ಬುಧವಾರ, ನವೆಂಬರ್ 20, 2019
22 °C

ನಾಗೇಶ್‌ ಕುಕನೂರ್‌ ಚಿತ್ರದಲ್ಲಿ ಕೀರ್ತಿ ನಾಯಕಿ

Published:
Updated:

‘ಹೈದರಾಬಾದ್‌ ಬ್ಲೂಸ್‌’ ಖ್ಯಾತಿಯ ನಾಗೇಶ್‌ ಕುಕನೂರ್‌ ನಿರ್ದೇಶನದ ಹೊಸ ಚಿತ್ರದಲ್ಲಿ ‘ಮಹಾನಟಿ’ ಖ್ಯಾತಿಯ ನಟಿ ಕೀರ್ತಿ ಸುರೇಶ್‌, ನಟಿಸುತ್ತಿದ್ದಾರೆ. ಅಕ್ಟೋಬರ್‌ 17ರಂದು ಈ ನಟಿಯ ಹುಟ್ಟುಹಬ್ಬ. ಅದೇ ದಿನ ಸೋಶಿಯಲ್‌ ಮೀಡಿಯಾಗಳಲ್ಲಿ ತಾವು ನಟಿಸುತ್ತಿರುವ ಹೊಸ ಚಿತ್ರದ ಫಸ್ಟ್‌ಲುಕ್‌ನ್ನು ಹಂಚಿಕೊಂಡು ವಿಶೇಷವಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. 

ಇದು ಕ್ರೀಡೆ ಸಂಬಂಧಿತ ಹಾಸ್ಯ ಚಿತ್ರ. ಇದನ್ನು ನಾಗೇಶ್‌ ಕುಕನೂರ್‌ ನಿರ್ದೇಶನ ಮಾಡುತ್ತಿದ್ದಾರೆ. ಈ ಫಸ್ಟ್‌ಲುಕ್‌ ಪೋಸ್ಟರ್‌ನಲ್ಲಿ ಕೀರ್ತಿ ಡಿ– ಗ್ಲಾಮ್‌ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಆದಿ ಹಾಗೂ ಜಗಪತಿ ಬಾಬು ಮುಖ್ಯಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಇದು ಕೀರ್ತಿ ಅಭಿನಯದ 24ನೇ ಚಿತ್ರವಾಗಿದೆ.

ಈ ಚಿತ್ರವನ್ನು ಸುಧೀರ್‌ ಚಂದ್ರ, ಶ್ರಾವ್ಯ ವರ್ಮ ನಿರ್ಮಾಣ ಮಾಡಲಿದ್ದಾರೆ. ‘ತನು ವೆಡ್ಸ್‌ ಮನು’ ಖ್ಯಾತಿಯ ಚಿರಂತನ್‌ ದಾಸ್‌ ಈ ಚಿತ್ರಕ್ಕೆ ಕ್ಯಾಮೆರಾ ವರ್ಕ್‌ ಮಾಡಲಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್‌ ಸಂಗೀತ ನೀಡಲಿದ್ದಾರೆ. ಈ ಸಿನಿಮಾದ ಮೊದಲ ಹಂತದ ಚಿತ್ರೀಕರಣ ಮುಗಿದಿದೆ. ಸದ್ಯದಲ್ಲೇ ಎರಡನೇ ಹಂತದ ಚಿತ್ರೀಕರಣ ಆರಂಭವಾಗಲಿದೆ.


ನಾಗೇಶ್‌ ಕುಕನೂರ್‌

ಪ್ರತಿಕ್ರಿಯಿಸಿ (+)