ಅಂಬರೀಶ್ ಹುಟ್ಟೂರಾದ ದೊಡ್ಡರಸಿನಕೆರೆಯನ್ನೇ ಶೀರ್ಷಿಕೆಯಾಗಿಸಿಕೊಂಡ ಸಿನಿಮಾವೊಂದು ಬಿಡುಗಡೆಗೆ ಸಜ್ಜಾಗುತ್ತಿದೆ. ‘ಗಜೇಂದ್ರ ಕೇರಾಫ್ ದೊಡ್ಡರಸಿನಕೆರೆ’ ಚಿತ್ರವನ್ನು ಅಂಬರೀಶ್ ಅಭಿಮಾನಿಯಾಗಿರುವ ಸುಬ್ರಮಣ್ಯ ನಿರ್ದೇಶಿಸಿ, ನಿರ್ಮಾಣ ಮಾಡಿದ್ದಾರೆ.

‘ಇದು ಹಳ್ಳಿಯೊಂದರಲ್ಲಿ ನಡೆಯುವ ಕಥೆ. ದೊಡ್ಡರಸಿನಕೆರೆಯಲ್ಲಿಯೇ ಪೂರ್ತಿ ಚಿತ್ರೀಕರಣ ಮಾಡಿದ್ದೇವೆ. ಊರ ಗೌಡನೊಬ್ಬ ಹಳ್ಳಿಯ ಮುಗ್ಧ ಜನರಿಗೆ ಬಡ್ಡಿಗೆ ಸಾಲಕೊಟ್ಟು, ಹಿಂದಿರುಗಿಸದಿದ್ದಾಗ ಅವರ ಆಸ್ತಿಯನ್ನು ತನ್ನ ವಶಪಡಿಸಿಕೊಳ್ಳುತ್ತಿರುತ್ತಾನೆ. ಆತನಿಂದ ನಾಯಕ ಊರನ್ನು ಹೇಗೆ ರಕ್ಷಿಸುತ್ತಾನೆ ಎಂಬುದೇ ಕಥೆ. ಈಗಾಗಲೇ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಗಿದಿದ್ದು, ಚಿತ್ರ ಸದ್ಯ ಸೆನ್ಸಾರ್ ಹಂತದಲ್ಲಿದೆ. ನವೆಂಬರ್ನಲ್ಲಿ ತೆರೆಕಾಣಲಿದೆ’ ಎಂದಿದ್ದಾರೆ ನಿರ್ದೇಶಕ.

ಅಭಿಷೇಕ್ ಸುಬ್ಬಣ್ಣ ನಾಯಕ. ವೇದ ಹಾಗೂ ನಿರೀಕ್ಷಾ ನಾಯಕಿಯರು. ಮನೋರಾವ್ ಸಂಗೀತ ಸಂಯೋಜನೆ, ರಾವುಲ್ ಶೇಖರ್ ಛಾಯಾಚಿತ್ರಗ್ರಹಣವಿದೆ. ವಿನಯ್ ಸುಬ್ಬಣ್ಣ, ತಿಮ್ಮರಾಜು ಮುಂತಾದವರು ಚಿತ್ರದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.