ಶನಿವಾರ, ಮೇ 28, 2022
24 °C

ಸಮಂತಾ ಜತೆ ವಿಚ್ಛೇದನದ ಬಳಿಕ ಮತ್ತೆ ಸಾಮಾಜಿಕ ತಾಣಕ್ಕೆ ಮರಳಿದ ನಾಗ ಚೈತನ್ಯ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Naga Chaitanya Instagram Post

ಬೆಂಗಳೂರು: ದಕ್ಷಿಣ ಭಾರತ ಚಿತ್ರರಂಗದಲ್ಲಿ ಚರ್ಚೆಗೆ ಗ್ರಾಸವಾಗಿದ್ದ ನಾಗ ಚೈತನ್ಯ- ಸಮಂತಾ ರುತ್ ಪ್ರಭು ವಿಚ್ಛೇದನ ಪ್ರಸಂಗ ಮುಗಿದು ತಿಂಗಳುಗಳೇ ಕಳೆದಿದೆ.

ಈ ಸಂದರ್ಭದಲ್ಲಿ ಸಮಂತಾ, ಸಾಮಾಜಿಕ ತಾಣದಲ್ಲಿ ಸಕ್ರಿಯರಾಗಿದ್ದರೆ, ನಟ ನಾಗ ಚೈತನ್ಯ ಮಾತ್ರ ಇನ್‌ಸ್ಟಾಗ್ರಾಂ ಮತ್ತು ಇತರ ಸಾಮಾಜಿಕ ತಾಣಗಳಿಂದ ದೂರ ಉಳಿದಿದ್ದರು.

ಈಗ ಮತ್ತೆ ನಾಗ ಚೈತನ್ಯ ಅವರು ಇನ್‌ಸ್ಟಾಗ್ರಾಂಗೆ ಮರಳಿದ್ದಾರೆ. ವಿಚ್ಛೇದನ ಬಳಿಕ ಅವರು ಟ್ವಿಟರ್ ಬಳಕೆ ಮಾಡಿದ್ದು ಬಿಟ್ಟರೆ, ಅಭಿಮಾನಿಗಳ ಜತೆ ಸಂವಹನಕ್ಕಾಗಿ ಇನ್‌ಸ್ಟಾಗ್ರಾಂ ಬಳಸುತ್ತಿರಲಿಲ್ಲ.

ಮ್ಯಾಥ್ಯೂ ಮೆನಾಘ್ ಅವರ ಗ್ರೀನ್‌ಲೈಟ್ಸ್ ಪುಸ್ತಕದ ಫೋಟೊ ಒಂದನ್ನು ನಾಗ ಚೈತನ್ಯ ಅವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ಜೀವನಕ್ಕಾಗಿ ಒಂದು ಪ್ರೀತಿಯ ಪತ್ರ, ನಿಮ್ಮ ಜೀವನಕಥೆ ನನಗೂ ದಾರಿದೀಪವಾಗಿದೆ ಎಂದು ನಾಗ ಚೈತನ್ಯ ಅವರು ತಮ್ಮ ಪೋಸ್ಟ್‌ಗೆ ಅಡಿಬರಹ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು