ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸೆಂಬರ್‌ನಲ್ಲಿ ಚಂದನವನದ ‘ಬಿ.ಸಿ.ಎಲ್’ ಸೀಸನ್ 2

Last Updated 3 ಅಕ್ಟೋಬರ್ 2021, 13:41 IST
ಅಕ್ಷರ ಗಾತ್ರ

ಕಮರ್ ಫಿಲಂ ಫ್ಯಾಕ್ಟರಿ ಮೂಲಕ ಕಮರ್ ನೇತೃತ್ವದಲ್ಲಿ ಸ್ಯಾಂಡಲ್ ವುಡ್ ‘ಬಿ ಸಿ ಎಲ್ ಸೀಸನ್ 2’ (ಬಾಕ್ಸ್‌ ಕ್ರಿಕೆಟ್‌ ಲೀಗ್‌) ಡಿಸೆಂಬರ್‌ನಲ್ಲಿ ಆರಂಭವಾಗಲಿದೆ.

ಕಳೆದ ನಲವತ್ತೈದು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಕೆ.ಬಿ.ಬಾಬು (ನರ್ಗಿಸ್ ಬಾಬು) ಅವರ ಪುತ್ರ ಕಮರ್ ಈ ಟೂರ್ನಿ ಆಯೋಜಿಸುತ್ತಿದ್ದು, ಅವರು ಮಾಹಿತಿ ನೀಡಿದರು.

‘ಮೊನ್ನೆಯಷ್ಟೇ ಐಬಿಎಲ್ ಟೂರ್ನಿ ಮುಗಿದಿದೆ. ಡಿಸೆಂಬರ್‌ನಲ್ಲಿ ಸ್ಯಾಂಡಲ್ ವುಡ್ ಬಿಸಿಎಲ್ ಸೀಸನ್ 2 ಆರಂಭ ಮಾಡುತ್ತಿದ್ದೇವೆ. ಸದ್ಯಕ್ಕೆ ಒಟ್ಟು 6 ತಂಡಗಳಿದೆ. ಚಂದನವನದ ಸಾಕಷ್ಟು ಸ್ಟಾರ್ ಗಳು ಈ ಟೂರ್ನಿಯಲ್ಲಿ ಭಾಗವಹಿಸುತ್ತಾರೆ. ಬೆಂಗಳೂರು, ಮೈಸೂರು, ಹಾಸನ, ದಾವಣಗೆರೆ, ಶಿವಮೊಗ್ಗ, ಮಂಗಳೂರು ಹೀಗೆ ಒಂದೊಂದು ಊರಿನ ಹೆಸರಿನಲ್ಲಿ ಆರು ತಂಡಗಳಿದ್ದು, ಆರು ತಂಡಗಳಿಗೆ ಮಾಲೀಕರಿರುತ್ತಾರೆ. ಅವರೇ ತಮ್ಮ ತಂಡಗಳಿಗೆ ಆಟಗಾರರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಒಂದು ತಂಡದಲ್ಲಿ ಏಳು ಪುರುಷ ಹಾಗೂ ನಾಲ್ಕು ಮಹಿಳಾ ಆಟಗಾರರಿರುತ್ತಾರೆ’ ಎಂದು ಕಮರ್ ಹೇಳಿದರು.

ಬೆಂಗಳೂರು ತಂಡದ ಮಾಲೀಕರಾದ ಜಾಕೀರ್ ಹುಸೇನ್, ಪೂಜಾಶ್ರೀ, ಮೈಸೂರು ತಂಡದ ಮಾಲೀಕರಾದ ರಘು, ಗೀತಾಂಜಲಿ, ಹಾಸನ ತಂಡದ ಮಾಲೀಕರಾದ ದಿವ್ಯ - ಪ್ರಸಾದ್ ಹಾಗೂ ದಾವಣಗೆರೆ ತಂಡದ ಮಾಲೀಕರಾದ ವಿಜಯಲಕ್ಷ್ಮಿ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಆಟಗಾರರ ಪೈಕಿ ಹರ್ಷಿಕಾ ಪೂಣಚ್ಛ, ತರುಣ್ ಚಂದ್ರ, ಹರ್ಷ ಇದ್ದರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT