ಭಾನುವಾರ, ಸೆಪ್ಟೆಂಬರ್ 19, 2021
25 °C

ಜನವರಿ 13ಕ್ಕೆ ವಿಜಯ್ ಅಭಿನಯದ ‘ಮಾಸ್ಟರ್’ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾಲಿವುಡ್‌ನ ಖ್ಯಾತ ನಟ ದಳಪತಿ ವಿಜಯ್ ನಟನೆಯ ಬಹುನಿರೀಕ್ಷಿತ ‘ಮಾಸ್ಟರ್’ ಚಿತ್ರದ ಬಿಡುಗಡೆ ದಿನಾಂಕ ಫಿಕ್ಸ್ ಆಗಿದೆ. 2021ರ ಜನವರಿ 13ಕ್ಕೆ ಈ ಸಿನಿಮಾ ಬಿಡುಗಡೆಯಾಗುತ್ತಿದೆ. ಚಿತ್ರದ ಹೊಸ ಪೋಸ್ಟರ್‌ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಚಿತ್ರತಂಡ ಈ ವಿಷಯವನ್ನೂ ಬಹಿರಂಗ ಪಡಿಸಿದೆ. ‌

ಹೊಸ ಪೋಸ್ಟರ್‌ನಲ್ಲಿ ದಳಪತಿ ವಿಜಯ್‌ ಹಾಗೂ ವಿಜಯ್‌ ಸೇತುಪತಿ ಇಬ್ಬರು ಹೊಡೆದಾಡಲು ರೆಡಿಯಾಗಿ ನಿಂತಿರುವ ಎದುರಾಳಿಗಳಂತಿದ್ದಾರೆ. ಟೀಸರ್‌ನಲ್ಲಿ ನೋಡಿರುವಂತೆ ಸಿನಿಮಾದಲ್ಲಿ ಇಬ್ಬರೂ ವಿಜಯ್‌ಗಳು ಎದುರಾಳಿಗಳಂತೆ ಕಾದಾಡಲಿದ್ದಾರೆ.‌‌

ಕೆಲದಿನಗಳ ಹಿಂದೆ ವಿಜಯ್‌ ತಮಿಳುನಾಡು ಮುಖ್ಯಮಂತ್ರಿಯನ್ನು ಭೇಟಿ ಮಾಡಿದ್ದರು, ಅಲ್ಲದೇ ಥಿಯೇಟರ್‌ನಲ್ಲಿ ಸಿನಿಮಾ ಬಿಡುಗಡೆ ಕುರಿತಾಗಿ ಸಹಕಾರ ಕೇಳಿದ್ದರು. ಆದಾದ ನಂತರ ಸಿನಿಮಾ ಬಿಡುಗಡೆ ದಿನಾಂಕವನ್ನು ಗೊತ್ತು ಮಾಡಲಾಗಿದೆ. ಇತ್ತೀಚೆಗೆ ಸೆನ್ಸಾರ್‌ ಮಂಡಳಿಯಿಂದ ಯು/ಎ ಪ್ರಮಾಣ ಪಡೆದುಕೊಂಡಿತ್ತು ಮಾಸ್ಟರ್ ಸಿನಿಮಾ. ಇದು 2021ರಲ್ಲಿ ತಮಿಳಿನಲ್ಲಿ ಬಿಡುಗಡೆಯಾಗುತ್ತಿರುವ ಮೊದಲ ಬಿಗ್‌ಬಜೆಟ್ ಸಿನಿಮಾ.

ಈ ಸಿನಿಮಾಕ್ಕೆ ಲೋಕೇಶ್‌ ಕನಕರಾಜ್‌ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ದಳಪತಿ ವಿಜಯ್‌, ವಿಜಯ್ ಸೇತುಪತಿ ಜೊತೆಗೆ ಮಾಳವಿಕಾ ಮೋಹನ್‌ ಹಾಗೂ ಅರ್ಜುನ್‌ ದಾಸ್‌ ಸೇರಿದಂತೆ ಇನ್ನೂ ಹಲವರು ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು