ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಸ್‌ ಸಿನಿಮಾಗಳ ಕೇರಾಫ್‌ ಅಡ್ರಸ್‌ ಬಾಲಯ್ಯ: 2 ಕೋಟಿ ವೀಕ್ಷಣೆ ಪಡೆದ ‘ಅಖಂಡ’

Last Updated 22 ನವೆಂಬರ್ 2021, 11:03 IST
ಅಕ್ಷರ ಗಾತ್ರ

ತೆಲುಗಿನಲ್ಲಿ ಮಾಸ್‌ ಸಿನಿಮಾಗಳಿಗೆ ಕೇರಾಫ್‌ ಅಡ್ರಸ್‌ ಅಂದ್ರೆ ಬಾಲಯ್ಯ ಅಲಿಯಾಸ್‌ ನಂದಮೂರಿ ಬಾಲಕೃಷ್ಣ. ಈ ಬಾಲಯ್ಯ ಮತ್ತೊಂದು ಮಾಸ್‌ ಸಿನಿಮಾ ಮೂಲಕ ಅಭಿಮಾನಿಗಳನ್ನು ರಂಜಿಸಲಿದ್ದಾರೆ.

ಬಾಲಯ್ಯ 'ಅಖಂಡ' ಆಗಿ ಬೆಳ್ಳಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಈ ಸಿನಿಮಾದ ಬಗ್ಗೆ ಟಾಲಿವುಡ್‌ನಲ್ಲಿ ಟ್ರೆಂಡ್‌ ಶುರುವಾಗಿದೆ. ಈ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.

ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿ ವಾರದಲ್ಲಿ 2 ಕೋಟಿಗೂ ಹೆಚ್ಚು ವೀಕ್ಷಣೆ ಪಡೆದಿದೆ ಎಂದು ಚಿತ್ರತಂಡ ಹೇಳಿಕೆ ನೀಡಿದೆ. ಇದು ಬಾಲಕೃಷ್ಣ ಸಿನಿಮಾ ಇತಿಹಾಸದಲ್ಲೇ ಹೊಸ ಮೈಲಿಗಲು ಎಂದು ಚಿತ್ರತಂಡ ತಿಳಿಸಿದೆ.

ಖ್ಯಾತ ನಿರ್ದೇಶಕ ಬಾಯಿಪಾಟು ಸೀನು ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ರವೀಂದ್ರ ರೆಡ್ಡಿ ನಿರ್ಮಾಣ ಮಾಡುತ್ತಿದ್ದಾರೆ.

ಪ್ರಜ್ಞ್ಯಾ ಜೈಸ್ವಾಲ್ ನಾಯಕಿಯಾದರೆ, ಶ್ರೀಕಾಂತ್‌ ಖಳನಾಯಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಈ ಸಿನಿಮಾ ಡಿಸೆಂಬರ್‌ 2ರಂದು ವಿಶ್ವದಾದ್ಯಂತ ಸಿನಿಮಾ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT