ಬೆಂಗಳೂರು: 2019ರಲ್ಲಿ ಏಷ್ಯನ್ ಸಿನಿಮಾಸ್ ಜೊತೆಗಿನ ಒಡಂಬಡಿಕೆ ಮೂಲಕ ಮಲ್ಟಿಪ್ಲೆಕ್ಸ್ ಉದ್ಯಮಕ್ಕೆ ಕಾಲಿಟ್ಟಿರುವ ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಮಹೇಶ್ ಬಾಬು, ಬೆಂಗಳೂರಿನಲ್ಲಿ ಎಎಂಬಿ ಸಿನಿಮಾಸ್ ಅನ್ನು ಆರಂಭಿಸುತ್ತಿದ್ದಾರೆ. ಐತಿಹಾಸಿಕ ಕಪಾಲಿ ಚಿತ್ರಮಂದಿರವಿದ್ದ ಸ್ಥಳದಲ್ಲೇ ಮಲ್ಟಿಪ್ಲೆಕ್ಸ್ ಆರಂಭಿಸುತ್ತಿದ್ದಾರೆ. ಈ ಕಂಪನಿಯ ಮೊದಲ ಮಲ್ಟಿಪ್ಲೆಕ್ಸ್ ಹೈದಾರಾಬಾದ್ನಲ್ಲಿದ್ದು, ಎರಡನೇ ಪ್ರಾಜೆಕ್ಟ್ ಇದಾಗಿದೆ.

ಬೆಂಗಳೂರಿನ ಈ ಮಲ್ಟಿಪ್ಲೆಕ್ಸ್ಗೆ ‘AMB Cinemas Kapali’ ಎಂದೇ ಹೆಸರಿಡಲಾಗಿದ್ದು, ಡಿಸೆಂಬರ್ 16ರಂದು ಗ್ರ್ಯಾಂಡ್ ಓಪನಿಂಗ್ ಆಗಲಿದೆ ಎಂದು ಎಎಂಬಿ ಸ್ಟುಡಿಯೋಸ್ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ.

ಇದು ದಕ್ಷಿಣ ಭಾರತದ ಮೊದಲ ಡಾಲ್ಬಿ ಸಿನಿಮಾ ಸ್ಕ್ರೀನ್ ಒಳಗೊಂಡಿರುವ ಮಲ್ಟಿಪ್ಲೆಕ್ಸ್ ಆಗಲಿದೆ. ಅಲ್ಲದೆ, ದೇಶದಲ್ಲೇ ಎರಡನೆಯದ್ದಾಗಲಿದೆ. ಮೊದಲ ಡಾಲ್ಬಿ ಸಿನಿಮಾ ಸ್ಕ್ರೀನ್ ಪುಣೆಯಲ್ಲಿದೆ.

ಡಾಲ್ಬಿ ಸಿನಿಮಾ ಒಂದು ಪ್ರೀಮಿಯಂ ಲಾರ್ಜ್-ಫಾರ್ಮ್ಯಾಟ್ ಥಿಯೇಟರ್ ಪರಿಕಲ್ಪನೆಯಾಗಿದ್ದು, ಇದು ಡಾಲ್ಬಿ ವಿಷನ್ ಮತ್ತು ಡಾಲ್ಬಿ ಅಟ್ಮಾಸ್ ಅನ್ನು ವಿಶೇಷ ಆಡಿಟೋರಿಯಂ ವಿನ್ಯಾಸದೊಂದಿಗೆ ಸಂಯೋಜಿಸುತ್ತದೆ. ಇದು ಐಮ್ಯಾಕ್ಸ್ ಮತ್ತು ಇತರ ಉನ್ನತ-ಮಟ್ಟದ ಸ್ವರೂಪಗಳಿಗೆ ಪ್ರತಿಸ್ಪರ್ಧಿಯಾಗಿದೆ. ಎಎಂಬಿ ಕಪಾಲಿಯು 60 ಅಡಿ ಅಗಲದ ಡಾಲ್ಬಿ ಸಿನಿಮಾ ಪರದೆ ಸೇರಿದಂತೆ ಒಂಬತ್ತು ಸುಧಾರಿತ ಪರದೆಗಳನ್ನು ಹೊಂದಿರುತ್ತದೆ.

ಈ ವರ್ಷದ ಆರಂಭದಲ್ಲಿ, ಡಾಲ್ಬಿ ಲ್ಯಾಬೋರೇಟರೀಸ್ ಭಾರತದಾದ್ಯಂತ ಆರು ಡಾಲ್ಬಿ ಸಿನಿಮಾ ಪರದೆಗಳನ್ನು ಪರಿಚಯಿಸುವ ಯೋಜನೆಯನ್ನು ಘೋಷಿಸಿತ್ತು. ಪುಣೆಯ ಸಿಟಿ ಪ್ರೈಡ್ ಅನ್ನು ಈ ಮೊದಲೇ ಪ್ರಾರಂಭಿಸಲಾಗಿತ್ತು, ನಂತರ ಎಎಂಬಿ ಸಿನಿಮಾಸ್ ಬೆಂಗಳೂರು ನಂತರ ಹೈದರಾಬಾದ್ನ ಅಲ್ಲು ಸಿನೆಪ್ಲೆಕ್ಸ್, ತಿರುಚಿಯ ಎಲ್ಎ ಸಿನಿಮಾ, ಕೊಚ್ಚಿಯ ಇವಿಎಂ ಸಿನಿಮಾಸ್ ಮತ್ತು ಉಲಿಕ್ಕಲ್ನ ಜಿ ಸಿನೆಪ್ಲೆಕ್ಸ್ನಲ್ಲಿ ಡಾಲ್ಬಿ ಪರದೆಯ ಮಲ್ಟಿಪ್ಲೆಕ್ಸ್ ನಿರ್ಮಿಸುವ ಯೋಜನೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.