ಮಂಗಳವಾರ, ಸೆಪ್ಟೆಂಬರ್ 28, 2021
25 °C
ಸಿನಿರಂಗದ ಪುನಶ್ಚೇತನಕ್ಕಾಗಿ ಕಾಲಿವುಡ್‌ ದಿಗ್ಗಜರ ಕಾಣಿಕೆ

‘ನವರಸ’ ಬಿಡುಗಡೆಯೇ ರಸವತ್ತಾದ ಘಳಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊನೆಗೂ ಬಹು ನಿರೀಕ್ಷಿತ ಸರಣಿ ‘ನವರಸ’ ಶುಕ್ರವಾರ ಮಧ್ಯಾಹ್ನ 12.30ಕ್ಕೆ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ. ‘ನವರಸ’ದ ಸಾರವನ್ನು ಸಿನಿರಸಿಕರಿಗೆ, ಸಂಗೀತಪ್ರಿಯರಿಗೆ ತಲುಪಿಸುವ ಉದ್ದೇಶದಿಂದ ನೆಟ್‌ಫ್ಲಿಕ್ಸ್‌ ಜಾಗತಿಕ ಅಭಿಮಾನಿಗಳಿಗಾಗಿ ವಿಶೇಷ ಆನ್‌ಲೈನ್‌ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. 

‘ಸಿಂಫೊನಿ ಆಫ್‌ ಇಮೋಷನ್ಸ್‌’ ಹೆಸರಿನ ಸಂಗೀತ, ಮಾತು ಭಾವನೆಗಳ ಸಂಗಮವನ್ನು ಪ್ರಸಾರ ಮಾಡಿದೆ. ಯುಟ್ಯೂಬ್‌ನಲ್ಲಿ ಇದು ಟ್ರೆಂಡ್‌ ಆಗಿದೆ. 

‘ನವರಸ’ ತಮಿಳು ಚಿತ್ರರಂಗದ ದಿಗ್ಗಜರ ಸಮಾಗಮದ ವೇದಿಕೆಯಾಗಿ ಮೂಡಿಬಂದಿದೆ. ದಿವ್ಯದರ್ಶಿನಿ ಅವರು ‘ಸಿಂಫೊನಿ ಆಫ್‌ ಇಮೋಷನ್ಸ್‌’ ಕಾರ್ಯಕ್ರಮಕ್ಕೆ ತಮ್ಮ ಪುಟ್ಟ ನಿರೂಪಣೆಯ ಮೂಲಕ ಚಾಲನೆ ನೀಡಿದರು. 2 ಗಂಟೆ 20 ನಿಮಿಷಗಳ ಈ ಕಾರ್ಯಕ್ರಮ ಇಡೀ ‘ನವರಸ’ದ ಪ್ರೋಮೋದಂತೆ ಮೂಡಿಬಂದಿದೆ. 

ಚಲನಚಿತ್ರ ನಿರ್ಮಾಪಕರಾದ ಮಣಿರತ್ನಂ ಮತ್ತು ಜಯೇಂದ್ರ ಪಂಚಪಕೇಸನ್ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ಮೂಡಿಬಂದಿದೆ.

ಕೋವಿಡ್‌ –19ನಿಂದಾಗಿ ಸಂಕಷ್ಟಕ್ಕೊಳಗಾದ ಸಂಗೀತಗಾರರು, ತಂತ್ರಜ್ಞರ ಬದುಕನ್ನು ಮತ್ತೆ ಕಟ್ಟಿಕೊಡಲು ಈ ಕಾರ್ಯಕ್ರಮದಿಂದ ಸಂಗ್ರಹವಾಗುವ ನಿಧಿಯನ್ನು ಬಳಸಿಕೊಳ್ಳಲಾಗುತ್ತದೆ. ಹಾಗಾಗಿ ಈ ಕಾರ್ಯಕ್ರಮದಲ್ಲಿ ಎಲ್ಲ ಪ್ರಖ್ಯಾತ ಸಂಗೀತಗಾರರು ಸೇರಿದ್ದಾರೆ. 

ಆರ್ಥಿಕ ಹಾಗೂ ಆರೋಗ್ಯ ಸಂಕಷ್ಟಕ್ಕೊಳಗಾದ ಸಿನಿಮಂದಿಗೆ ‘ನವರಸ’ ಮೂಲಕ ಹೆಚ್ಚು ಚಿತ್ರಗಳನ್ನು ನಿರ್ಮಿಸಿ ಜನರಿಗೆ ತಲುಪಿಸಬೇಕು. ಒಂದೆಡೆ ಚಿತ್ರರಂಗಕ್ಕೂ ಪುನಶ್ಚೇತನ ಸಿಗುತ್ತದೆ. ಮತ್ತೊಂದೆಡೆ ನೂರಾರು ಮಂದಿಯ ಬದುಕು ಕಟ್ಟಿಕೊಟ್ಟಂತಾಗುತ್ತದೆ. ವಾಸ್ತವವಾಗಿ ಈ ಬೃಹತ್‌ ಯೋಜನೆ ‘ನವರಸ’ದ ಮೂಲಕ ನಾವು 10ನೆಯ ರಸವನ್ನು ಕಂಡುಕೊಳ್ಳಬೇಕಿದೆ ಎಂದು ನಿರ್ಮಾಪಕ ಮಣಿರತ್ನಂ ಹಾಗೂ ಜಯೇಂದ್ರ ಭರವಸೆಯ ಮಾತುಗಳನ್ನಾಡಿದ್ದಾರೆ.  

ಕೊಳಲುವಾದಕ ನವೀನ್ ಕುಮಾರ್, ಅಭಿಷೇಕ್ ಕುಮಾರ್, ಕೆಸಿ ಲಾಯ್, ವಿವೇಕ್ ರಾಜಗೋಪಾಲನ್, ಪಿಯೂಷ್ ರಜನಿ ಮತ್ತು ದಿ ಫೈನ್ ಟ್ಯೂನರ್ಸ್, ಮಹೇಶ್ ರಘವನ್, ನಂದಿನಿ ಶಂಕರ್, ಸಾಶಾ ತಿರುಪತಿ, ಅನಂತ ಆರ್ ಕೃಷ್ಣನ್, ರಿಕಿ ಕೇಜ್, ಕುನಾಲ್ ನಾಯಕ್ ಮತ್ತು 50 ಸದಸ್ಯರು ವಾದ್ಯವೃಂದದಲ್ಲಿದ್ದಾರೆ. ಸಂಗೀತದ ನೇತೃತ್ವ ಎ.ಆರ್‌.ರೆಹಮಾನ್‌ ಅವರದ್ದು.  

ಪುಟ್ಟ ಆನ್‌ಲೈನ್‌ ಸಂವಾದವೂ ನಡೆಯಿತು. ‘ನವರಸ’ದ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ 46 ಮಂದಿ ತೆರೆಯ ಮೇಲೆ ಕಾಣಿಸಿಕೊಂಡು ಅನುಭವ ಹಂಚಿಕೊಂಡರು. 

ಈ ಆರಂಭಿಕ ಸಮಾರಂಭವನ್ನು ಯುಟ್ಯೂಬ್‌ನಲ್ಲಿ ಮೂರು ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ.

ಕಾರ್ಯಕ್ರಮ ವೀಕ್ಷಿಸಲು ಲಿಂಕ್‌: youtube.com/watch?v=d3OBzM4oG30

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು