ಶುಕ್ರವಾರ, ಸೆಪ್ಟೆಂಬರ್ 24, 2021
21 °C

ವಿವಾದಕ್ಕೆ ಗುರಿಯಾದ ಮಂಗ್ಲಿಯ ‘ಮೈಸಮ್ಮ ದೇವಿ‘ ಹಾಡು

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ದರ್ಶನ್ ನಟನೆಯ 'ರಾಬರ್ಟ್' ಸಿನಿಮಾ ಕನ್ನಡ ಸೇರಿದಂತೆ ತಮಿಳು, ತೆಲುಗು ಭಾಷೆಯಲ್ಲೂ ತೆರೆಕಂಡಿತ್ತು. ತೆಲುಗು ಅವತರಿಣಿಕೆಯಲ್ಲಿನ 'ಕಣ್ಣೇ ಅಧಿರಿಂದಿ' ಹಾಡು ಮಾಸ್‌ ಹಿಟ್‌ ಆಗಿತ್ತು. ಈ ಹಾಡಿನ ಗಾಯಕಿ ಮಂಗ್ಲಿ ಇದೀಗ ವಿವಾದಕ್ಕೆ ಕಾರಣರಾಗಿದ್ದಾರೆ.

ಜನಪದ ಹಾಗೂ ಸಿನಿಮಾ ಹಾಡುಗಳ ಮೂಲಕ ತೆಲಂಗಾಣ ಹಾಗೂ ಆಂಧ್ರದಲ್ಲಿ ಮಂಗ್ಲಿ ಸಾಕಷ್ಟು ಜನಪ್ರಿಯರಾಗಿದ್ದಾರೆ. ಇದೀಗ ಅವರು ಹಾಡಿರುವ ‘ಮೈಸಮ್ಮ‘ ದೇವಿಯ ಹಾಡಿನಿಂದ ವಿವಾದಕ್ಕೆ ಗುರಿಯಾಗಿದ್ದಾರೆ.

ಆ ಹಾಡಿನಲ್ಲಿ ಮೈಸಮ್ಮ ದೇವಿಗೆ ಅವಮಾನ ಮಾಡಲಾಗಿದೆ. ಹಾಗೇ ಹಾಡಿನಲ್ಲಿ ಆಫ್ರಿಕಾ ಮೂಲದ ವ್ಯಕ್ತಿಯನ್ನು ತೋರಿಸಲಾಗಿದೆ, ಕೂಡಲೇ ಮಂಗ್ಲಿ ‘ಮೈಸಮ್ಮ‘ ದೇವಿಯ ಭಕ್ತರ ಕ್ಷಮೆಯಾಚಿಸಬೇಕು ಎಂದು ಮೈಸಮ್ಮ ಒಕ್ಕಲಿನವರು ಆಗ್ರಹಿಸಿದ್ದಾರೆ.

ಮೈಸಮ್ಮ ದೇವಿಯ ಜನಪದ ಹಾಡು ಇರುವುದೇ ಬೇರೆ, ಆದರೆ ಮಂಗ್ಲಿ ತೋರಿಸಿರುವುದೇ ಬೇರೆ ಎಂದು ನೆಟ್ಟಿಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಭಕ್ತಿ ಹೆಸರಿನಲ್ಲಿ ದೇವತೆಗಳನ್ನು ಅಪಹಾಸ್ಯ ಮಾಡಬೇಡಿ ಎಂದು ಕಿವಿ ಮಾತು ಹೇಳಿದ್ದಾರೆ.

 

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು