ಸೋಮವಾರ, ಆಗಸ್ಟ್ 2, 2021
20 °C

ಪತ್ನಿ ಆತ್ಮಹತ್ಯೆ ಪ್ರಕರಣ: ಮಲಯಾಳಂ ನಟ ಉನ್ನಿ ದೇವ್‌ ಬಂಧನ

ಪಿಟಿಐ Updated:

ಅಕ್ಷರ ಗಾತ್ರ : | |

ತಿರುವನಂತಪುರ: ಮಲಯಾಳಂ ನಟ ಉನ್ನಿ ದೇವ್‌ ಅವರನ್ನು ಅವರ ಪತ್ನಿ ಪ್ರಿಯಾಂಕಾ ಅವರ ಸಾವಿನ ಪ್ರಕರಣದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಲ್ಲಿನ ಶಾಲೆಯೊಂದರಲ್ಲಿ ದೈಹಿಕ ಶಿಕ್ಷಣ ಶಿಕ್ಷಕಿಯಾಗಿದ್ದ ಪ್ರಿಯಾಂಕಾ, ತನ್ನ ಗಂಡನ ವಿರುದ್ಧ ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಿಸಿದ ಮರು ದಿನ (ಮೇ 12) ವೆಂಬಾಯಂನಲ್ಲಿ ಇರುವ ತಮ್ಮ ಮನೆಯ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

ಪೊಲೀಸರು ಉನ್ನಿ ದೇವ್‌ ಅವರನ್ನು ಎರ್ನಾಕುಲಂ ಜಿಲ್ಲೆಯ ಅವರ ಮನೆಯಲ್ಲಿ ವಶಕ್ಕೆ ತೆಗೆದುಕೊಂಡಿದ್ದಾರೆ. ಅವರು ಮಲಯಾಳಂನ ಹಿರಿಯ ನಟ, ದಿವಂಗತ ರಾಜನ್‌ ಪಿ. ದೇವ್‌ ಅವರ ಪುತ್ರ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು