ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಪತ್‌ನಲ್ಲಿ ಬೈಕರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ಕೃತಿ ಸನೊನ್

Last Updated 12 ನವೆಂಬರ್ 2021, 6:57 IST
ಅಕ್ಷರ ಗಾತ್ರ

ಬೆಂಗಳೂರು: ‘ಮಿಮಿ’ ಚಿತ್ರದಲ್ಲಿ ಬಾಡಿಗೆ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದ ನಟಿ ಕೃತಿ ಸನೊನ್, ಈ ಬಾರಿ ‘ಗಣಪತ್’ ಚಿತ್ರದಲ್ಲಿ ಬೈಕರ್ ಆಗಿದ್ದಾರೆ.

ಗಣಪತ್ ಚಿತ್ರದ ಪಾತ್ರದ ಕುರಿತು ಕಿರು ವಿಡಿಯೊ ಒಂದನ್ನು ಕೃತಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ಈವರೆಗೆ ಕೌಟುಂಬಿಕ ಹಿನ್ನೆಲೆಯುಳ್ಳಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಕೃತಿ, ಈ ಬಾರಿ ಆಕ್ಷನ್ ಚಿತ್ರದಲ್ಲಿ ಬೈಕರ್ ಪಾತ್ರದ ಮೂಲಕ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.

ಜಾಸಿ ಹೆಸರಿನ ಪಾತ್ರವನ್ನು ಕೃತಿ ನಿರ್ವಹಿಸಲಿದ್ದು, ಇಂಗ್ಲೆಂಡ್‌ನಲ್ಲಿ ಚಿತ್ರೀಕರಣ ನಡೆಯಲಿದೆ. ವಿವಿಧ ಆ್ಯಕ್ಷನ್ ದೃಶ್ಯಗಳು ಇರಲಿವೆ ಎಂದು ಕೃತಿ ಹೇಳಿದ್ದಾರೆ.

ಡಿಸೆಂಬರ್ 23, 2022ರಂದು ಗಣಪತ್ ಚಿತ್ರ ತೆರೆಕಾಣಲಿದೆ. ಹೀಗಾಗಿ ಚಿತ್ರೀಕರಣದಲ್ಲಿ ತಂಡ ನಿರತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT