ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಗರು ನಿರ್ದೇಶಕ ನಂದ ಕಿಶೋರ್ ’ಮೋಹನ್‌ ಲಾಲ್‌‘ಗೆ ಆ್ಯಕ್ಷನ್‌ ಕಟ್‌

Last Updated 1 ಸೆಪ್ಟೆಂಬರ್ 2022, 9:32 IST
ಅಕ್ಷರ ಗಾತ್ರ

ಕನ್ನಡದ ಪೊಗರು ಸಿನಿಮಾ ನಿರ್ದೇಶಕನಂದ ಕಿಶೋರ್,ಮಲಯಾಳಂ ಖ್ಯಾತ ನಟಮೋಹನ್ ಲಾಲ್ ಅವರಿಗೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ.

ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಮಲಯಾಳಂ ಸೂಪರ್‌ ಸ್ಟಾರ್‌ ನಟ ಮೋಹನ್‌ ಲಾಲ್‌ಗೆ ಕನ್ನಡಿಗ ನಂದ ಕಿಶೋರ್‌ ನಿರ್ದೇಶನ ಮಾಡುತ್ತಿರುವುದು ವಿಶೇಷ. ಈ ಸಿನಿಮಾ ಮುಂದಿನ ವರ್ಷ ಜುಲೈ ತಿಂಗಳಲ್ಲಿ ಸೆಟ್ಟೆರಲಿದೆ ಎನ್ನಲಾಗುತ್ತಿದೆ.

ಈ ಬಗ್ಗೆ ಮೋಹನ್‌ ಲಾಲ್‌ ಟ್ವೀಟ್‌ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.‘ಎವಿಎಸ್‌ಸ್ಟುಡಿಯೋಸ್ ನಿರ್ಮಾಣದ ‘ವೃಷಭ’ ಚಿತ್ರಕ್ಕೆ ಸಹಿ ಮಾಡಿದ್ದೇನೆ. ನಂದಕಿಶೋರ್ ನಿರ್ದೇಶಿಸಲಿರುವ ಈ ಸಿನಿಮಾಗೆ ಅಭಿಷೇಕ್ ವ್ಯಾಸ್, ಪ್ರವೀರ್ ಸಿಂಗ್ ಮತ್ತು ಶ್ಯಾಮ್ ಸುಂದರ್ ಬಂಡವಾಳ ಹೂಡಲಿದ್ದಾರೆ. ಇದು ಪಕ್ಕಾ ಕಮರ್ಶಿಯಲ್‌ ಹಾಗೂ ಆ್ಯಕ್ಷನ್ ಚಿತ್ರವಾಗಿದೆ. ನಿಮ್ಮೆಲ್ಲರ ಬೆಂಬಲ ಮತ್ತು ಆಶೀರ್ವಾದ ಬಯಸುತ್ತೇನೆ’ ಎಂದು ಮೋಹನ್ ಲಾಲ್ ಟ್ವೀಟ್ ಮಾಡಿದ್ದಾರೆ.

‘ವೃಷಭ’ ಸಿನಿಮಾದಲ್ಲಿ ತೆಲುಗು, ಮಲಯಾಳಂ ಚಿತ್ರರಂಗದ ಖ್ಯಾತ ಕಲಾವಿದರು ಅಭಿನಯ ಮಾಡುವ ಸಾಧ್ಯತೆ ಹೆಚ್ಚಿದೆ. ಇದರಲ್ಲಿ ಮೋಹನ್‌ ಲಾಲ್‌ ಹಲವು ಶೇಡ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಸಿನಿಮಾ ಬಗ್ಗೆ ಮಾತುಕತೆಗಳು ನಡೆಯುತ್ತಿವೆ ಎಂದು ನಂದ ಕಿಶೋರ್‌ ಆಪ್ತರು ಹೇಳುತ್ತಿದ್ದಾರೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT