ಮಂಗಳವಾರ, 28 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಯಕಿ ನೇಹಾ ಕಕ್ಕರ್ ಪತಿ ರೋಹನ್‌ಪ್ರೀತ್ ಐಫೋನ್, ವಜ್ರದುಂಗುರ ಕಳವು

ಅಕ್ಷರ ಗಾತ್ರ

ಬೆಂಗಳೂರು: ಪ್ರಸಿದ್ಧ ಗಾಯಕಿ ನೇಹಾ ಕಕ್ಕರ್ ಅವರ ಪತಿ ರೋಹನ್‌ಪ್ರೀತ್ ಸಿಂಗ್ ಅವರ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಲಾಗಿದೆ.

ಹಿಮಾಚಲ ಪ್ರದೇಶದ ಮಂಡಿಯಲ್ಲಿ ಹೋಟೆಲ್ ರೂಮ್‌ನಿಂದ ರೋಹನ್ ಅವರ ವಜ್ರದ ಉಂಗುರ, ಐಫೋನ್, ಸ್ಮಾರ್ಟ್‌ವಾಚ್ ಮತ್ತು ನಗದನ್ನು ಕಳವು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರೋಹನ್ ಅವರು ವಾಸವಿದ್ದ ಹೋಟೆಲ್ ರೂಮಿನಿಂದ ಅವರಿಗೆ ಸೇರಿದ್ದ ನಗದು, ವಜ್ರದ ಉಂಗುರ, ಐಫೋನ್ ಮತ್ತು ಸ್ಮಾರ್ಟ್‌ವಾಚ್ ಕಳವಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಮಂಡಿ ಪೊಲೀಸ್ ವರಿಷ್ಠಾಧಿಕಾರಿ ಶಾಲಿನಿ ಅಗ್ನಿಹೋತ್ರಿ ತಿಳಿಸಿದ್ದಾರೆ.

ಡಿಸೆಂಬರ್ 2020ರಲ್ಲಿ ನೇಹಾ ಮತ್ತು ರೋಹನ್‌ಪ್ರೀತ್ ಮದುವೆಯಾಗಿದ್ದಾರೆ.

ರೋಹನ್ ಮತ್ತು ನೇಹಾ ಅವರ ಲಾ ಲಾ ಲಾ ಅಲ್ಬಂ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT