೆ ಕೊನೆಗೂ ಕಾರಣ ಸಿಕ್ಕಿದೆ. ಅದು ಬಾಲಿವುಡ್ ನಟಿ ಊರ್ವಶಿ ರೌಟೆಲಾ ಜೊತೆ ಡೇಟಿಂಗ್‌ ಮಾಡುತ್ತಿರುವುದೇ ಪಂತ್ ವೈಪಲ್ಯಕ್ಕೆ ಕಾರಣ ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ ಮಾಡುತ್ತಿದ್ದಾರೆ.

ದರ್ಶನ್‌ ಅಭಿನಯದ ಐರಾವತ ಸಿನಿಮಾದಲ್ಲಿ ಊರ್ವಶಿ ರೌಟೆಲಾ ನಾಯಕಿಯಾಗಿ ನಟಿಸಿದ್ದರು. ಇದೀಗ ಪಂತ್‌, ಊರ್ವಶಿ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಮುಂಬೈನಲ್ಲಿ ಇಬ್ಬರು ಇತ್ತೀಚೆಗೆ ಹೊಟೇಲ್‌ನಲ್ಲಿ ಡಿನ್ನರ್‌ ಮಾಡಿದ್ದರು ಎಂದು ಇಂಗ್ಲಿಷ್‌ ಸುದ್ದಿ ವಾಹಿನಿ ಟೈಮ್ಸ್‌ ನೌ ವರದಿ ಮಾಡಿತ್ತು. 

ಮೈದಾನದಲ್ಲಿ ಬ್ಯಾಟಿಂಗ್‌ ಹಾಗೂ ವಿಕೆಟ್ ಕೀಪಿಂಗ್‌ ಮಾಡಲು ಪರದಾಡುತ್ತಿರುವ ಪಂತ್‌ ಅವರಿಗೆ ಅಭಿಮಾನಿಗಳು ಏಕಾಗ್ರತೆ ಹೆಚ್ಚಿಸಿಕೊಳ್ಳುವಂತೆ ಸಲಹೆ ಮಾಡಿದ್ದಾರೆ. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಪಂತ್ ಮಾತ್ರ ವೈದಾನದಲ್ಲಿ ಕಸರತ್ತು ಮಾಡುತ್ತಿದ್ದಾರೆ. ಏಕದಿನ ಪಂದ್ಯಗಳಲ್ಲಿ ಉತ್ತಮ ಫಾರ್ಮ್‌ಗೆ ಮರಳುವ ಆಲೋಚನೆಯಲ್ಲಿದ್ದಾರೆ ಎನ್ನಲಾಗಿದೆ.

ಈ ಹಿಂದೆ ನಟಿ ಊರ್ವಶಿ ರೌಟೆಲಾ ಹಾರ್ದಿಕ್‌ ಪಾಂಡ್ಯ ಜೊತೆ ಡೇಟಿಂಗ್‌ ಮಾಡುತ್ತಿದ್ದರು ಎಂಬ ಮಾತುಗಳು ಕೇಳಿಬಂದಿದ್ದವು. ಇದೀಗ ಪಾಂಡ್ಯ ನತಶಾ ಸ್ಟಾಂಕೋವಿಕ್ ಜೊತೆ ಡೇಟಿಂಗ್‌ ಮಾಡುತ್ತಿರುವುದು ಬಹಿರಂಗವಾಗಿದೆ. ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರುವ ಪಾಂಡ್ಯ ಚೇತರಿಸಕೊಳ್ಳುತ್ತಿದ್ದು ನ್ಯೂಜಿಲೆಂಡ್‌ ಸರಣಿಗೆ ಲಭ್ಯರಾಗುವ ಸಾಧ್ಯತೆಗಳಿವೆ. 

2019ರ ಜನವರಿಯಲ್ಲಿ ಪಂತ್‌ ಇನ್‌ಸ್ಟಾದಲ್ಲಿ ಗೆಳತಿ ಇಶಾರೊಂದಿಗೆ ಇರುವ ಫೋಟೊವನ್ನು ಹಂಚಿಕೊಂಡಿದ್ದರು. ನಾನು ನಿನ್ನನ್ನು ಖುಷಿಪಡಿಸಲು ಬಯಸುತ್ತೇನೆ. ಏಕೆಂದರೆ ನನ್ನ ಸಂತೋಷಕ್ಕೆ ನೀನೇ ಕಾರಣ ಎಂದು ಬರೆದುಕೊಂಡಿದ್ದರು. 

 
 
 
 

 
 
 
 
 
 
 
 
 

I just want to make you happy because you are the reason I am so happy ❤️

A post shared by Rishabh Pant (@rishabpant) on

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು