ಅಧೀರ ಸಂತು ನಿರ್ಮಿಸಿ, ನಿರ್ದೇಶಿಸಿರುವ ‘ಓ ಏ ಲಡ್ಕಿ’ ಆಲ್ಬಂ ಸಾಂಗ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ನಟಿ ರಾಗಿಣಿ ದ್ವಿವೇದಿ ಹಾಡನ್ನು ಬಿಡುಗಡೆಗೊಳಿಸಿ ತಂಡಕ್ಕೆ ಶುಭ ಹಾರೈಸಿದರು.
‘ಹಾಡು ಸೊಗಸಾಗಿದೆ. ನಿರ್ದೇಶಕರ ವಿಷನ್ ತೆರೆಯ ಮೇಲೆ ಕಾಣುತ್ತಿದೆ. ಉತ್ತಮ ಸ್ಥಳಗಳಲ್ಲಿ ಚಿತ್ರೀಕರಣ ಮಾಡಿದ್ದಾರೆ’ ಎಂದರು ರಾಗಿಣಿ.
ಉಗ್ರಂ ರವಿ ಖಳನಾಯಕನಾಗಿ ನಟಿಸಿದ್ದಾರೆ. ವಿದೇಶಿ ಯುವತಿಯಾಗಿ ಅಮೃತ, ಡೆಲಿವರಿ ಬಾಯ್ ಆಗಿ ಸಮೀರ್ ನಗರದ್ ಅಭಿನಯಿಸಿದ್ದಾರೆ. ಎಂ.ಎಸ್.ತ್ಯಾಗರಾಜ್ ಈ ಹಾಡಿಗೆ ಸಂಗೀತ ನೀಡಿದ್ದು, ಎಸ್.ಹಾಲೇಶ್ ಛಾಯಾಚಿತ್ರಗ್ರಹಣವಿದೆ.
‘ನಾನು ಉದ್ಯಮಕ್ಕೆ ಹೊಸಬನೇನಲ್ಲ. ಸಾಕಷ್ಟು ಚಿತ್ರಗಳಲ್ಲಿ ಕೆಲಸ ಮಾಡಿರುವೆ. ಉಪೇಂದ್ರ ಅವರ ಸಿನಿಮಾ ಮಾಡಬೇಕಿತ್ತು. ಕಾರಣಾಂತರಗಳಿಂದ ನಿಂತಿದೆ’ ಎಂದು ಸಂತು ಹೇಳಿದರು.