ಕುಣಿಗಲ್: ನಗರದ ಜಿಕೆಬಿಎಂಎಸ್ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆದ ‘ಕುಣಿಗಲ್ ಉತ್ಸವ’ದಲ್ಲಿ ನಟಿ ಹಾಗೂ ಬಿಗ್ಬಾಸ್ ಮಾಜಿ ಸ್ಪರ್ಧಿ ಅನುಷಾ ರೈ ಭಾಗಿಯಾಗಿದ್ದರು.

ಈ ಬಗ್ಗೆ ನಟಿ ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ವಿಡಿಯೊ ಹಂಚಿಕೊಂಡಿದ್ದಾರೆ. ‘ಕುಣಿಗಲ್ ಉತ್ಸವ ವೈಬ್ಸ್’ ಎಂದು ಒಕ್ಕಣೆಯಲ್ಲಿ ಬರೆದುಕೊಂಡಿದ್ದಾರೆ.

ಉತ್ಸವಕ್ಕೆ ಸಾಗುವ ದಾರಿಯಲ್ಲಿ ಅಭಿಮಾನಿಗಳತ್ತ ಕೈಬೀಸಿರುವ ಅನುಷಾ ಅವರು ಕೇಸರಿ ಬಣ್ಣದ ಲೆಹೆಂಗಾದಲ್ಲಿ ಮಿಂಚಿದ್ದಾರೆ.

ವೇದಿಕೆ ಮೇಲೆ ಕೈ ಮುಗಿಯುತ್ತಾ, ಅಭಿಮಾನಿಗಳತ್ತ ಕೈಬೀಸಿ ಸಾಗಿದ ಅನುಷಾ ಅವರು, ‘ಈ ಉತ್ಸವದಲ್ಲಿ ನಾನು ಭಾಗಿಯಾಗಿರುವುದಕ್ಕೆ ಖುಷಿಯಾಗುತ್ತಿದೆ’ ಎಂದಿದ್ದಾರೆ.

ಉತ್ಸವದಲ್ಲಿ ಭಾಗಿಯಾಗಿ ಮನರಂಜಿಸಿದ ನಟಿ ಅನುಷಾ ಅವರಿಗೆ ಶಾಸಕ ಡಾ.ರಂಗನಾಥ್ ಅವರು ಅಭಿನಂದಿಸಿದ್ದಾರೆ.

ನಟಿ ಅನುಷಾ ಅವರ ಜೊತೆ ಅಭಿಮಾನಿಗಳು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದಾರೆ. ಅನುಷಾ ಅವರ ಇನ್ಸ್ಟಾಗ್ರಾಂ ಪೋಸ್ಟ್ಗೆ ಅಭಿಮಾನಿಗಳು, ‘ಕುಣಿಗಲ್ ಕ್ವೀನ್’ ‘ಕ್ರಶ್ ಆಫ್ ಕರ್ನಾಟಕ’ ‘ಕುಣಗಲ್ಗೆ ಸ್ವಾಗತ’ ಎಂದೆಲ್ಲಾ ಕಮೆಂಟ್ ಮಾಡಿದ್ದಾರೆ.

ಉತ್ಸವದ ಕೊನೆಯ ದಿನದ ಕಿಚ್ಚ ಸುದೀಪ್, ಗಾಯಕ ಚಂದನ್ ಶೆಟ್ಟಿ, ಅನು ಪ್ರಭಾಕರ್, ಡಾಲಿ ಧನಂಜಯ್, ಜೈದ್ ಖಾನ್, ನೆನಪಿರಲಿ ಪ್ರೇಮ್, ಆರಾಧನಾ ರಾಮ್ ಸೇರಿ ಅನೇಕರು ಭಾಗಿಯಾಗಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.