ಹೆಚ್ಚೂ ಕಮ್ಮಿ ಹತ್ತು ವರ್ಷಗಳ ಹಿಂದೆ ತೆರೆಗೆ ಬಂದಿದ್ದ ‘ಲವ್ ಆಜ್ ಕಲ್‘ ಒಂದು ಸೂಪರ್ ಹಿಟ್ ಸಿನಿಮಾ. ಈಗ ಅದರ ಸಿಕ್ವೆಲ್ ನಿರ್ಮಾಣವಾಗುತ್ತಿದೆ. ಬಾಲಿವುಡ್ನ ಕ್ರಿಯಾಶೀಲ ನಿರ್ದೇಶಕ ಇಮ್ತಿಯಾಜ್ ಅಲಿಯೇ ಈ ಸಿಕ್ವೆಲ್ ನಿರ್ದೇಶಿಸುತ್ತಿದ್ದಾರೆ.

ಸೈಫ್ ಅಲೀ ಖಾನ್ ಮತ್ತು ದೀಪಿಕಾ ಪಡುಕೋಣೆ ಆ ‘ಲವ್ ಆಜ್ ಕಲ್’ ಚಿತ್ರದ ಲೀಡ್ ರೋಲ್ನಲ್ಲಿದ್ದರು. ಇದೀಗ ಸಿಕ್ವೆಲ್ನಲ್ಲಿ ಕಾರ್ತಿಕ್ ಆರ್ಯನ್ ಮತ್ತು ಸಾರಾ ಅಲೀ ಖಾನ್ ಜೋಡಿಯಾಗಲಿದ್ದಾರೆ.

ವಿಶೇಷವೆಂದರೆ ಚಿತ್ರದಲ್ಲಿ ಕಾರ್ತಿಕ್ ಆರ್ಯನ್ ತಂದೆಯ ಪಾತ್ರಕ್ಕೆ ಸೈಫ್ ಅಲೀ ಖಾನ್ ಅವರನ್ನು ಇಮ್ತಿಯಾಜ್ ಅಲೀ ಆಯ್ಕೆ ಮಾಡಿಕೊಂಡಿದ್ದರು. ಆ ಆಹ್ವಾನವನ್ನು ಸೈಫ್ ಅಲೀ ಖಾನ್ ನಯವಾಗಿಯೇ ತಿರಸ್ಕರಿಸಿದ್ದಾರೆ. ಈ ಇಡೀ ವರ್ಷ ತುಂಬ ಬ್ಯುಸೀ ಶೆಡ್ಯೂಲ್ ಇರುವುದಾಗಿ ಸಬೂಬು ಹೇಳಿದ್ದಾರೆ.

ಇನ್ನೂ ವಿಶೇಷವೆಂದರೆ, ಸಿಕ್ವೆಲ್ನ ನಾಯಕಿ ಸಾರಾ ಬೇರಾರೂ ಅಲ್ಲ, ಸೈಫ್ ಅಲೀ ಖಾನ್ನ ಸ್ವಂತ ಮಗಳು ಅರ್ಥಾತ್ ಪಟೌಡಿ ಖಾನ್ದಾನಿನ ಮೊದಲ ಸೊಸೆ ಅಮೃತಾ ಸಿಂಗ್ (ಸೈಫ್ ಅಲೀ ಖಾನ್ ಮೊದಲ ಬೇಗಂ) ಮಗಳು. ಈಗ ಈ ತಾರಾ ಜೋಡಿ ಬೇರೆಯಾಗಿದ್ದು ಹಳೆಯ ಸುದ್ದಿ. ಕಾರ್ತಿಕ್ ಆರ್ಯನ್ ಇದೀಗ ಸೈಫ್ಗೆ ಭಾವೀ ಅಳಿಯ!

ಸಾರಾ ಅಲೀ ಖಾನ್ ಈತನನ್ನು ಕಾಫಿ ವಿತ್ ಕರಣ್ ಶೋನಲ್ಲಿ ಕಂಡಾಕ್ಷಣವೇ ಫಿದಾ ಆದವಳು. ಇಬ್ಬರೂ ಲವ್ವೀ ಡವ್ವೀ ಅಂತ ಹಾಡಿಕೊಂಡಿರುತ್ತಾರೆ. ಬಹುಶಃ ಇದು ಸೈಫ್ಗೆ ಮುಜುಗರವಾಯಿತೊ ಏನೋ..

ಬ್ಲಾಕ್ಬಸ್ಟರ್ ಶೋ ‘ಸೇಕ್ರಿಡ್ ಗೇಮ್ಸ್’ನ ಎರಡನೇ ಸೀಜನ್ ಮತ್ತು ಇತರ ನಾಲ್ಕು ಚಿತ್ರಗಳನ್ನು ಈಗಾಗಲೇ ಒಪ್ಪಿಕೊಂಡಿರುವ ಸೈಫ್ ಅಲೀ ಖಾನ್ ಈ ವರ್ಷಪೂರ್ತಿ ಬ್ಯೂಸಿ ಆಗಿರುವುದು ಸುಳ್ಳೇನೂ ಅಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.