ಸುದೀಪ್ ನಟನೆಯ ‘ಮಾರ್ಕ್’ ಚಿತ್ರದ ‘ಮಸ್ತ್ ಮಲೈಕಾ‘ ಹಾಡು ಸೋಮವಾರ ಬಿಡುಗಡೆಯಾಗಿದೆ. ಈಗಾಗಲೇ ಈ ಹಾಡು ಟ್ರೆಂಡ್ ಸೃಷ್ಟಿಸಿದೆ. ‘ಮಸ್ತ್ ಮಲೈಕಾ‘ ಹಾಡನ್ನು ಸುದೀಪ್ ಪುತ್ರಿ ಸಾನ್ವಿ ಹಾಡಿದ್ದರೆ, ನಿಶ್ವಿಕಾ ನಾಯ್ಡು ಸೇರಿದಂತೆ ಹಲವರು ಹೆಜ್ಜೆ ಹಾಕಿದ್ದಾರೆ.
.25ನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿರುವ ನಟ ಉಪೇಂದ್ರ, ಪ್ರಿಯಾಂಕಾ.
‘ಮಸ್ತ್ ಮಲೈಕಾ‘ ಹಾಡಿನ ಕುರಿತು ಅಭಿಪ್ರಾಯ ಹಂಚಿಕೊಂಡಿರುವ ಸಾನ್ವಿ ಸುದೀಪ್, ‘ನಾನು ಹಾಡಿದ ಮೊದಲ ಕನ್ನಡ ಹಾಡು ಬಿಡುಗಡೆಯಾಗಿದೆ. ಮುಂದಿನ ಎಲ್ಲಾ ಯೋಜನೆಗಳಿಗೂ ಹೀಗೆ ಪ್ರೋತ್ಸಾಹ ನೀಡಿ’ ಎಂದಿದ್ದಾರೆ.

ಈ ಹಾಡಿನ ಬಗ್ಗೆ ಬರೆದುಕೊಂಡಿರುವ ನಟಿ ನಿಶ್ವಿಕಾ ನಾಯ್ಡು ಅವರು, ‘ಈ ಹಾಡಿಗೆ ತೋರಿಸಿದ ಪ್ರೀತಿಯನ್ನು ಎಂದೂ ಮರೆಯಲು ಸಾಧ್ಯವಿಲ್ಲ. ಈ ಹಾಡಿನಲ್ಲಿ ಮಾಡುತ್ತಿರುವ ಎಲ್ಲಾ ರೀಲ್ಗಳನ್ನು ನಾನು ಪ್ರಶಂಸಿಸುತ್ತೇನೆ. ಈ ಐಕಾನಿಕ್ ನೃತ್ಯ ಸಂಯೋಜನೆ, ಸಂಗೀತಕ್ಕಾಗಿ, ಚಿತ್ರತಂಡಕ್ಕೆ ಧನ್ಯವಾದಗಳನ್ನು ತಿಳಿಸುತ್ತೇನೆ‘ ಎಂದು ಬರೆದುಕೊಂಡು ‘ಮಸ್ತ್ ಮಲೈಕಾ’ ಹಾಡಿಗೆ ಹೆಜ್ಜೆ ಹಾಕಿದ್ದಾರೆ.
.Oscar 2026: ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದ ಜಾನ್ವಿ ಕಪೂರ್ ನಟನೆಯ ಹೋಮ್ಬೌಂಡ್ .
'ಸತ್ಯಜ್ಯೋತಿ ಫಿಲ್ಫ್' ಮತ್ತು 'ಕಿಚ್ಚ ಕ್ರಿಯೇಷನ್ಸ್' ಮೂಲಕ 'ಮಾರ್ಕ್' ಸಿನಿಮಾ ನಿರ್ಮಾಣಗೊಂಡಿದೆ. ಮಾರ್ಕ್ ಚಿತ್ರವು ಡಿಸೆಂಬರ್5ರಂದು ಬಿಡುಗಡೆಯಾಗಲಿದೆ.

ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ, ಶೇಖರ್ ಚಂದ್ರ ಅವರ ಛಾಯಾಚಿತ್ರವಿದೆ. ತಮಿಳು ಚಿತ್ರರಂಗದ ಖ್ಯಾತ ನಟ ಯೋಗಿಬಾಬು, ಮಲಯಾಳದ ಶೈನ್ ಟಾಮ್ ಚಾಕೋ ಸೇರಿದಂತೆ ಹಲವು ಪ್ರಮುಖ ಕಲಾವಿದರು ಸಿನಿಮಾದಲ್ಲಿ ನಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.