ನಟ ಅಲ್ಲು ಅರ್ಜುನ್ಗೆ ಮಗಳು ಅರ್ಹಾ ಕೋರಿದ ‘ಪ್ರೀತಿಯ ಸ್ವಾಗತ’ ಹೀಗಿತ್ತು ನೋಡಿ..

ನವದೆಹಲಿ: ತೆಲುಗು ನಟ ಅಲ್ಲು ಅರ್ಜುನ್ ಅವರು ವಿದೇಶಿ ಪ್ರವಾಸ ಮುಗಿಸಿ ಭಾರತಕ್ಕೆ ವಾಪಸ್ ಆಗಿದ್ದಾರೆ.
16 ದಿನಗಳ ನಂತರ ಮನೆಗೆ ಮರಳಿದ ಅಲ್ಲು ಅರ್ಜುನ್ ಅವರಿಗೆ ಪತ್ನಿ ಅಲ್ಲು ಸ್ನೇಹಾ ರೆಡ್ಡಿ, ಮಕ್ಕಳಾದ ಅರ್ಹಾ ಹಾಗೂ ಅಯಾನ್ ಪ್ರೀತಿಯಿಂದ ಸ್ವಾಗತಿಸಿದ್ದಾರೆ.
ಮನೆ ಅಂಗಳದಲ್ಲಿ ‘ಸ್ವಾಗತ ನಾನಾ’ (ಅಪ್ಪ) ಎಂದು ಬರೆದಿದ್ದು, ಗುಲಾಬಿ ಹೂಗಳಿಂದ ಅಲಂಕರಿಸಲಾಗಿತ್ತು. ಇದನ್ನು ನೋಡಿ ಅಲ್ಲು ಅರ್ಜುನ್ ಆಶ್ಚರ್ಯ ಚಕಿತರಾಗಿದ್ದಾರೆ.
ಸದ್ಯ ಈ ಫೋಟೊವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಅಲ್ಲು ಅರ್ಜುನ್, ‘16 ದಿನಗಳ ವಿದೇಶಿ ಪ್ರವಾಸ ಮುಗಿಸಿ ವಾಪಸ್ ಬಂದ ನಂತರ ಸಿಕ್ಕ ಸಿಹಿ ಸ್ವಾಗತ’ ಎಂದು ಬರೆದುಕೊಂಡಿದ್ದಾರೆ. ಫೋಟೊದಲ್ಲಿ ಅರ್ಹಾ ಮುದ್ದಾಗಿ ಕಾಣುತ್ತಿದ್ದು, 11 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ.
ಓದಿ... ವಿಡಿಯೊ: ಡ್ಯಾನ್ಸ್ ಮಾಡುವಂತೆ ಬಾಹುಬಲಿ ನಟಿ ತಮನ್ನಾ ಚಾಲೆಂಜ್ ಮಾಡಿದ್ದು ಯಾರಿಗೆ?
ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ’ ಸಿನಿಮಾ ಡಿ.17 ರಂದು ವಿಶ್ವದಾದ್ಯಂತ ಬಿಡುಗಡೆಯಾಗಿತ್ತು. ಸುಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಸದ್ಯ ಯಶಸ್ಸು ಗಳಿಸಿರುವ ಈ ಚಿತ್ರ ಈವರೆಗೆ ₹342 ಕೋಟಿಗೂ ಹೆಚ್ಚು ಹಣ ಗಳಿಸಿದೆ.
ಈ ಸಿನಿಮಾದಲ್ಲಿ ಸಮಂತಾ, ಮೊದಲ ಬಾರಿಗೆ ಐಟಂ ಸಾಂಗ್ನಲ್ಲಿ ಕಾಣಿಸಿಕೊಂಡಿದ್ದು, ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
‘ಹೂ ಅಂತಿಯಾ ಮಾವ.. ಊ ಊ ಅಂತಿಯಾ’ ಹಾಡಿಗೆ ಸಮಂತಾ ಮೈ ಚಳಿ ಬಿಟ್ಟು ಸೊಂಟ ಬಳುಕಿಸಿದ್ದಾರೆ. ಸಿನಿಮಾ ಗೆಲುವಿನಲ್ಲಿ ಈ ವಿಶೇಷ ಹಾಡು ಪ್ರಮುಖ ಪಾತ್ರ ವಹಿಸಿದೆ ಎಂಬುದರಲ್ಲಿ ಎರಡು ಮಾತಿಲ್ಲ.
‘ಪುಷ್ಪ’ ಚಿತ್ರದ ಮುಂದುವರಿದ ಭಾಗ ‘ಪುಷ್ಪ: ದಿ ರೂಲ್’ ಚಿತ್ರದ ಚಿತ್ರೀಕರಣ ಇನ್ನಷ್ಟೇ ಆರಂಭವಾಗಬೇಕಿದ್ದು, ವರ್ಷಾಂತ್ಯದ ವೇಳೆಗೆ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಚಿತ್ರತಂಡ ಹೇಳಿದೆ.
ಓದಿ... ನಟಿ ದಿಶಾ ಮದನ್ ಬೇಬಿ ಬಂಪ್ ವಿಡಿಯೊ ವೈರಲ್: ಅಭಿಮಾನಿಗಳಿಂದ ಮೆಚ್ಚುಗೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.