ಭಾನುವಾರ, ಸೆಪ್ಟೆಂಬರ್ 25, 2022
29 °C
ಸೆಪ್ಟೆಂಬರ್ 16ರಂದು ರಾಷ್ಟ್ರೀಯ ಸಿನಿಮಾ ದಿನ ಎಂದು ಆಚರಿಸಲಾಗುತ್ತದೆ.

ರಾಷ್ಟ್ರೀಯ ಸಿನಿಮಾ ದಿನ | ಸೆ. 16ರಂದು ಮಲ್ಟಿಪ್ಲೆಕ್ಸ್‌ಗಳಲ್ಲಿ ₹75ಕ್ಕೆ ಟಿಕೆಟ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

PV Photo

ಬೆಂಗಳೂರು: ರಾಷ್ಟ್ರೀಯ ಸಿನಿಮಾ ದಿನವಾದ ಸೆಪ್ಟೆಂಬರ್ 16ರಂದು ಮಲ್ಟಿಪ್ಲೆಕ್ಸ್‌ಗಳಲ್ಲಿ ₹75ಕ್ಕೆ ಫಿಲಂ ಟಿಕೆಟ್ ದೊರೆಯಲಿದೆ.

ಮಲ್ಟಿಪ್ಲೆಕ್ಸ್‌ ಅಸೋಶಿಯೇಶನ್ ಆಫ್ ಇಂಡಿಯಾ (ಎಂಎಐ) ಈ ಕುರಿತು ನಿರ್ಧಾರ ಪ್ರಕಟಿಸಿದ್ದು, ಪಿವಿಆರ್, ಐನಾಕ್ಸ್, ಸಿನಿಪಾಲಿಸ್, ಕಾರ್ನಿವಲ್ ಸಹಿತ ವಿವಿಧ ಮಲ್ಟಿಪ್ಲೆಕ್ಸ್‌ಗಳಲ್ಲಿ ರಾಷ್ಟ್ರೀಯ ಸಿನಿಮಾ ದಿನದ ಅಂಗವಾಗಿ ₹75ಕ್ಕೆ ಟಿಕೆಟ್ ವಿತರಿಸಲಾಗುತ್ತದೆ ಎಂದು ಹೇಳಿದೆ.

ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಸಿನಿಮಾ ಮಂದಿರಗಳನ್ನು ಮುಚ್ಚಲಾಗಿತ್ತು. ಲಾಕ್‌ಡೌನ್ ತೆರವಿನ ಬಳಿಕ ಪೂರ್ಣ ಪ್ರಮಾಣದಲ್ಲಿ ಮಲ್ಟಿಪ್ಲೆಕ್ಸ್‌ಗಳು ಕಾರ್ಯನಿರ್ವಹಿಸುತ್ತಿವೆ. ಹೀಗಾಗಿ ಜನರಿಗೆ ಧನ್ಯವಾದ ಹೇಳಲು ಮತ್ತು ಎಲ್ಲ ವರ್ಗದವರು ಮಲ್ಟಿಪ್ಲೆಕ್ಸ್‌ ಸಿನಿಮಾ ಆನಂದಿಸಲು ಟಿಕೆಟ್ ದರದಲ್ಲಿ ವಿನಾಯಿತಿ ನೀಡಲಾಗುತ್ತಿದೆ ಎಂದು ಸಂಸ್ಥೆ ತಿಳಿಸಿದೆ.

ದೇಶದ ಚಿತ್ರರಂಗದ ಮೊದಲಾರ್ಧದಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಹಲವು ಸಿನಿಮಾಗಳು ಉತ್ತಮ ಗಳಿಕೆ ಮಾಡಿದ್ದರೆ, ನಂತರದಲ್ಲಿ ಸಾಧಾರಣ ಪ್ರತಿಕ್ರಿಯೆ ಕಂಡುಬಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು